ನರಗುಂದ: ತಾಲೂಕಿನ ಚಿಕ್ಕ ನರಗುಂದ ಗ್ರಾಮದ ಶ್ರೀ ಸಿದ್ಧಿ ವಿನಾಯಕ ಶಿಕ್ಷಣ ಸಂಸ್ಥೆ (ರಿ) ವಿಶ್ವ ಚೇತನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆ ವೇಷಧಾರಿಗಳಾಗಿ ವಿಶೇಷ ರೀತಿಯಲ್ಲಿ ಹಬ್ಬ ಆಚರಿಸಿದರು.
ಶಾಲಾ ಮುಖ್ಯೋಪಾಧ್ಯಾಯ ದಯಾನಂದ್ ಪುತ್ಲೇಕರ ಮಾತನಾಡಿ, ಕೃಷ್ಣ ಮತ್ತು ರಾಧೆ ವೇಷದಲ್ಲಿ ಮಕ್ಕಳನ್ನು ತಯಾರು ಮಾಡಿದ್ದ ಎಲ್ಲ ತಂದೆ-ತಾಯಿ, ಪೋಷಕರಿಗೆ ಧನ್ಯವಾದ ತಿಳಿಸಿದರು.
ಮಕ್ಕಳು ಈಗಿನಿಂದಲೇ ಇಂತಹ ಒಳ್ಳೆಯ ಆಚರಣೆಗಳಲ್ಲಿ ಪಾಲ್ಗೊಂಡಾಗ ಮಾತ್ರ ರಾಷ್ಟ್ರೀಯತೆ, ಧರ್ಮ, ಕುಟುಂಬ, ಹಿರಿಯ-ಕಿರಿಯರ ಕುರಿತು ಗೌರವ ಬೆಳೆಸಿಕೊಳ್ಳಲು ಸಾಧ್ಯ.ಈ ಸಂದರ್ಭದಲ್ಲಿ ಮಹಾಲಕ್ಷ್ಮೀ ಗವಿ, ಶ್ರೀದೇವಿ ಹೊಂಗಲ, ಪ್ರೇಮಾ ಪತ್ತಾರ, ಶ್ವೇತಾ ವಾಸನ, ರೇಖಾ ಭೂಮಣ್ಣವರ, ತುಳಸಾ ಮೇಟಿ, ರಕ್ಷಿತಾ, ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಗಮನ ಸೆಳೆದ ಮುದ್ದು ಮಕ್ಕಳ ಶ್ರೀಕೃಷ್ಣ ಜನ್ಮಾಷ್ಟಮಿ ವೇಷಭೂಷಣ
ಡಂಬಳ: ಸ್ಥಳೀಯ ತೋಂಟದಾರ್ಯ ಬಸವೇಶ್ವರ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮುದ್ದು ಮಕ್ಕಳ ಶ್ರೀಕೃಷ್ಣ ರುಕ್ಮಿಣಿ ರಾಧೆಯರ ವೇಷಭೂಷಣ ನೆರೆದಿದ್ದವರ ಗಮನ ಸೆಳೆಯಿತು. ಶಾಲೆಯ ಹಲವಾರು ಮಕ್ಕಳು ಕೃಷ್ಣ, ರಾಧೆ ಮತ್ತು ರುಕ್ಮಿಣಿ ವೇಷ ಧರಿಸಿ ಕೃಷ್ಣನ ರೂಪಕ ಪ್ರದರ್ಶಿಸಿದರು.ಈ ಸಮಯದಲ್ಲಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕಿ ಜ್ಯೋತಿ ಶಿರೂರ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಸಹಿತ ಎಲ್ಲ ಹಬ್ಬಗಳನ್ನೂ ವಿಶೇಷವಾಗಿ ಆಚರಿಸಲಾಗುತ್ತದೆ. ಇದಕ್ಕೆ ಗ್ರಾಮಸ್ಥರು, ಸಂಸ್ಥೆಯ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಪಾಲಕರ ಸಹಕಾರವಿದೆ. ಕೃಷ್ಣ ಧರ್ಮದ ಪ್ರತೀಕ. ಅಧರ್ಮ ಹೆಚ್ಚಾದ ಕಡೆ ಕೃಷ್ಣ ಅವತರಿಸಿ ಧರ್ಮ ಮರು ಸ್ಥಾಪಿಸುತ್ತಾನೆ. ಕೃಷ್ಣನ ನೆನೆದರೆ ಎಲ್ಲ ಕಷ್ಟಗಳು ಪರಿಹಾರಗೊಳ್ಳುತ್ತವೆ ಎನ್ನುವ ನಂಬಿಕೆ ವಿಶ್ವಾಸವಿದೆ ಎಂದರು.ಡಂಬಳ ಕೇಂದ್ರಸ್ಥಾನ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.
ಈ ಸಮಯದಲ್ಲಿ ಶಿಕ್ಷಕಿಯರಾದ ಅನುರಾಧ ರಾಮೇನಹಳ್ಳಿ, ಶಶಿಕಲಾ ಚಟ್ಟೇರ, ಗೌರಮ್ಮ ಕೊತಂಬರಿ, ಜಯಶ್ರೀ ಪತ್ತಾರ, ವರ್ಷಣಿ ಕಂಪ್ಲಿ, ಗೀತಾ ಕೋಲಾರ, ಸಿದ್ದಮ್ಮ ಬಾವಿ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಇದ್ದರು.