ಮಹಿಳೆಯರು ಆರ್ಥಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಲಿ: ಜ್ಯೋತಿ ಗೊಂಡಬಾಳ

KannadaprabhaNewsNetwork |  
Published : Jun 27, 2024, 01:00 AM ISTUpdated : Jun 27, 2024, 01:01 AM IST
ಪೋಟೊ25ಕೆಎಸಟಿ1: ಕುಷ್ಟಗಿ ತಾಲೂಕಿನ ದೋಟಿಹಾಳದಲ್ಲಿ ದಯಾನಂದಪುರಿ ಸಂಘದವರು ಸಾಧಕರಿಗೆ ರಾಜ್ಯಮಟ್ಟದ ಕಿತ್ತೂರು ಚನ್ನಮ್ಮ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. | Kannada Prabha

ಸಾರಾಂಶ

ಹಿರಿಯರ ಮಾರ್ಗದರ್ಶನ ಪಡೆಯುವ ಮೂಲಕ ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಹಿರಿಯರ ಮಾರ್ಗದರ್ಶನ ಪಡೆಯುವ ಮೂಲಕ ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು ಎಂದು ರಾಜ್ಯಯುವ ಪ್ರಶಸ್ತಿ ವಿಜೇತೆ ಜ್ಯೋತಿ ಗೊಂಡಬಾಳ ಹೇಳಿದರು.

ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ದಯಾನಂದಪುರಿ ಕ್ರೀಡೆ, ಸಾಂಸ್ಕೃತೀಕ ಜಾನಪದ ಕಲಾ ಸಂಘ ಹಾಗೂ ಗಾಯತ್ರಿ ಮಹಿಳಾ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಹಿಳೆಯರು ಅಭಿವೃದ್ಧಿ ಹೊಂದಲು ಹಲವಾರು ಅವಕಾಶಗಳು ಇದ್ದು, ತಂದೆ-ತಾಯಿ ಹಿರಿಯರ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಉತ್ತಮವಾದ ಸಾಧನೆ ಮಾಡಬೇಕು ಎಂದರು.

ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿ, ದೇಶದಲ್ಲಿ ಇನ್ನು ಲಿಂಗ ಅಸಮಾನತೆಯು ಜೀವಂತವಾಗಿದೆ. ಇದನ್ನು ಹೊಡೆದೊಡಿಸಲು ಮಹಿಳೆಯರು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಮಹಿಳಾ ದಿನ ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗಬಾರದು. ಸರ್ಕಾರ ಗಂಡು-ಹೆಣ್ಣಿಗೆ ಸಮಾನತೆ ಇದೆ ಎಂದು ಹೇಳುತ್ತಿದೆ ಆದರೆ, ಅದು ಮಹಿಳೆಯರಿಗೆ ಸಂಪೂರ್ಣವಾಗಿ ಸಮಾನತೆ ಸಿಕ್ಕಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶ ನೀಡಬೇಕಾಗಿದೆ ಎಂದರು.

ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ ಮಾತನಾಡಿ, ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ಕೊಡಿಸಬೇಕು. ಸಮಾಜ ಅಭಿವೃದ್ಧಿಯ ಪತದತ್ತ ಸಾಗುವಂತೆ ಮಾಡಬೇಕು, ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದರು.

ಪ್ರಶಸ್ತಿ ಪುರಸ್ಕೃತರು:ಶಾರದಾ ಶೆಟ್ಟರ, ಪ್ರಭಾವತಿ ದುತ್ತರಗಿ, ಜ್ಯೋತಿ ಗೊಂಡಬಾಳ, ಸಿರಿನ್ಬಾನು, ಗೀತಾ ಎಂ., ಮಲ್ಲಿಕಾ ಗಾಧಾರಿ, ಲಕ್ಷ್ಮೀ ಗೋನಾಳ, ಸಾವಿತ್ರಿ ಶಿವನಗುತ್ತಿ, ಸರೋಜಿನಿ ರ್‍ಯಾಕಿ, ಶಾಂಭವಿ ಹಿರೇಮಠ, ಎಂ.ಎಚ್. ಮುಲ್ಲಾ, ಸೌಮ್ಯ ಬೋದೂರು ಪ್ರಶಸ್ತಿ ಸ್ವೀಕರಿಸಿದರು.

ಶಿಕ್ಷಕ ನಟರಾಜ ಸೋನಾರ್, ಪತ್ರಕರ್ತ ಮಂಜುನಾಥ ಗೊಂಡಬಾಳ, ಸಿದ್ರಾಮಪ್ಪ ಅಮರಾವತಿ ಇತರರು ಮಾತನಾಡಿದರು. ಈ ಸಂದರ್ಭ ಕುಷ್ಟಗಿ ಪಟ್ಟಣ ಸಹಕಾರ ಬ್ಯಾಂಕಿನ ಉಪಾಧ್ಯಕ್ಷೆ ಭುವನೇಶ್ವರಿ ಹಿರೇಮಠ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ರವೀಂದ್ರ ನಂದಿಹಾಳ, ಸಲಿಮಾಬೇಗಂ ಅರಗಿದ್ದಿ, ಮಂಜೂರು ಇಲಾಹಿ ಬನ್ನು, ಪೂರ್ಣಿಮಾ ದೇವಾಂಗಮಠ, ಗಾಯತ್ರಿ ಕುದುರಿಮೋತಿ, ಶಂಕ್ರಮ್ಮ ಕೊಳ್ಳಿ, ಶ್ರೀನಿವಾಸ ಕಂಟ್ಲಿ, ನಾಗರಾಜ ಕಾಳಗಿ, ರುಕ್ಮೀಣಿ ನಾಗಶೆಟ್ಟಿ, ಶಶಿಕಲಾ ಅರಳಿಕಟ್ಟಿ, ಅಮರೇಶ ತಾರಿವಾಳ, ನಬಿಸಾಬ ಇಲಕಲ್ ಸೇರಿದಂತೆ ಹಲವರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌