ಕನ್ನಡಪ್ರಭ ವಾರ್ತೆ ಹಾನಗಲ್ಲ
ತಾಲೂಕಿನ ಅರಿಷಣಗುಪ್ಪಿ ಗ್ರಾಮದಲ್ಲಿ ಶ್ರೀ ಕುಕ್ಕುವಾಡೇಶ್ವರಿ ಮಹಾಶಕ್ತಿ ಪೀಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಡವ, ಶ್ರೀಮಂತ, ಜಾತಿ ಎಲ್ಲದಕ್ಕೂ ಹೊರತಾಗಿ ಭಕ್ತಿ ಮಾತ್ರ ಮುಖ್ಯವಾಗುತ್ತದೆ. ಇದು ಸಾವಿರಾರು ಭಕ್ತರ ಆರೋಗ್ಯ ಮತ್ತಿತರ ಸಮಸ್ಯೆಗಳ ಪರಿಹಾರ ಮತ್ತು ಇಷ್ಟಾರ್ಥವನ್ನು ಸಿದ್ದಿಗೊಳಿಸುವ ಶಕ್ತಿಪೀಠವಾಗಿದೆ. ಲಕ್ಷಾಂತರ ಭಕ್ತರ ಆರಾಧ್ಯದೈವವಾಗಿರುವ ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗುವ ಅಗತ್ಯವಿದೆ. ಅದಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.
ಬಿಜೆಪಿ ಮುಖಂಡ ರಾಜಶೇಖರಗೌಡ ಕಟ್ಟೇಗೌಡ್ರ ಮಾತನಾಡಿ, ಇಲ್ಲಿನ ಕುಕ್ಕುವಾಡೇಶ್ವರಿ ದೇವಿಯ ಕ್ಷೇತ್ರ ಕೆಲವೇ ವರ್ಷಗಳಲ್ಲಿ ಲಕ್ಷಾಂತರ ಜನರ ಶ್ರದ್ಧಾ-ಭಕ್ತಿಯ ಕೇಂದ್ರವಾಗಿ ಬೆಳೆದುನಿಂತಿದೆ. ಧರ್ಮ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಕುಕ್ಕುವಾಡೇಶ್ವರ ಶಕ್ತಿಮಠದ ಸಂಸ್ಥಾಪಕ ಪ್ರಶಾಂತ ಅಜ್ಜನವರ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಧರ್ಮಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರೇಖಾ ಹುಲ್ಮನಿ, ಸಮಿತಿಯ ಪದಾಧಿಕಾರಿಗಳಾದ ಶಂಕರಗೌಡ ಗಿರಿಗೌಡ, ವಿನಾಯಕ ಶಿರಿಗೌಡ, ಷಣ್ಮುಖಪ್ಪ ಪೂಜಾರ, ರವೀಂದ್ರ ಚಿಕ್ಕೇರಿ, ಮಹಲಿಂಗಪ್ಪ ಮೂಲಿಕೇರಿ, ಉಮೇಶಗೌಡ ಹೊನಕೇರಿ, ಪಂಚಾಕ್ಷರಿ ಚಕ್ರಸಾಲಿ, ರಾಮಪ್ಪ ಬಾರ್ಕಿ, ರಾಜು ಸುಂಕದ, ರುದ್ರಗೌಡ ಮುಂಚಿನಮನಿ, ರುದ್ರಗೌಡ ಗಿರಿಮಲ್ಲಣ್ಣನವರ, ಚಂದ್ರಪ್ಪ ಸುಂಕದ, ಕರಬಸಗೌಡ ಪಾಟೀಲ, ಸಂತೋಷ ಸುಂಕದ ಉಪಸ್ಥಿತರಿದ್ದರು.