ರಾಣಿಬೆನ್ನೂರು: ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯವಾಗಿದ್ದು ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಆಟಗಳಲ್ಲಿ ಭಾಗವಹಿಸಬೇಕು ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಓಲಂಪಿಕ್ ಕ್ರೀಡಾಕೂಟದಲ್ಲಿ ದೇಶದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಬೇಕು ಎಂಬ ಕನಸಿದೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಿಂದ ಗ್ರಾಮೀಣ ಪ್ರದೇಶದ ಪ್ರತಿಭೆಗಳ ಅನ್ವೇಷಣೆ ಚಿಂತನೆ ಹಾಗೂ ಕ್ರೀಡೆಗೆ ಪೋತ್ರಾಹ ನೀಡುವ ಸಲುವಾಗಿ ಸಂಸದರ ಕ್ರೀಡಾ ಮಹೋತ್ಸವವನ್ನು ಅಂತಾರಾಷ್ಟ್ರಿಯ ಕ್ರೀಡಾಕೂಟಗಳ ಮಾದರಿಯಲ್ಲಿ ಆಯೋಜಿಸಲಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಸ್ಥಳೀಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು ಎಂದರು.
ಇಂದು ಸಂಸದ ಬಸವರಾಜ ಬೊಮ್ಮಾಯಿ ಜನ್ಮವೂ ಆಗಿರುವುದರಿಂದ ಕ್ರೀಡಾ ಮಹೋತ್ಸವಕ್ಕೆ ವಿಶೇಷ ಮೆರಗು ಉಂಟಾಗಿದೆ. ಸಂಸದರ ಜನ್ಮದಿನವನ್ನು ಚಿರಸ್ಥಾಯಿಯಾಗಿಸಲು ಪ್ರತಿವರ್ಷ ಈ ದಿನ ಒಂದಿಲ್ಲೊಂದು ಕ್ರೀಡೆ ಆಯೋಜಿಸುತ್ತೇನೆ. ಮುಂದಿನ ವರ್ಷ ಜ. 28ರಂದು ಇದೇ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯ ಏರ್ಪಡಿಸುವೆ ಎಂದರು.ಸ್ನೇಹದೀಪ ಅಂಧರ ಸಂಸ್ಥೆ ಮಕ್ಕಳು ಕ್ರೀಡಾ ಮಹೋತ್ಸವ ಉದ್ಘಾಟಿಸಿದರು.
ಕೆ. ಶಿವಲಿಂಗಪ್ಪ ಮಾತನಾಡಿ, ದೇಶಿಯ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಅನುಭವ ಮೂಡಿಸಲು ಸಂಸದರ ಕ್ರೀಡಾ ಮಹೋತ್ಸವ ಆಯೋಜಿಸಲಾಗಿದೆ. ಇದೇ ದಿನ ಸಂಸದ ಬಸವರಾಜ ಬೊಮ್ಮಾಯಿ ಜನ್ಮದಿನ ಇರುವುದು ಕಾಕತಾಳೀಯ. ಸ್ಥಳೀಯ ಕ್ರೀಡಾಪಟುಗಳು ಕ್ರೀಡಾಮಹೋತ್ಸವದ ಸದ್ಬಳಕೆ ಮಾಡಿಕೊಂಡು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.ಭಾರತಿ ಜಂಬಗಿ ಮಾತನಾಡಿ, ಈ ಹಿಂದೆ ಮಹಿಳಾ ಕ್ರೀಡಾಪಟುಗಳಿಗೆ ಸರಿಯಾದ ಅವಕಾಶ ಇರಲಿಲ್ಲ. ಸಂಸದರ ಕ್ರೀಡಾ ಮಹೋತ್ಸವ ಮೂಲಕ ಎಲ್ಲರಿಗೂ ಉತ್ತಮ ಅವಕಾಶ ಲಭಿಸಿದೆ. ಗೆದ್ದ ಕ್ರೀಡಾಪಟುಗಳು ಸೋತವರನ್ನು ಹಿಯಾಳಸಿದೆ. ಅವರು ಮುಂದಿನ ಸಲ ಗೆಲುವಿಗೆ ಶ್ರಮಿಸುವಂತೆ ಪ್ರೋತ್ಸಾಹಿಸಬೇಕು ಎಂದರು.
ವ್ಹಿ.ಪಿ. ಲಿಂಗನಗೌಡ್ರ, ಶಿವಣ್ಣ ನಂದಿಹಳ್ಳಿ, ಮಂಜುನಾಥ ಓಲೇಕಾರ, ಪ್ರಕಾಶ ಜೈನ್, ಸುರೇಶ ಸಿ.ಟಿ.,ಎಸ್.ಎಸ್. ರಾಮಲಿಂಗಣ್ಣನವರ, ಚೋಳಪ್ಪ ಕಸವಾಳ, ಮಂಜುನಾಥ ಕಾಟಿ, ಸುಭಾಸ ಸಿರಿಗೆರಿ, ನಾಗರಾಜ ಪವಾರ, ಮಲ್ಲಿಕಾರ್ಜುನ ಅಂಗಡಿ, ಮಾಳಪ್ಪ ಪೂಜಾರ, ಪ್ರಕಾಶ ಪೂಜಾರ, ಕುಬೇರ ಕೊಂಡಜ್ಜಿ, ಪರಮೇಶ ಗೂಳಣ್ಣನವರ, ಸಿದ್ದು ಚಿಕ್ಕಬಿದರಿ, ನಿಂಗಪ್ಪ ಕೋಡಿಹಳ್ಳಿ, ಪವನಕುಮಾರ ಮಲ್ಲಾಡದ, ಬಸವರಾಜ ಚಳಗೇರಿ, ಶಿವಪುತ್ರಪ್ಪ ದೇಸಾಯಿ, ರಾಜು ಜಡಮಲಿ, ಹುಚ್ಚಪ್ಪ ಮೆಡ್ಲೇರಿ, ಚೆನ್ನಮ್ಮ ಗುರುಪಾದೇವರಮಠ, ಅಮೋಘ ಬದಾಮಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.