ಮೋಹನ ಲಿಂಬಿಕಾಯಿ ಆಯ್ಕೆಗೆ ಶ್ರಮಿಸೋಣ -ಶಾಸಕ ಬಣಕಾರ

KannadaprabhaNewsNetwork |  
Published : Oct 11, 2026, 03:15 AM IST
 ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಶಾಸಕ ಯು.ಬಿ ಬಣಕಾರ ಮಾತನಾಡಿದರು. | Kannada Prabha

ಸಾರಾಂಶ

ಅ. 23ರಂದು ನಡೆಯುವ ಕರ್ನಾಟಕ ಪಶ್ಚಿಮ ಪದವೀಧರ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮೋಹನ ಲಿಂಬಿಕಾಯಿ ಸ್ಪರ್ಧಿಸಿದ್ದು, ಅವರನ್ನು ಆಯ್ಕೆ ಮಾಡಲು ಶ್ರಮಿಸೋಣ ಎಂದು ಶಾಸಕ ಯು.ಬಿ. ಬಣಕಾರ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ರಟ್ಟೀಹಳ್ಳಿ: ಅ. 23ರಂದು ನಡೆಯುವ ಕರ್ನಾಟಕ ಪಶ್ಚಿಮ ಪದವೀಧರ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮೋಹನ ಲಿಂಬಿಕಾಯಿ ಸ್ಪರ್ಧಿಸಿದ್ದು, ಅವರನ್ನು ಆಯ್ಕೆ ಮಾಡಲು ಶ್ರಮಿಸೋಣ ಎಂದು ಶಾಸಕ ಯು.ಬಿ. ಬಣಕಾರ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರು ರಾಜಕಾರಣ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ತಮ್ಮದೇ ಆದ ಛಾಪು ಮೂಡಿಸಿದ ಸರಳ ಸಜ್ಜನ ರಾಜಕಾರಣಿಯಾಗಿದ್ದು, ಸರಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ ಅವರನ್ನು ಅತೀ ಹೆಚ್ಚು ಮತಗಳನ್ನು ನೀಡುವ ಮೂಲಕ ಪಕ್ಷದ ಶಕ್ತಿಯಾಗಿಸೋಣ ಎಂದರು.

ಮೋಹನ ಲಿಂಬಿಕಾಯಿ ಅವರು ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಕ್ಷೇತ್ರಗಳಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ನೇಮಕಾತಿ ಮಾಡಿಸುವುದು, ಶಿಕ್ಷಕರ ಮೇಲಿರುವ ಆಡಳಿತಾತ್ಮಕ ಮತ್ತು ಶಿಕ್ಷಕೇತರ ಜವಾಬ್ದಾರಿಗಳನ್ನು ಹಾಗೂ ಅನಗತ್ಯ ಕೆಲಸದ ಹೊರೆಗಳನ್ನು ಕಡಿಮೆ ಮಾಡಿಸುವುದಲ್ಲದೇ ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳಿಗೆ ಸದಾ ಸ್ಪಂದಿಸುವಂತ ವ್ಯಕ್ತಿಯಾಗಿದ್ದಾರೆ ಎಂದರು.

ವಸಂತ ದ್ಯಾವಕ್ಕಳವರ, ಆದರ್ಶ ಲಿಂಬಿಕಾಯಿ, ಪಿ.ಡಿ. ಬಸನಗೌಡ್ರ, ವೀರನಗೌಡ ಪ್ಯಾಟಿಗೌಡ್ರ, ಮಹೇಶ ಗುಬ್ಬಿ, ಮಕ್ಬೂಲ್‌ಸಾಬ್ ಮುಲ್ಲಾ, ಸರ್ಫರಾಜ ಮಾಸೂರ, ಬಾಬುಸಾಬ್ ಜಡದಿ, ಅಬ್ಬಾಸ ಗೋಡಿಹಾಳ, ವೀರಣ್ಣ ಬಣಕಾರ, ದತ್ತಾತ್ರೇಯ ರಾಕ್ಕರ, ಜಗದೀಶ ದೊಡ್ಡಮನಿ, ಕಪಿಲ್ ಪೂಜಾರ ಹಾಗೂ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾತ್ಕಾಲಿಕ ಮೀಸಲಾತಿ ಪ್ರಕಟಣೆ ಬೆನ್ನಲ್ಲೇ ರಾಜಕೀಯ ಕಾವು
ಮಳೆಯಿಲ್ಲದೆ ಮಂಕಾದ ಹಿಂಗಾರು: ಬೀಜ ಮಾರಾಟಕ್ಕೆ ಬರದ ಬರೆ!