ಜಲ ಸಂರಕ್ಷಣೆ ನಮ್ಮೆಲ್ಲರ ಪ್ರಥಮ ಆದ್ಯತೆಯಾಗಲಿ

KannadaprabhaNewsNetwork |  
Published : Sep 05, 2024, 12:37 AM IST
ಫೋಟೋ- ಧರ್ಮ 1 ಮತ್ತು ಧರ್ಮ 2 | Kannada Prabha

ಸಾರಾಂಶ

ನಮ್ಮ ದಿನನಿತ್ಯದ ಅಗತ್ಯಗಳಿಗೆ ತಕ್ಕಷ್ಟು ನೀರನ್ನು ಬಳಸಿಕೊಂಡು, ಮಿಕ್ಕುಳಿದ ನೀರನ್ನು ಪೋಲಾಗದಂತೆ, ಉಳಿಸುವುದರ ನಮ್ಮೆಲ್ಲರ ಚಿತ್ತ ಇಡಬೇಕಾದ ಅನಿವಾರ್ಯತೆ ತುಂಬಾ ಇದೆ ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಯುವ ಪೀಳಿಗೆಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ನೀರಿನ ಸಂರಕ್ಷಣೆ ನಮ್ಮೆಲ್ಲರ ದಿನಚರಿಯಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕರೆ ಕೊಟ್ಟಿದ್ದಾರೆ.

ಅವರು ನಗರದ ಸರಕಾರಿ ಐಟಿಐ ತರಬೇತಿ ಸಂಸ್ಥೆಯ ಮೈದಾನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಯುನಿಸೇಫ್ ಸಂಸ್ಥೆಯಿಂದ ನಡೆದ ನೀರಿನ ಸಂರಕ್ಷಣೆಗಾಗಿ ಯುವ ಜನತೆ ಕಾರ್ಯೋನ್ಮುಖತೆ’, ಜನಜಾಗೃತಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ತೆಂಗಿನ ಇಂಗಾರ ಅರಳಿಸಿ ಮಾತನಾಡಿದರು.

ನಮ್ಮ ದಿನನಿತ್ಯದ ಅಗತ್ಯಗಳಿಗೆ ತಕ್ಕಷ್ಟು ನೀರನ್ನು ಬಳಸಿಕೊಂಡು, ಮಿಕ್ಕುಳಿದ ನೀರನ್ನು ಪೋಲಾಗದಂತೆ, ಉಳಿಸುವುದರ ನಮ್ಮೆಲ್ಲರ ಚಿತ್ತ ಇಡಬೇಕಾದ ಅನಿವಾರ್ಯತೆ ತುಂಬಾ ಇದೆ ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಯುವ ಪೀಳಿಗೆಗೆ ಕಿವಿಮಾತು ಹೇಳಿದರು.

ಕರಾವಳಿ ಭಾಗದ ಜಿಲ್ಲೆಯಲ್ಲಿ ಬಹಳ ಮಳೆಯಾಗುತ್ತೆ. ಒಂದಂತು ಹೇಳಬಲ್ಲೆ ನಿಮ್ಮ ಜಾಗದಲ್ಲಿ ನೀವು ಪಡುವ ಕಷ್ಟ ಬಹಳವಿದೆ. ಈ ಭಾಗಕ್ಕೆ ಹಿಂದೊಮ್ಮೆ ಬರಗಾಲ ಆವರಿಸಿದಾಗ ಬಂದಿದ್ದೇನೆ ಎಂದ ಅವರು, ಈ ಭಾಗಕ್ಕೆ ಒಳ್ಳೆ ಮಾತು ಹೇಳುವುದಾದರೆ ನೀವೆಲ್ಲರೂ ನೀರು ಉಳಿಸಿ.ನಾವು ನೀರು ಉಳಿಸುದಕ್ಕೂ ನೀವು ಉಳಿಸುದಕ್ಕೂ ವ್ಯತ್ಯಾಸವಿದೆ. ನೀರನ್ನು ಯಾವುದೇ ಕಾರಣಕ್ಕೂ ಪೋಲು ಮಾಡಲು ಹೋಗಬೇಡಿ, ನೀರಿನ ಬಳಕೆ ಕಡಿಮೆ ಮಾಡಿ, ಉಳಿಸುವುದು ಹೆಚ್ಚು ಮಾಡಿ ಅಂದಾಗ ಮಾತ್ರ ನಿಮ ಕಷ್ಟ ಕಡಿಮೆ ಆಗಲಿದೆ ಎಂದರು.

ನೀರು ಉಳಿಸಿ ನೀರು ಬಳಸಿ ಎಂಬ ಜಾಗೃತಿ ಕೆಲಸ ನೀವು ಮಾಡಬೇಕು. ಇಂತಹ ಜಾಗೃತಿ ಕಾರ್ಯಗಳು ನಮ್ಮ ಸಂಸ್ಥೆಯಿಂದ ಈಗಾಗಲೇ ನಡೆದಿದ್ದು, ಎಲ್ಲಾ ಮನೆಯಲ್ಲಿ ಸಂಪತ್ತು ಇದೆ. ಆದರೆ, ಪ್ರತಿ ಮನೆಯ ಪಾತ್ರೆಗೆ ಒಂದು ತೂತಿದೆ ಆ ತೂತನ್ನು ಸರಿಪಡಿ‌ಸುವ ಕೆಲಸ ನಾವು -ನೀವು ಮಾಡಬೇಕಿದೆ. ದಾನಗಳಲ್ಲಿ ಅನ್ನ ಧಾನ, ವಿದ್ಯಾದಾನ ಇದರ ಜೊತೆಗೆ ಆಭಯ ಧಾನವು ಬಹಳ ಮಹತ್ವದ್ದು. ಬರುವಂತಹ ಕಷ್ಟಗಳ ಬಗ್ಗೆ ಮುಂಚಿತವಾಗಿ ಯೋಚಿಸಿ ಅದನ್ನು ತಡೆಯುವ ಕೆಲಸ ಮಾಡಬೇಕೆಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಇಡೀ ಕರ್ನಾಟಕ ರಾಜ್ಯದಲ್ಲಿ ಸ್ವಸಹಾಯ ಸಂಘಗಳ ನಿರ್ಮಾಣ ಮಾಡಿ ಎಲ್ಲ ರೀತಿಯ ಚಟುವಟಿಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಧರ್ಮಸ್ಥಳ ಟ್ರಸ್ಟ್,ನ ಕಾರ್ಯಕ್ಕೆ ಸರ್ಕಾರದ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತೇನೆ.ಸರ್ಕಾರ ಮಾಡುವ ಕೆಲಸ ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಹಲವಾರು ವರ್ಷಗಳಿಂದ ಧರ್ಮಸ್ಥಳ ಟ್ರಸ್ಟ್ ನಿಂದ ಸಹಾಯ ಹಾಗೂ ಜನಪರವಾದ ಕೆಲಸಗಳು ಆಗಿದ್ದು, ಕೆರೆ ಹೂಳೆತ್ತುವುದು, ನಿರ್ಗತಿಕ ಜನರಿಗೆ ಪಿಂಚಣಿ, ಸ್ಕಾಲರ್ಶಿಪ್, ನೀಡುವ ಮೂಲಕ ಜನರಿಗೆ ದಾರಿದೀಪ ಆಗಿ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಹಲ್ಳಿಗಳ ಉದ್ಧಾರವೇ ದೇಶದ ಉದ್ಧಾರ. ಗ್ರಾಮಾಭ್ಯುದಯದ ಪಣ ತೊಟ್ಟು ಹೆಗ್ಗಡೆಯವರು ಮಾಡುತ್ತಿರುವ ಕೆಲಸ ಅವಿಸ್ಮರಣಯೀವೆಂದರು.

ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ದಕ್ಷಿಣ ಭಾರತದ ಯೂನಿಸೆಫ್‌ ಚೀಫ್, ಜಲೆಲೆಮ್ ಟಫಸ್ಸಿ ಮಾತನಾಡಿದರು. ಎಸ್.ಕೆ.ಡಿ.ಆರ್.ಡಿ.ಪಿ ಬಿಸಿ ಟ್ರಸ್ಟ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅನಿಲಕುಮಾರ್ ಎಸ್.ಎಸ್ ಸ್ವಾಗತಿಸಿದರು. ಈ ಸಂಸದ ರಾಧಾಕೃಷ್ಣ ದೊಡ್ಡಮನಿ, ಮುಖ್ಯಮಂತ್ರಿಗಳ ಸಲಹೆಗಾರ ಬಿ ಆರ್ ಪಾಟೀಲ್, ಶಾಸಕ ಬಸವರಾಜ್ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಡಾ. ಬಿ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಚಂದ್ರಶೇಖರ ಪಾಟೀಲ್ ಹುಮನಾಬಾದ, ಜಗದೇವ್ ಗುತ್ತೇದಾರ, ಕಲಬುರಗಿ ಪಾಲಿಕೆ ಮೇಯರ್ ಯಲ್ಲಪ್ಪ ನಾಯ್ಕೋಡಿ, ಅನೀಲ ಡಾಂಗೆ ಸೇರಿದಂತೆ ಟ್ರಸ್ಟ್,ನ ಹಲವು ಮುಖಂಡರು ಉಪಸ್ಥಿತರಿದ್ದರು.ಪೂರ್ಣಕುಂಭದೊಂದಿಗೆ ಖಾವಂದರರಿಗೆ ಸ್ವಾಗತ

ನೀರಿನ ಸಂರಕ್ಷಣೆಗಾಗಿ ಯುವ ಜನತೆ ಕಾರ್ಯೋನ್ಮುಖತೆ’, ಜನಜಾಗೃತಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಗಳಿಗೆ ಚಾಲನಾ ಕಾರ್ಯಕ್ರಮಕ್ಕೆ ಕಲಬುರಗಿಗೆ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಖಾವಂದರು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಮುತ್ತೈದೆಯರಿಂದ ಪೂರ್ಣಕುಂಭ ಹಾಗೂ ಚಂಡಿ ವಾದ್ಯದ ಮೂಲಕ ಸ್ವಾಗತ ಕೋರಲಾಯಿತು.ಮಹಿಳೆಯರಲ್ಲಿ ಸಾಕಷ್ಟು ಸಾಮರ್ಥ್ಯವಿದ್ದು ಅವಕಾಶಗಳಿಂದ ವಂಚಿತರಾಗಿದ್ದಾರೆ. ತನ್ನ ಕಾಲಿನ ಮೇಲೆ ನಿಂತು ಇಡೀ ಕುಟುಂಬವನ್ನು ನಡೆಸುವ ಶಕ್ತಿ ಮಹಿಳೆಗಿದೆ.ನೀರು ಬಡವರ ಮನೆಯ ತುಪ್ಪವೆಂದು ಭಾವಿಸಿ ಅದರ ಸಂರಕ್ಷಣೆ ಮಾಡುವ ಮೂಲಕ ಭವಿಷ್ಯದ ದಿನಗಳಲ್ಲಿ ನೀರಿಗಾಗಿ ಯುದ್ಧ ಮಾಡುವ ಸನ್ನಿವೇಶವನ್ನು ನಿಲ್ಲಿಸುವದರಲ್ಲಿ ಕಾರ್ಯೋನ್ಮುಖವಾಗಿ.

- ಶ್ರದ್ಧಾ ಅಮಿತ್, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪುತ್ರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಂತಿ ಸ್ಥಾಪನೆಗೆ ಮಾತುಕತೆಯೊಂದೆ ದಾರಿ: ಜ. ಅಬ್ದುಲ್ ನಜೀರ್‌
ಕುರುಗೋಡಿನಲ್ಲಿ ಕೆಟ್ಟು ನಿಂತ ಶುದ್ಧ ಕುಡಿವ ಘಟಕ: ಜನರ ಪರದಾಟ