ಶರಣಬಸವೇಶ್ವರರ ತತ್ವಾದರ್ಶ ಪಾಲಿಸೋಣ: ಬಸವಲಿಂಗ ಶ್ರೀ

KannadaprabhaNewsNetwork |  
Published : Aug 29, 2024, 12:45 AM IST
ಸ | Kannada Prabha

ಸಾರಾಂಶ

ವಿವಿಧ ದಾಸೋಹಿ ಶರಣಬಸವೇಶ್ವರರು ದಾಸೋಹ ಮೂಲಕ ಹೆಸರುವಾಸಿಯಾಗಿದ್ದಾರೆ.

ಹೊಸಪೇಟೆ: ತ್ರಿವಿಧ ದಾಸೋಹಿ ಶರಣಬಸವೇಶ್ವರರ ತತ್ತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಪಾಲಿಸಬೇಕು. ದಾಸೋಹ ಶರಣ ಚಳವಳಿಯ ಮಹೋನ್ನತ ಕಾರ್ಯವಾಗಿದೆ. ನಾವು ಇಂದಿಗೂ ದಾಸೋಹವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಸ್ಥಳೀಯ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜ.ಬಸವಲಿಂಗ ಶ್ರೀ ಹೇಳಿದರು.

ನಗರದ ಶರಣ ಬಸವೇಶ್ವರ ಕಾಲೋನಿಯಲ್ಲಿ ಬುಧವಾರ ನಡೆದ ಕಲಬುರ್ಗಿಯ ಮಹಾಮಹಿಮ ತ್ರಿವಿಧ ದಾಸೋಹಮೂರ್ತಿ ಶ್ರೀ ಶರಣಬಸವೇಶ್ವರರ ದೇವಸ್ಥಾನ ಹಾಗೂ ಮೂರ್ತಿ ಪ್ರಾಣಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಅವರು, ಭಕ್ತಿ ಮಾರ್ಗವನ್ನು ಎಲ್ಲರೂ ಕಂಡುಕೊಳ್ಳಬೇಕು. ವಿವಿಧ ದಾಸೋಹಿ ಶರಣಬಸವೇಶ್ವರರು ದಾಸೋಹ ಮೂಲಕ ಹೆಸರುವಾಸಿಯಾಗಿದ್ದಾರೆ. ಈ ಮೂಲಕ ಶರಣ ತತ್ವ ಸಾರಿದ್ದಾರೆ ಎಂದರು.

ಉಜ್ಜಯನಿಯ ಜ.ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಗರಗ ನಾಗಲಾಪುರದ ನಿರಂಜನ ಶ್ರೀ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಾಸಕ ಎಚ್.ಆರ್. ಗವಿಯಪ್ಪ, ಹುಡಾ ಅಧ್ಯಕ್ಷ ಎಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ, ಮುಖಂಡರಾದ ಗೊಗ್ಗ ಚನ್ನಬಸವರಾಜ, ಎಲ್‌. ಸಿದ್ದನಗೌಡ, ಸಾಲಿ ಸಿದ್ದಯ್ಯಸ್ವಾಮಿ, ಅಶ್ವಿನ್‌ ಕೊತ್ತಂಬರಿ, ಜಂಬಣ್ಣ, ಮಧುಚರಚನ್ನಶಾಸ್ತ್ರಿ, ಶರಣಯ್ಯ, ಶ್ರೀ ಶರಣಬಸವೇಶ್ವರ ದೇವಸ್ಥಾನದ ಮಲ್ಲಿನಾಥ ಬಿರಾದಾರ, ವಿರೂಪಾಕ್ಷಿ ಬಿರಾದಾರ, ಸುರೇಶ್‌, ಶಾಂತಪ್ಪ, ಹನುಮಂತರಾಯ, ವಿಶ್ವಾರಾಧ್ಯ ಎಚ್‌.ಎಂ. ಮತ್ತಿತರರಿದ್ದರು.

ಹೊಸಪೇಟೆಯ ಶರಣ ಬಸವೇಶ್ವರ ಕಾಲೋನಿಯಲ್ಲಿ ಬುಧವಾರ ನಡೆದ ಕಲಬುರ್ಗಿಯ ಮಹಾಮಹಿಮ ತ್ರಿವಿಧ ದಾಸೋಹಮೂರ್ತಿ ಶ್ರೀ ಶರಣಬಸವೇಶ್ವರರ ದೇವಸ್ಥಾನದ ಕಟ್ಟಡ ಹಾಗೂ ಮೂರ್ತಿ ಪ್ರಾಣಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭದಲ್ಲಿ ಶಾಸಕ ಎಚ್‌.ಆರ್‌. ಗವಿಯಪ್ಪ ಅವರಿಗೆ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜ.ಬಸವಲಿಂಗ ಶ್ರೀ ಸನ್ಮಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ