ಹಗರಿಬೊಮ್ಮನಹಳ್ಳಿ; ಜಾತೀಯತೆ ಮೇಲೆ ಸಮಾಜ ಕಟ್ಟುವ ಬದಲು ನೀತಿಯ ಮೇಲೆ ಸಮಾಜ ಕಟ್ಟುವ ಅವಶ್ಯಕತೆ ಇದೆ ಎಂದು ಕೊಪ್ಪಳ ಗವಿ ಮಠದ ಅಭಿನವ ಗವಿಸಿದ್ದೇಶ್ವರ ಶ್ರೀ ಅಭಿಪ್ರಾಯಪಟ್ಟರು.
ಪಟ್ಟಣದ ಜಗದಂಬಾ ದೇಗುಲದ ಕಳಸಾರೋಹಣದ ಹಿನ್ನಲೆಯಲ್ಲಿ ಸೋಮವಾರ ದೇಗುಲಕ್ಕೆ ಭೇಟಿ ನೀಡಿ ಕಳಸಾರೋಹಣದ ಸಿದ್ಧತೆಯ ಧಾರ್ಮಿಕ ವಿಧಿ ವಿಧಾನಗಳನ್ನು ಪರಿಶೀಲಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ಒದಗಿಸಲು ಪೋಷಕರು ಸದಾ ಮುಂದಾಗಬೇಕು. ಶಿಕ್ಷಣದ ಜೊತೆಗೆ ಜೀವನದ ಪಾಠ ಕಲಿಸುವಲ್ಲಿ ಪೋಷಕರು ಎಚ್ಚರ ವಹಿಸಬೇಕು. ಸಹೋದರತೆ ಮತ್ತು ಪರಸ್ಪರರಲ್ಲಿ ಬಾಂಧವ್ಯ ವೃದ್ಧಿಯಾಗಲಿ ಎಂದು ಹಾರೈಸಿದರು.
ಯಾವುದೇ ಸರಕಾರದ ಅನುದಾನವಿಲ್ಲದೇ ಸಮುದಾಯದ ಸಹಭಾಗಿತ್ವದಲ್ಲಿ ಇಂತಹ ಭವ್ಯ ಮಂದಿರ ಕಟ್ಟಿರುವ ಕ್ಷತ್ರಿಯ ಸಮಾಜದ ಬಾಂಧವರು ನಿಜಕ್ಕೂ ಧಾರ್ಮಿಕವಾಗಿ ಶ್ರೀಮಂತರು ಎಂದು ಶ್ಲಾಘಿಸಿದರು.
ಶ್ರೀಗಳ ಪಾದಪೂಜೆ ನೆರವೇರಿಸಿದ ಸಮಾಜದ ಅಧ್ಯಕ್ಷ ದೀಪಕ್ ಕಠಾರೆ ಪ್ರಾಸ್ತಾವಿಕವಾಗಿ ಮಾತನಾಡಿ, ದೇಗುಲ ನಿರ್ಮಾಣದ ಹಿಂದೆ ಸಮಾಜ ಬಾಂಧವರ ಶ್ರಮವಿದೆ. ಮುಂದಿನ ದಿನಗಳಲ್ಲಿ ಸಹಸ್ರಾರ್ಜುನ ಭವನ ನಿರ್ಮಾಣಕ್ಕೆ ಶಾಸಕರ ಅನುದಾನ ಒದಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಲಹಾ ಸಮಿತಿ ಸದಸ್ಯರಾದ ರಂಗನಾಥಸಾ ಕಠಾರೆ, ರಾಮಚಂದ್ರಸಾ ಕಾಟವಾ, ಅಶೋಕ್ ಮೇಹರವಾಡೆ, ಬಾಲಚಂದ್ರಸಾ ಮೇಘರಾಜ್, ಕಾರ್ಯದರ್ಶಿ ಪ್ರಮೋದ್ ಮೇಘರಾಜ್, ಖಜಾಂಚಿ ದಿಲೀಪ್ ಭಾವಿಕಟ್ಟಿ, ಮುಖಂಡರಾದ ರಾಘವೇಂದ್ರ ನಿರಂಜನ, ರಾಜು ಮೇಘರಾಜ್, ಪರಶುರಾಮಸಾ ದಲಬಂಜನ್, ಯುವ ಘಟಕದ ಪವನ್ ಮೇಘರಾಜ್, ಹರ್ಷ ಭಾವಿಕಟ್ಟಿ, ರವಿ ಕಾಟವಾ, ಮಹಿಳಾ ಘಟಕದ ಲಕ್ಷ್ಮೀ ಮೇಘರಾಜ್, ಈ.ಕೃಷ್ಣಮೂರ್ತಿ, ಗುತ್ತಿಗೆದಾರ ಉಮಾಪತಿ, ಪುರಸಭೆ ಸದಸ್ಯರಾದ ನಾಗರಾಜ್ ಜನ್ನು, ಅಂಬಳಿ ವಿರೇಂದ್ರಗೌಡ, ಎಚ್.ಎಂ. ನಾಗರಾಜ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.