ಮಹಿಳೆಯರು ಸ್ವಉದ್ಯೋಗ ಸ್ಥಾಪಿಸಿ, ಸ್ವಾವಲಂಬಿಗಳಾಗಲಿ: ಸಂಗ್ವಾರ

KannadaprabhaNewsNetwork |  
Published : Dec 30, 2023, 01:15 AM IST
ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟದ ಸದಸ್ಯರಿಗೆ ತರಬೇತಿ ಕಾರ್ಯಾಗಾರ ಶಿಬಿರ ಆಯೋಜಿಸಲಾಯಿತು. | Kannada Prabha

ಸಾರಾಂಶ

ಸ್ವ-ಸಹಾಯ ಗುಂಪುಗಳ ಸದಸ್ಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಉತ್ತಮ ಕುಟುಂಬವನ್ನು ನಿರ್ಮಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮಹಿಳೆಯರು ಸ್ವ ಉದ್ಯೋಗವನ್ನು ಸ್ಥಾಪಿಸುವ ಮೂಲಕ ಸ್ವಾವಲಂಬಿಗಳಾಬೇಕು. ಸ್ವ-ಸಹಾಯ ಗುಂಪುಗಳ ಸದಸ್ಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಉತ್ತಮ ಕುಟುಂಬವನ್ನು ನಿರ್ಮಿಸಿಕೊಳ್ಳಬೇಕು ಎಂದು ವಡಗೇರಾ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು.

ತಾಲೂಕಿನ ನಾಯ್ಕಲ್ ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಮತ್ತ ಜೀವನೋಪಯ ಇಲಾಖೆ ವತಿಯಿಂದ ಗ್ರಾಪಂ ಮಟ್ಟದ ಒಕ್ಕೂಟ ಮಹಿಳಾ ಸದಸ್ಯರಿಗೆ ದೂರದೃಷ್ಟಿ ಮತ್ತು ವ್ಯಾಪಾರ ಅಭಿವೃದ್ಧಿ ಯೋಜನೆ ತಯಾರಿಕೆ ಕಾರ್ಯಾಗಾರ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ತ್ರೀಶಕ್ತಿ, ಸ್ವ-ಸಹಾಯ ಸಂಘಗಳು, ವಿವಿಧ ಇತರೆ ಮಹಿಳೆ ಗುಂಪುಗಳ ಮಹಿಳೆ ಸದಸ್ಯರು ಸರ್ಕಾರ ಹಲವು ಯೋಜನೆಗಳಿವೆ. ಅವುಗಳನ್ನು ಸದುಪಯೋಗ ಪಡೆದುಕೊಂಡು ಸಂಘಗಳನ್ನು ಆರ್ಥಿಕವಾಗಿ ಬಲಿಷ್ಠವಾಗಬೇಕು ಎಂದರು.

ಮಹಿಳೆ ಸದಸ್ಯರಿಗೆ ಟೀ ಕ್ಯಾಂಟೀನ್, ಮಿನಿ ಬಿಗ್ ಬಜಾರ್, ಖಾನಾವಳಿ, ಹೋಟೆಲ್, ಕರಕುಶಲ ತಯಾರಿಕೆ, ಸಾಮಾಗ್ರಿಗಳನ್ನು ತಯಾರಿಸಲು ಹೀಗೆ ಹಲವು ಉದ್ಯಮಗಳನ್ನು ಸ್ಥಾಪಿಸಲು ಹಾಗೂ ಮನೆಯಲ್ಲಿಯೇ ತಯಾರಿಸಲು ಮಹಿಳೆ ಸದಸ್ಯರು ಮುಂದೆ ಬರಬೇಕು. ಎಲ್ಲಾ ತರಹದ ಸಹಾಯ ಸಹಕಾರ ತಾಲೂಕು ಪಂಚಾಯ್ತಿಯಿಂದ ನೀಡುವುದಾಗಿ ಹೇಳಿದರು.

ಜಿಲ್ಲಾ ವ್ಯವಸ್ಥಾಪಕ ಗಿರಿ ಮಾತನಾಡಿ, ಸಂಘಗಳಲ್ಲಿ ಉತ್ತಮ ರೀತಿಯಲ್ಲಿ ಕುಟುಂಬಗಳು ಉತ್ತಮ ಜೀವನ ನಡೆಸಲು ಮಾರ್ಗದರ್ಶನ, ಸ್ವಯಂ ಉದ್ಯೋಗ ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ಭ್ರೂಣಹತ್ಯೆ ನಿರ್ಮೂಲನೆ, ಋತುಚಕ್ರ, ದೌರ್ಜನ್ಯ, ಮಹಿಳೆಯರ ಸುರಕ್ಷತೆ ಇತರೆ ಬಗ್ಗೆ ತಿಳಿಸಿದರು.

ಶಶಿಕಲಾ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ್‌ ಅಧ್ಯಕ್ಷೆ ಮೆಹರುನ್ನೀಸಾ ಶೇಖ್‌ ಅಬ್ದುಲ್‌ ನಬಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಶಶಿಕಾಂತ್, ಒಕ್ಕೂಟದ ಅಧ್ಯಕ್ಷೆ ಸಂಗಮ್ಮ, ಕಾರ್ಯದರ್ಶಿ ಪದ್ಮಾವತಿ ಕಟ್ಟಿಮನಿ, ಭಾಗಮ್ಮ, ಪಾರ್ವತಿ, ಭಾಗ್ಯಶ್ರೀ ಕುರುಕುಂದ ಇತರರಿದ್ದರು. ಪವನಕುಮಾರ ನಿರೂಪಿಸಿ, ಶಶಿಕಲಾ ಸ್ವಾಗತಿಸಿ, ಪರ್ವಿನ್ ಖುರೇಶಿ ವಂದಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ