ಸಾರ್ವಜನಿಕ ಗ್ರಂಥಾಲಯದ ಸದ್ಭಳಕೆ ಮಾಡಿಕೊಳ್ಳಲಿ

KannadaprabhaNewsNetwork |  
Published : Jun 23, 2026, 02:30 AM IST
ಹೂವಿನಹಡಗಲಿಯ ಶಾಖಾ ಗ್ರಂಥಾಲಯದ ಮೊದಲ ಮಹಡಿಯನ್ನು ಉದ್ಘಾಟಿಸಿದ ಶಾಸಕ ಕೃಷ್ಣನಾಯ್ಕ.  | Kannada Prabha

ಸಾರಾಂಶ

ಸ್ಪರ್ಧಾತ್ಮಕ ಯುಗದಲ್ಲಿ ಸತತ ಅಧ್ಯಯನ ಅವಶ್ಯಕತೆ ಇದೆ.

ಹೂವಿನಹಡಗಲಿ: ಗ್ರಂಥಾಲಯ ಜ್ಞಾನದ ಹಸಿವು ಇಂಗಿಸುವ ಶಕ್ತಿ ಹೊಂದಿದೆ. ವಿದ್ಯಾರ್ಥಿಗಳು ಸಾರ್ವಜನಿಕ ಗ್ರಂಥಾಲಯದ ಸದ್ಭಳಕೆ ಮಾಡಿಕೊಳ್ಳಬೇಕೆಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ಸಾರ್ವಜನಿಕ ಗ್ರಂಥಾಲಯ, ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆ ವತಿಯಿಂದ 2022-23ನೇ ಸಾಲಿನ ಎಸ್‌ಇಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಪಟ್ಟಣದ ಶಾಖಾ ಗ್ರಂಥಾಲಯದ ಮೊದಲ ಮಹಡಿ ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಸತತ ಅಧ್ಯಯನ ಅವಶ್ಯಕತೆ ಇದೆ. ವಿವಿಧ ಪರೀಕ್ಷೆಗೆ ತಯಾರಿ ನಡೆಸುವ ಓದುಗರಿಗಾಗಿ ಪ್ರತ್ಯೇಕ ಸುಸಜ್ಜಿತವಾದ, ಮೊದಲನೇ ಮಹಡಿಯ ಸದುಪಯೋಗ ಪಡೆದುಕೊಳ್ಳಬೇಕು. ರಾಜ್ಯ ಕೇಂದ್ರ ಸರ್ಕಾರಗಳ ಉನ್ನತ ಪರೀಕ್ಷೆ ಎದುರಿಸಲು ಬರೆಯಲು, ಗ್ರಂಥಾಲಯದಲ್ಲಿ ಲಭ್ಯ ಇರುವ ಪುಸ್ತಕ ನಿಯತಕಾಲಿಕೆಗಳನ್ನು ಬಳಸಿರಿ ಎಂದರು.

ತಾಲೂಕಿನ ಗ್ರಾಮೀಣ ಗ್ರಂಥಾಲಯಗಳು ಸಹ ಸಾರ್ವಜನಿಕರಿಗೆ ಓದಿನ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಗ್ರಂಥಾಲಯಾಧಿಕಾರಿಗಳಾದ ಬಿ.ನಾರಾಯಣ್ ದಾಸ್, ಹರಪನಹಳ್ಳಿ ಗ್ರಂಥಾಲಯಾಧಿಕಾರಿ ಮಂಜುನಾಥ ಬೋವಿ, ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಹಿರಿಯ ಸದಸ್ಯರಾದ ಬೀರಬ್ಬಿ ಬಸವರಾಜ, ಶಂಕರ್ ಬೆಟಗೇರಿ, ಮುಖಂಡ ಕೆ. ಪುತ್ರೇಶ್, ಸಿ.ಚಂದ್ರಪ, ಕೆಆರ್‌ಐಡಿಎಲ್‌ಎಇಇ ಜಯನಾಯ್ಕ ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಕುರಿ, ತಾಲೂಕು ಅಧ್ಯಕ್ಷ ದೊಡ್ಡಬಸಪ್ಪ, ಮೇಲ್ವಿಚಾರಕರಾದ ಮರಿಯಪ್ಪ, ಮಲ್ಲಿಕಾರ್ಜುನ ಲಿಂಗನಗೌಡ, ಗಿರಿಜಮ್ಮ, ಉಮಾ, ಶಾಂತಿಬಾಯಿ, ಡಯಾನ, ಪಂಚಾಕ್ಷರಿ, ಅಯ್ಯನಗೌಡ, ಶಿವಕುಮಾರ್, ಸುರೇಶ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಕೊಟ್ಟೂರುಗೌಡ, ನಿವೃತ್ತ ಶಿಕ್ಷಕ ಸಿ.ಚಂದ್ರಪ್ಪ ಇದ್ದರು.

ಇದೇ ವೇಳೆ ಹೊಸ ಪುಸ್ತಕಗಳ ಪ್ರದರ್ಶನಕ್ಕೆ ಶಾಸಕರು ಚಾಲನೆ ನೀಡಿದರು. ಶಾಖಾ ಗ್ರಂಥಾಲಯ ಇಲಾಖೆ, ಗ್ರಾಪಂ ಮೇಲ್ವಿಚಾರಕರ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.

ಇದೇ ವೇಳೆ ಹೊಸ ಪುಸ್ತಕಗಳ ಪ್ರದರ್ಶನಕ್ಕೆ ಶಾಸಕರು ಚಾಲನೆ ನೀಡಿದರು. ಶಾಖಾ ಗ್ರಂಥಾಲಯ ಇಲಾಖೆ, ಗ್ರಾಪಂ ಮೇಲ್ವಿಚಾರಕರ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾನ್ಕುಳಿಯಲ್ಲಿ ಗೋವು-ಮಣ್ಣು-ಅಡಕೆ ಮಾಹಿತಿ ಶಿಬಿರ
ನಾಡಬಾಂಬ್ ಸ್ಫೋಟ; ಅಕ್ಕಪಕ್ಕದ ಮನೆಗಳು ಛಿದ್ರ