ನುಲಿಯ ಚಂದಯ್ಯ ನಾಮಫಲಕಕ್ಕೆ ಪೂಜೆ ಸಲ್ಲಿಸಿದ ಜಿಲ್ಲಾ ಉಸ್ತುವಾರಿ ಸಚಿವ
ಕನ್ನಡಪ್ರಭ ವಾರ್ತೆ ಕಾರಟಗಿಕಲ್ಯಾಣ ನಾಡಿನ ಶ್ರೇಷ್ಠ ಶರಣ, ವಚನಕಾರ ನುಲಿಯ ಚಂದಯ್ಯನವರು ಪೂಜೆ, ಪುನಸ್ಕಾರಗಳಿಗಿಂತ ಕಾಯಕ ನಿಷ್ಠೆಯೇ ಮೇಲು ಎಂದು ಸಾರಿದವರು. ತಮ್ಮ ವಚನಗಳ ಮೂಲಕ ಕಾಯಕ ಕಡ್ಡಾಯ ಎಂಬ ಆಶಯ ಸಾರಿದ್ದಾರೆ. ಅಂತಹ ಮಹಾನ್ ಶರಣರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿನ ೨೨ನೇ ವಾರ್ಡಿನ ಅಬ್ದುಲ್ ನಜೀರ್‌ಸಾಬ್ ಕಾಲನಿಯಲ್ಲಿ ಕೊರವ ಸಮಾಜ ಹಮ್ಮಿಕೊಂಡಿದ್ದ ಕಾಯಕಯೋಗಿ ನುಲಿಯ ಚಂದಯ್ಯನವರ ಜಯಂತಿ ಅಂಗವಾಗಿ ಇಲ್ಲಿನ ನುಲಿಯ ಚಂದಯ್ಯ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಹನ್ನರಡನೇ ಶತಮಾನದಲ್ಲಿ ಕಾಯಕಕ್ಕೆ ಒತ್ತು ನೀಡುವ ಮೂಲಕ ಕೊರಚ, ಕೊರವ, ಕೊರಮ ಸಮುದಾಯದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾಯಕದ ಮಹತ್ವ ಸಾರಿದ ನುಲಿಯ ಚಂದಯ್ಯನವರು ಕಾಯಕದಲ್ಲಿಯೇ ದೇವರನ್ನು ಕಂಡ ಮಹಾಶರಣರು. ಕಲ್ಯಾಣ ನಾಡಿನ ಶ್ರೇಷ್ಠ ಶರಣ, ಅನುಭಾವಿ, ವಚನಕಾರ ನುಲಿಯ ಚಂದಯ್ಯನವರು ಕಾಯಕ ನಿಷ್ಠೆ ಶಿವನಿಗೆ ಅರ್ಪಿತವಾಗುತ್ತದೆ ಎಂದು ಅಚಲವಾಗಿ ನಂಬಿ ಅದರಂತೆ ನಡೆದರು ಎಂದರು.
ನಂತರ ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಿವರೆಡ್ಡಿ ನಾಯಕ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್ ಮಾನತಾಡಿದರು.ಈ ವೇಳೆ ತಾಲೂಕು ನುಲಿಯ ಚಂದಯ್ಯ ಸಂಘದ ಅಧ್ಯಕ್ಷ ನಾಗರಾಜ ಉಮಚಗಿ, ಕಾರ್ಯದರ್ಶಿ ನಾಗರಾಜ್ ಭಜಂತ್ರಿ, ಮಾಜಿ ಅಧ್ಯಕ್ಷ ಮಲ್ಲಪ್ಪ ಮೆದಿಕಿನಾಳ, ರಾಘವೇಂದ್ರ ಭಜಂತ್ರಿ, ಪುರಸಭೆ ಸದಸ್ಯೆ ಸುಜಾತಾ ನಾಗರಾಜ್, ನಾಮ ನಿರ್ದೇಶಿತ ಸದಸ್ಯ ಸಿದ್ದಪ್ಪ ಬೇವಿನಾಳ, ಚೆನ್ನಬಸಪ್ಪ ಸುಂಕದ್, ಶರಣಪ್ಪ ಪರಕಿ, ಹನುಮಂತ ಸುದ್ದಿ, ಮೂರ್ತೆಪ್ಪ, ಕಂಠೆಪ್ಪ ನಾಯಕ್ ಇತರರಿದ್ದರು.