ಸುಭದ್ರ ಭಾರತ ನಿರ್ಮಾಣಕ್ಕೆ ಕೈಜೋಡಿಸಿ-ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork |  
Published : Jul 26, 2024, 01:37 AM ISTUpdated : Jul 26, 2024, 01:38 AM IST
ಫೋಟೋ : ೨೩ಎಚ್‌ಎನ್‌ಎಲ್೧ | Kannada Prabha

ಸಾರಾಂಶ

ಭಾರತದ ಅಭಿವೃದ್ಧಿಯ ನಿಜವಾದ ಶಕ್ತಿ ಅಂದರೆ ಅದು ಯುವಶಕ್ತಿಯೇ ಆಗಿದೆ. ಸುಭದ್ರ ಭಾರತ ನಿರ್ಮಾಣದಲ್ಲಿ ಕೈ ಜೋಡಿಸುವುದು ನಿಮ್ಮ ಆದ್ಯತೆಯಾಗಬೇಕು. ಅಲ್ಲದೆ ಜಗತ್ತಿನಲ್ಲಿ ದೊಡ್ಡ ಯುವ ಶಕ್ತಿ ಹೊಂದಿದ ದೇಶ ಭಾರತ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ಭಾರತದ ಅಭಿವೃದ್ಧಿಯ ನಿಜವಾದ ಶಕ್ತಿ ಅಂದರೆ ಅದು ಯುವಶಕ್ತಿಯೇ ಆಗಿದೆ. ಸುಭದ್ರ ಭಾರತ ನಿರ್ಮಾಣದಲ್ಲಿ ಕೈ ಜೋಡಿಸುವುದು ನಿಮ್ಮ ಆದ್ಯತೆಯಾಗಬೇಕು. ಅಲ್ಲದೆ ಜಗತ್ತಿನಲ್ಲಿ ದೊಡ್ಡ ಯುವ ಶಕ್ತಿ ಹೊಂದಿದ ದೇಶ ಭಾರತ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲಿನ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನಾ ಕಲಿಕಾ ಕೇಂದ್ರದಲ್ಲಿ ಬೆಂಗಳೂರಿನ ಇಂಡಿಯನ್ ಅಸೋಸಿಯೇಶಿಯಲ್ ಇನ್‌ಸ್ಟಿಟ್ಯೂಟ್, ಹಾನಗಲ್ಲಿನ ಯಂಗ ವಿಜನ್, ರೋಶನಿ ಸಮಾಜ ಸೇವಾ ಸಂಸ್ಥೆ, ಲೋಯಲಾ ವಿಕಾಸ ಕೇಂದ್ರ, ಬೆಳಗಾಲಪೇಟೆಯ ಅಕ್ಕಮಹಾದೇವಿ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ ಯುವ ಸಂಗಮ ಕಾರ್ಯಕ್ರಮದಲ್ಲಿ ಯುವಕರಿಗೆ ಸಂದೇಶ ನೀಡಿದ ಅವರು, ಈ ದೇಶದ ಹಿತ ಕಾಯುವುದು ನಮ್ಮ ಆದ್ಯತೆಯಾಗದಿದ್ದರೆ ನಾಳೆಗೆ ಬಹು ದೊಡ್ಡ ಸಂಕಷ್ಟವನ್ನು ಎದುರಿಸಬೇಕಾದೀತು. ನಮ್ಮ ಪರಿಸರ, ನೀರು, ಪ್ರಾಕೃತಿಕ ಸಂಪತ್ತು ಉಳಿಸಲು ನಮಗೆ ಕಾಳಜಿ ಬೇಕು ಎಂದು ಹೇಳಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಡೀ ಜಗತ್ತನ್ನು ಮುಂಗೈಯಲ್ಲಿಯೇ ತಂತ್ರಜ್ಞಾನದ ಮೂಲಕ ನೋಡುವ ಅವಕಾಶಗಳಿವೆ. ಅದರ ಸದುಪಯೋಗವಾಗಲಿ. ಜ್ಞಾನಾರ್ಜನೆಗೆ ತಂತ್ರಜ್ಞಾನ ಬಳಕೆಯಾಗಲಿ. ದುರುಪಯೋಗ ಸಲ್ಲದು. ಈ ದೇಶದಲ್ಲಿ ಎಲ್ಲರೂ ಸಮಾನರು. ಭೇದವಿಲ್ಲದೆ ಒಂದಾಗಿ ಮುನ್ನಡೆದರೆ ಇಡೀ ಜಗತ್ತಿಗೆ ಮಾದರಿಯಾಗುವ ದೇಶ ನಮ್ಮದಾಗಲು ಸಾಧ್ಯ. ಭಾರತದಲ್ಲಿರುವ ಮಾನವ ಶಕ್ತಿಯನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಯುವಕರಿಗಾಗಿ ಕಾಲ ಕಾಲಕ್ಕೆ ಒಳ್ಳೆಯ ಮಾರ್ಗದರ್ಶನದ ಅಗತ್ಯವೂ ಇದೆ. ಅಂತಹ ಕಾರ್ಯವನ್ನು ಸ್ವಯಂಸೇವಾ ಸಂಸ್ಥೆಗಳು ಮಾಡುತ್ತಿರುವುದು ಕೂಡ ಮೆಚ್ಚುಗೆ ಪಡುವಂತಹದ್ದು ಎಂದರು.

ಹ್ಯುಮ್ಯಾನಿಟಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಸ್ವಾತಿ ಮಾಳಗಿ, ಬೆಂಗಳೂರಿನ ಇಂಡಿಯನ್ ಅಸೋಸಿಯೇಶಿಯಲ್ ಇನ್‌ಸ್ಟಿಟ್ಯೂಟ್‌ನ ಬಾಲ್‌ರಾಜ, ರೋಶನಿ ಸಮಾಜಸೇವಾ ಸಂಸ್ಥೆಯ ಸಹ ನಿರ್ದೇಶಕಿ ಶಾಂತಿ, ಲೋಯಲಾ ವಿಕಾಸ ಕೇಂದ್ರದ ಸಹ ನಿರ್ದೇಶಕ ಜಾನ್‌ಸನ್, ಸಂಪನ್ಮೂಲ ವ್ಯಕ್ತಿ ಎಂ. ಮಂಜುನಾಥ, ರೋಶನಿ ಸಂಸ್ಥೆಯ ಜಾನೆಟ್, ಹಾನಗಲ್ಲ ಯಂಗ್ ವಿಜನ್ ಸಂಸ್ಥೆ ಮುಖ್ಯಸ್ಥ ಫೈರೋಜಅಹಮ್ಮದ್ ಶಿರಬಡಗಿ, ವಿನ್ಸೆಂಟ್ ಜೇಸನ್, ಶಿವಾನಂದ ಅಲ್ಲಾಪುರ, ಕೆ.ಎಫ್. ನಾಯ್ಕರ, ಡಿಗ್ಗಪ್ಪ ಲಮಾಣಿ, ಮಂಜುನಾಥ ಗೌಳಿ, ಶಿವಕುಮಾರ ಮಾಂಗ್ಲೇನವರ, ಪ್ರವೀಣ ಮಾಂಗ್ಲೇನವರ, ಫಕ್ಕೀರೇಶ ಗೌಡಳ್ಳಿ, ಪೀರಪ್ಪ ಸಿರ್ಸಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!