ಜಾನಪದ ಕಲೆ ಉಳಿಸಿ, ಬೆಳೆಸೋಣ: ಗುರುರಾಜ ಹೊಸಕೋಟೆ

KannadaprabhaNewsNetwork |  
Published : Aug 27, 2024, 01:32 AM IST
26ಎಚ್‌ಪಿಟಿ3- ಹೊಸಪೇಟೆಯಲ್ಲಿ ಇತ್ತೀಚೆಗೆ ನಡೆದ ಶ್ರೀಕೀರ್ತಿ ಜಾನಪದ ಮತ್ತು ಸುಗಮ ಸಂಗೀತ ಕಲಾ ಟ್ರಸ್ಟ್‌ ಗೆ ಜಾನಪದ ಕಲಾವಿದ ಗುರುರಾಜ ಹೊಸಕೋಟೆ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರತಿಯೊಬ್ಬರು ಪಾಶ್ಚಾತ್ಯ ಸಂಗೀತಗಳಿಗೆ ಮಾರು ಹೋಗುತ್ತಿದ್ದಾರೆ.

ಹೊಸಪೇಟೆ: ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಜೀವಂತಿಕೆಯಿಂದ ಇಡಬೇಕಿದೆ. ಜಾನಪದ ಇತಿಹಾಸ ಸಾವಿರಾರು ವರ್ಷಗಳ ಹಳೆಯದಾಗಿದ್ದು, ಅದನ್ನು ಉಳಿಸಿ, ಬೆಳೆಸಬೇಕಿದೆ ಎಂದು ಜಾನಪದ ಕಲಾವಿದ ಗುರುರಾಜ ಹೊಸಕೋಟೆ ಹೇಳಿದರು.

ನಗರದಲ್ಲಿ ಇತ್ತೀಚೆಗೆ ನಡೆದ ಶ್ರೀಕೀರ್ತಿ ಜಾನಪದ ಮತ್ತು ಸುಗಮ ಸಂಗೀತ ಕಲಾ ಟ್ರಸ್ಟ್‌ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಪಾಶ್ಚಾತ್ಯ ಸಂಗೀತಗಳಿಗೆ ಮಾರು ಹೋಗುತ್ತಿದ್ದಾರೆ. ಜಾನಪದ ಕಲೆಯನ್ನು ನಾವೆಲ್ಲರೂ ಒಟ್ಟುಗೂಡಿ ಉಳಿಸಿ, ಬೆಳೆಸೋಣ ಎಂದರು.

ಬಿ.ಎಂ.ಎಂ. ಇಸ್ಪಾತ್ ಕಂಪನಿಯ ವ್ಯವಸ್ಥಾಪಕ ಗಣೇಶ ಹೆಗಡೆ, ಪದ್ಮಶ್ರೀ ಪುರಸ್ಕೃತ ಮಾತಾ ಮಂಜಮ್ಮ ಜೋಗತಿ, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ಮಲ್ಲಿಗೆ ಹೋಟೆಲ್ ಮಾಲೀಕ ಪಿ.ಡಿ.ಗೌತಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್, ವಕೀಲ ಪಿ.ವೆಂಕಟೇಶ, ಮುಖಂಡರಾದ ಗುಜ್ಜಲ್ ಗಣೇಶ್, ಕಸಾಟಿ ಉಮಾಪತಿ, ತಾರಿಹಳ್ಳಿ ಜಂಬುನಾಥ, ಬೋಡಾ ರಾಮಪ್ಪ, ಎಸ್.ಎಸ್. ಚಂದ್ರಶೇಖರ್, ಮದುರಚನ್ನಶಾಸ್ತ್ರಿ, ಪರಮೇಶ್ವರ ಗೌಡ, ಹೊನ್ನೂರ್‌ವಲಿ ಸಾಹೇಬ್‌ ಮತ್ತಿತರರಿದ್ದರು. ವಕೀಲ ಎಚ್.ಪಿ.ಕಲ್ಲಂಭಟ್, ಟ್ರಸ್ಟ್‌ನ ಅಧ್ಯಕ್ಷೆ ಕಮಲಾ ಕುಲಕರ್ಣಿ ನಿರ್ವಹಿಸಿದರು.

ಹೊಸಪೇಟೆಯಲ್ಲಿ ಇತ್ತೀಚೆಗೆ ನಡೆದ ಶ್ರೀಕೀರ್ತಿ ಜಾನಪದ ಮತ್ತು ಸುಗಮ ಸಂಗೀತ ಕಲಾ ಟ್ರಸ್ಟ್‌ ಗೆ ಜಾನಪದ ಕಲಾವಿದ ಗುರುರಾಜ ಹೊಸಕೋಟೆ ಅವರು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ