ಮಹಿಳೆಯರು ಸ್ವಾವಲಂಬಿಗಳಾಗಲಿ: ಎಚ್‌.ಜಿ. ಹಿರೇಗೌಡ

KannadaprabhaNewsNetwork |  
Published : Jan 23, 2026, 02:15 AM IST
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಿಳೆಯರಿಗೆ ಸರ್ಕಾರದ ಹಲವಾರು ಸ್ವ- ಉದ್ಯೋಗದ ಯೋಜನೆಗಳಿದ್ದು, ಅದಕ್ಕಾಗಿ ನಿರ್ದಿಷ್ಟ ತರಬೇತಿಗಳನ್ನು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ.

ಗದಗ: ಆದಿ ಕಾಲದಿಂದಲೂ ಮಹಿಳೆ ಸಂಗೋಪನೆಯ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾಳೆ, ಸಂಗೊಪನೆ ಅಂದರೆ ಕೃಷಿಯಿರಬಹುದು, ಶಿಶು ಸಂಗೋಪನೆಯಿರಬಹುದು. ಪಶು ಸಂಗೋಪನೆಯಿರಬಹುದು ಅವೆಲ್ಲವೂ ಆಕೆಗೆ ಜನ್ಮಜಾತಕವಾದ ಕೌಶಲ್ಯವಾಗಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾಳೆ ಎಂದು ಸಹಕಾರ ರತ್ನ ಪುರಸ್ಕೃತ ಎಚ್.ಜಿ. ಹಿರೇಗೌಡ್ರ ತಿಳಿಸಿದರು.

ನಗರದ ದಿ. ಚೇಂಬರ್ ಆಫ್ ಕಾಮರ್ಸ್‌ ಸಭಾಭವನದಲ್ಲಿ ಗುರುವಾರ ಸಹಕಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ, ಅಂಬೇಡ್ಕರ ಅಭಿವೃದ್ಧಿ ನಿಗಮ, ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಗೂ ಜಿಲ್ಲಾ ಸಹಕಾರ ಯುನಿಯನ್ ಆಶ್ರಯದಲ್ಲಿ ಜಿಲ್ಲೆಯ ಎಲ್ಲ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ನಡೆದ ಒಂದು ದಿನದ ವಿಶೇಷ ತರಬೇತಿ ಶಿಬಿರದಲ್ಲಿ ಮಾತನಾಡಿದರು.

ಮಹಿಳೆಯರು ಸರ್ಕಾರದ ಹಾಗೂ ಇಂತಹ ಕಾರ್ಯಕ್ರಮದ ಹಲವಾರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅದಕ್ಕಾಗಿ ನೀಡಲಾಗುವ ತರಬೇತಿಗಳನ್ನು ಪಡೆದು ಬದುಕಿನಲ್ಲಿ ಆರ್ಥಿಕ ಸದೃಢತೆ ಹೊಂದಬೇಕು. ಇದರಿಂದ ಕುಟುಂಬ ನಿರ್ವಹಣೆಗೆ ಸಹಾಯವಾಗಲಿದೆ ಎಂದರು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಲಿಂಗರಾಜಗೌಡ ಎಚ್. ಪಾಟೀಲ ಮಾತನಾಡಿ, ಬಸವಾದಿ ಶರಣರ ಕಾಲಕ್ಕಿಂತ ಮೊದಲು ಮಹಿಳೆಯರನ್ನು ಅಬಲೆಯರು ಎಂದು ಕರೆಯುತ್ತಾ ಬಂದಿದ್ದೇವೆ. ಅಂದಿನ ಕಾಲದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ಇರುತ್ತಿರಲಿಲ್ಲ, ಒಂದು ಹೆಣ್ಣು ಹುಟ್ಟಿದರೇ ಬಾಲ್ಯದಲ್ಲೆ ಮದುವೆ ಮಾಡಿಕೊಡುವ ಪದ್ಧತಿ ಇತ್ತು. ಅಂತಹ ಕಾಲದಲ್ಲಿ ಬಸವಾದಿ ಶರಣರು ಮಹಿಳೆಯರಿಗೆ ಕೂಡಾ ಸಮಾನ ಸ್ಥಾನಮಾನ ಸಿಗಬೇಕೆಂದು ಹೋರಾಟ ಮಾಡುತ್ತಾ ಬಂದು ಇಂದಿನ ಕಾಲದಲ್ಲಿ ಸಾಕಷ್ಟು ಬದಲಾವಣೆ ಕಂಡು ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂಬ ವಾಖ್ಯಾನದಂತೆ ಮಹಿಳೆಯರು ಎಲ್ಲ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತೋತ್ತರ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದರು.

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 1987ರಲ್ಲಿ ಕಂಪನಿಯ ಅಧಿನಿಯಮ 1956ರ ಅಡಿಯಲ್ಲಿ ಸ್ಥಾಪಿಸಲ್ಪಟ್ಟಿದೆ. ಸಮಾಜದ ದುರ್ಬಲ, ಶೋಷಿತ ಮತ್ತು ಅಸಹಾಯಕ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು ಸ್ಥಾಪಿಸಲ್ಪಟ್ಟಿರುವ ಮತ್ತು ರಾಜ್ಯದ ಮಹಿಳೆಯರಿಗೆ ನೆರವು ನೀಡುವ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಜಿಲ್ಲಾ ಸಹಕಾರ ಯುನಿಯನ್‌ ನಿರ್ದೇಶಕ ಎಸ್.ಕೆ. ಕುರಡಗಿ ಮಾತನಾಡಿ, ಮಹಿಳೆಯರಿಗೆ ಸರ್ಕಾರದ ಹಲವಾರು ಸ್ವ- ಉದ್ಯೋಗದ ಯೋಜನೆಗಳಿದ್ದು, ಅದಕ್ಕಾಗಿ ನಿರ್ದಿಷ್ಟ ತರಬೇತಿಗಳನ್ನು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದ್ದು, ತರಬೇತಿ ಪಡೆದು ಸರ್ಕಾರದಿಂದ ಸಿಗುವ ಆರ್ಥಿಕ ಸೌಲಭ್ಯವನ್ನು ಉಪಯೋಗಿಸಿಕೊಂಡು ಸ್ವ- ಉದ್ಯೋಗಿಗಳಾಗಿ ಮಹಿಳೆಯರು ತಮ್ಮ ಕುಶಲತೆಗೆ ಸಂಬಂಧಿಸಿದ ಆಸಕ್ತಿವುಳ್ಳ ವಿವಿಧ ತರಬೇತಿಗಳನ್ನು ಪಡೆದು ಸಣ್ಣ ಬಂಡವಾಳದಿಂದ ಪ್ರಾರಂಭಿಸಿ ತರಬೇತಿಗಳು ಬದುಕಿನಲ್ಲಿ ಬಹಳ ಉಪಯುಕ್ತತೆಯಾಗಿದ್ದು, ಅದರಲ್ಲೂ ಸ್ವ ಉದ್ಯೋಗದ ತರಬೇತಿಗಳು ಉದ್ಯಮಶೀಲತೆಗೆ ಸಹಕಾರ ನೀಡುತ್ತವೆ. ಗ್ರಾಹಕರು ಅಥವಾ ಗ್ರಾಹಕರನ್ನು ಆಕರ್ಷಿಸಲು ಪರಿಣಾಮಕಾರಿಯಾದ ಮಾರ್ಕೆಟಿಂಗ್ ಮೂಲಕ ಕಾರ್ಯನಿರ್ವಹಿಸಿದರೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಹುದು ಎಂದರು.

ತರಬೇತಿ ಕಾರ್ಯಾಗಾರದಲ್ಲಿ ಮಹಿಳಾ ಸಬಲೀಕರಣ ಕುರಿತು ಡಾ. ಪ್ರಜ್ಞಾ ಮತ್ತಿಹಳ್ಳಿ, ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಲಲಿತಾ ಎಸ್. ಅಳವುಂಡಿ, ವೃತ್ತಿ ತರಬೇತಿ ಕೌಶಲ್ಯಗಳ ಕುರಿತು ಡಾ. ಮಲ್ಲೂರ ಬಸವರಾಜ ಎನ್. ಅವರು ಉಪನ್ಯಾಸ ನೀಡಿದರು.

ಈ ವೇಳೆ ದ್ಯಾಮಣ್ಣ ಸವದತ್ತಿ, ಗಂಗಮ್ಮ ಕಡಕೋಳ, ಸುನಿತಾ ಪಾಟೀಲ, ಪುಷ್ಪಾ ಜಂತ್ಲಿ, ದ್ರಾಕ್ಷಾಯಣಿ ಹೊಕ್ಕಳದ, ಬಿ.ಆರ್. ನಿಡಗುಂದಿ, ಎಚ್.ಎಂ. ಶಾಂತಾ, ಜಿ.ಎಂ. ಉಳವಿ, ಡಾ. ಪ್ರಸನ್ನ ಎಸ್. ಪಟ್ಟೇದ, ಸಿ.ಎಸ್. ಕಲ್ಲನಗೌಡರ, ಜಿ.ಸಿ. ಸಾಲೋಟಗಿಮಠ, ಬಸವರಾಜ ಜುಮ್ಮಣ್ಣವರ, ಡಿ.ಐ. ನದಾಫ, ಮಲ್ಲಿಕಾರ್ಜುನ ಉಣಚಗೇರಿ, ಕಿರಣಕುಮಾರ ಹುಗ್ಗಿ ಸೇರಿದಂತೆ ಇತರರು ಇದ್ದರು. ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ರಶೀದಾಬಾನು ಸಿ. ಯಲಿಗಾರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ