ಮಹಿಳೆಯರು ಸ್ವ ಉದ್ಯೋಗದಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಲಿ :ಎಚ್.ಟಿ.ಮಂಜು

KannadaprabhaNewsNetwork | Published : Feb 19, 2025 12:45 AM

ಸಾರಾಂಶ

ಗ್ರಾಪಂ ಹಾಗೂ ಸರ್ಕಾರದಿಂದ ನೀಡಲಾಗುವ ಸಾಲದ ಮೊತ್ತವನ್ನು ಸ್ವಯಂ ಉದ್ಯೋಗ ಕೈಗೊಳ್ಳಲು ಬಳಕೆ ಮಾಡಬೇಕು. ಗುಡಿ ಕೈಗಾರಿಕೆಗಳಾದ ಮೇಣದ ಬತ್ತಿ , ಗಂಧದ ಕಡ್ಡಿ , ಊಟದ ಎಲೆ, ಊಟದ ಪ್ಲೇಟ್ ತಯಾರಿಕೆ, ಫೆನಾಯಿಲ್, ಬ್ಲೀಚಿಂಗ್ ಪೌಡರ್ ತಯಾರಿಕೆಯಂಥ ಸಣ್ಣ ಉದ್ಯಮವನ್ನು ಸ್ಥಾಪನೆ ಮಾಡಿ ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಗಳಿಸಿ, ಮಹಿಳೆಯರು ಆರ್ಥಿಕ ಸಬಲೀಕರಣ ಸಾಧಿಸಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ತಾಲೂಕಿನ ಮುರುಕನಹಳ್ಳಿಯಲ್ಲಿ ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆ ಮತ್ತು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಜ್ಞಾನ ಭಾರತಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ಆಶ್ರಯದಲ್ಲಿ ನಡೆದ ಮಹಿಳಾ ಸಂಘಗಳಿಗೆ ಸಾಲದ ಚೆಕ್ ವಿತರಣೆ ಹಾಗೂ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಗ್ರಾಪಂ ಹಾಗೂ ಸರ್ಕಾರದಿಂದ ನೀಡಲಾಗುವ ಸಾಲದ ಮೊತ್ತವನ್ನು ಸ್ವಯಂ ಉದ್ಯೋಗ ಕೈಗೊಳ್ಳಲು ಬಳಕೆ ಮಾಡಬೇಕು. ಗುಡಿ ಕೈಗಾರಿಕೆಗಳಾದ ಮೇಣದ ಬತ್ತಿ , ಗಂಧದ ಕಡ್ಡಿ , ಊಟದ ಎಲೆ, ಊಟದ ಪ್ಲೇಟ್ ತಯಾರಿಕೆ, ಫೆನಾಯಿಲ್, ಬ್ಲೀಚಿಂಗ್ ಪೌಡರ್ ತಯಾರಿಕೆಯಂಥ ಸಣ್ಣ ಉದ್ಯಮವನ್ನು ಸ್ಥಾಪನೆ ಮಾಡಿ ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಗಳಿಸಿ, ಮಹಿಳೆಯರು ಆರ್ಥಿಕ ಸಬಲೀಕರಣ ಸಾಧಿಸಬೇಕು ಎಂದು ಸಲಹೆ ನೀಡಿದರು.

ಬರೋಡ ಬ್ಯಾಂಕ್ ಕಳೆದ 25 ವರ್ಷಗಳಿಂದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯ ತರಬೇತಿ ನೀಡುತ್ತಿದೆ. 18 ರಿಂದ 45 ವರ್ಷ ಒಳಪಟ್ಟ ಎಲ್ಲರೂ ತರಬೇತಿ ನಂತರ ಬರೋಡ ಬ್ಯಾಂಕಿನಿಂದಲೇ ಸಬ್ಸಿಡಿ ರೂಪದಲ್ಲಿ ಸಾಲ ನೀಡಲಾಗುತ್ತದೆ. ಆಸಕ್ತ ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಎಚ್.ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರ ಧರ್ಮಪತ್ನಿ ರಮಾಮಂಜು ಮಹಿಳಾ ಸಂಘಗಳಿಗೆ ಸಾಲದ ಚೆಕ್ಕುಗಳನ್ನು ವಿತರಿಸಿದರು. ಬರೋಡಾ ಬ್ಯಾಂಕಿನ ವೆಬ್‌ ಸಿಟಿ ಸಂಸ್ಥೆ ಪ್ರಸನ್ನಕುಮಾರ್, ರವಿ, ತಾಲೂಕು ಆರ್ಥಿಕ ಸಾಕ್ಷರತಾ ಅಧಿಕಾರಿ ಪ್ರಮೋದ್ ತರಬೇತಿ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಪುನೀತ್‌ ಕುಮಾರ್, ಪಿಡಿಒ ಮುಜಾಕಿರ್, ಒಕ್ಕೂಟದ ಅಧ್ಯಕ್ಷೆ ಪೂರ್ಣಿಮ ಆನಂದ್, ಗ್ರಾಪಂ ಸದಸ್ಯರಾದ ಜಗದೀಶ್, ದೇವರಾಜು, ಎಚ್.ಟಿ.ಜಗದೀಶ್, ಧನಂಜಯ, ಕುಮಾರಸ್ವಾಮಿ, ಪೂರ್ಣಿಮಾ, ರತ್ನಮ್ಮ, ಲಲಿತಾ, ಪುಷ್ಪ, ನಂದಿನಿ, ಲೀಲಾವತಿ, ಶೋಭ, ತಾಲೂಕು ಸಂಜೀವಿನಿ ಯೋಜನೆಯ ಮಹಿಳಾ ಒಕ್ಕೂಟದ ಮೇಲ್ವಿಚಾರಕ ನಂಜುಂಡಯ್ಯ, ಸಂಜೀವಿನಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷೆ ಬೇಬಿ, ಕಾರ್ಯದರ್ಶಿ ಕುಮಾರಿ, ಸಹ ಕಾರ್ಯದರ್ಶಿ ಗುಲ್ನಾಜ್ ಭಾನು, ಖಜಾಂಚಿ ಗಂಗಮ್ಮ ಹಾಗೂ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ನೂರಾರು ಮಂದಿ ಸಾರ್ವಜನಿಕರು ಭಾಗವಹಿಸಿದ್ದರು.

Share this article