ಭಾಷಣ ಕೇಳುಗರಿಗೆ ಭೂಷಣವಾಗಿರಲಿ: ಡಾ.ನವೀನ್

KannadaprabhaNewsNetwork |  
Published : Mar 24, 2025, 12:31 AM IST
೨೩ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಜೇಸಿಐ ಸಂಸ್ಥೆ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರವನ್ನು ಸಾಹಿತಿ ಹುಣಸೇಹಳ್ಳಿ ರಾಜಪ್ಪಗೌಡ ಉದ್ಘಾಟಿಸಿದರು. ನವೀನ್ ಮಿಸ್ಕಿತ್, ಇಬ್ರಾಹಿಂ ಶಾಫಿ, ವಿಕಾಸ್ ಗೂಗ್ಲಿಯಾ, ಮದನ್, ಶಶಿಧರ್ ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಸಭೆ, ಸಮಾರಂಭಗಳ ವೇದಿಕೆಯಲ್ಲಿ ಅತಿಥಿಗಳು ಮಾಡುವ ಭಾಷಣ ಕೇಳುಗರಿಗೆ ಭೂಷಣವಾಗಿರಬೇಕು ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ಡಾ.ನವೀನ್ ಲಾಯ್ಡ್ ಮಿಸ್ಕಿತ್ ಹೇಳಿದರು

ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಭೆ, ಸಮಾರಂಭಗಳ ವೇದಿಕೆಯಲ್ಲಿ ಅತಿಥಿಗಳು ಮಾಡುವ ಭಾಷಣ ಕೇಳುಗರಿಗೆ ಭೂಷಣವಾಗಿರಬೇಕು ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ಡಾ.ನವೀನ್ ಲಾಯ್ಡ್ ಮಿಸ್ಕಿತ್ ಹೇಳಿದರು.

ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಬೆಳಸೆಯ ಖಾಂಡ್ಯ ಪ್ಲಾಂಟರ್ಸ್ ಕ್ಲಬ್‌ನಲ್ಲಿ ಭಾನುವಾರ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರದಲ್ಲಿ ಮಾತನಾಡಿ, ವೇದಿಕೆಯಲ್ಲಿರುವವರ ಭಾಷಣ ಕೇಳುಗರಿಗೆ ಸ್ಫೂರ್ತಿ ಯಾಗಿದ್ದು, ಇನ್ನಷ್ಟು ಕೇಳಬೇಕು ಎನಿಸಬೇಕು. ಭಾಷಣಕ್ಕೆ ಹಲವು ಕಲೆಗಳನ್ನು ಕರಗತ ಮಾಡಿಕೊಳ್ಳುವುದು ಭಾಷಣಕಾರನ ಚತುರತೆ ಎಂದರು.

ಅಲ್ಲಿನ ಸ್ಥಿತಿಗತಿಗಳನ್ನು ಅರಿತು ಭಾಷಣ ಮಾಡಬೇಕು. ಆ ಸಮಯಕ್ಕೆ ತಕ್ಕಂತೆ ಮಾತನಾಡಬೇಕು. ಆಗ ಭಾಷಣಕಾರನಿಗೂ ಒಂದು ಗೌರವ, ಕೇಳುಗನಿಗೂ ಸಂತಸ. ಬೇಕಾಬಿಟ್ಟಿಯಾಗಿ ಮಾತನಾಡದೆ ಹಿತಮಿತವಾಗಿ, ವಿನೂತನ ಶೈಲಿಯಲ್ಲಿ ಮಾತನಾಡಿದರೆ ಭಾಷಣಕ್ಕೆ ಒಂದು ಮೌಲ್ಯ ಎಂದರು.ಸಾಹಿತಿ ಹುಣಸೇಹಳ್ಳಿ ರಾಜಪ್ಪಗೌಡ ಮಾತನಾಡಿ, ಜೇಸಿ ಸಂಸ್ಥೆ ಯುವ ಜನರರಿಗೆ ವ್ಯಕ್ತಿತ್ವ ವಿಕಸನ ತರಬೇತಿ ನೀಡಿ ಯುವ ಮಾನಸಿಕವಾಗಿ ಸದೃಢವಾಗಿಸುತ್ತಿದೆ. ಜೇಸಿ ಸಂಸ್ಥೆಯಲ್ಲಿ ತರಬೇತಿ ಪಡೆದವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪು ಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.ಜೇಸಿ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಜೇಸಿ ಸಂಸ್ಥೆ ಹಾಗೂ ಇತರೆ ಸಂಘ ಸಂಸ್ಥೆ ಸದಸ್ಯರಿಗೆ ಭಾಷಣ ಕಲೆ ಬಗ್ಗೆ ಪರಿಣಾಮಕಾರಿ ತರಬೇತಿ ನೀಡಲಾಗುತ್ತಿದೆ. ಈ ಶಿಬಿರದಲ್ಲಿ ತರಬೇತಿ ಪಡೆದವರು ಉತ್ತಮ ಭಾಷಣಕಾರರಾಗಿ ರೂಪು ಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದರು.ಶಿಬಿರದಲ್ಲಿ ೩೦ ಜನ ಭಾಗವಹಿಸಿ ತರಬೇತಿ ಪಡೆದರು. ರಾಷ್ಟ್ರೀಯ ತರಬೇತುದಾರ ವಿಕಾಸ್ ಗೂಗ್ಲಿಯಾ, ದೇವದಾನ ಗ್ರಾಪಂ ಸದಸ್ಯ ಮದನ್ ಹುಣಸೇಹಳ್ಳಿ, ಜೇಸಿ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಸುಧಾಕರ್, ಮಂಜುನಾಥ್ ತುಪ್ಪೂರು, ಸುರೇಂದ್ರ ಮಾಸ್ತರ್, ಚೈತನ್ಯ ವೆಂಕಿ ಮತ್ತಿತರರು ಹಾಜರಿದ್ದರು.೨೩ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಜೇಸಿಐ ಸಂಸ್ಥೆ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರವನ್ನು ಸಾಹಿತಿ ಹುಣಸೇಹಳ್ಳಿ ರಾಜಪ್ಪಗೌಡ ಉದ್ಘಾಟಿಸಿದರು. ನವೀನ್ ಮಿಸ್ಕಿತ್, ಇಬ್ರಾಹಿಂ ಶಾಫಿ, ವಿಕಾಸ್ ಗೂಗ್ಲಿಯಾ, ಮದನ್, ಶಶಿಧರ್ ಇದ್ದರು.

PREV

Recommended Stories

ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ
ಹಿಂದೂ ಸಮಾಜ ಸಂಘಟನೆಗೆ ಆರ್‌ಎಸ್ಎಸ್‌ ಪಾತ್ರ ಅಗಾಧ