ಸಮಾಜದ ತಾಯಿ ಬೇರು ಗಟ್ಟಿಮಾಡೋಣ: ಪ್ರೊ. ಐ.ಕೆ. ನಾಯ್ಕ

KannadaprabhaNewsNetwork |  
Published : Oct 06, 2025, 01:01 AM IST
ಫೋಟೋ : ೫ಕೆಎಂಟಿ_ಒಸಿಟಿ_ಕೆಪಿ೩ : ಕೂಜಳ್ಳಿಯಲ್ಲಿ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಪ್ರೊ.ಐ.ಕೆ.ನಾಯ್ಕ, ಈಶ್ವರ ನಾಯ್ಕ, ಸುಜಾತಾ ನಾಯ್ಕ, ವೀಣಾ ನಾಯ್ಕ, ಗುರುಪಾದ ನಾಯ್ಕ, ಸುಬ್ಬಯ್ಯ ನಾಯ್ಕ, ಎನ್.ಆರ್.ಗಜು, ಗಜಾನನ ನಾಯ್ಕ ಇತರರು ಇದ್ದರು.   | Kannada Prabha

ಸಾರಾಂಶ

ಸಮಾಜದ ವೃಕ್ಷ ಸದೃಢವಾಗಬೇಕಾದರೆ, ಅದರ ತಾಯಿ ಬೇರು ಸಹಿತ ಎಲ್ಲ ಬೇರುಗಳೂ ಕೂಡಾ ಸದೃಢವಾಗಿರಬೇಕು.

ಕನ್ನಡಪ್ರಭ ವಾರ್ತೆ ಕುಮಟಾ

ಸಮಾಜದ ವೃಕ್ಷ ಸದೃಢವಾಗಬೇಕಾದರೆ, ಅದರ ತಾಯಿ ಬೇರು ಸಹಿತ ಎಲ್ಲ ಬೇರುಗಳೂ ಕೂಡಾ ಸದೃಢವಾಗಿರಬೇಕು. ಈ ನಿಟ್ಟಿನಲ್ಲಿ ನಮ್ಮ ಸಮಾಜದ ತಾಯಿ ಬೇರನ್ನು ಬಲಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಐ.ಕೆ. ನಾಯ್ಕ ಹೇಳಿದರು.

ಕೂಜಳ್ಳಿಯ ಶ್ರೀ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಸ್ಥಳೀಯ ಶ್ರೀವೆಂಕಟೇಶ್ವರ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಾಡದ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿ ಸುಜಾತಾ ನಾಯ್ಕ ಮಾತನಾಡಿ, ತಾಯಿ-ತಂದೆಯರ ತ್ಯಾಗ, ಗುರುಗಳ ಮಾರ್ಗದರ್ಶನ, ಸ್ನೇಹಿತರ ಪ್ರೋತ್ಸಾಹ, ಸಮಾಜದ ಬೆಂಬಲ ಇವೆಲ್ಲವೂ ವಿದ್ಯಾರ್ಥಿ ಬದುಕಿಗೆ ಶಕ್ತಿ ತುಂಬುತ್ತವೆ ಎಂದರು.

ಅಂಕಣಕಾರ ಎನ್.ಆರ್. ಗಜು ಮಾತನಾಡಿ, ಮಕ್ಕಳ ಶ್ರಮವನ್ನು ಸಮಾಜ ಗುರುತಿಸಿ ಸನ್ಮಾನಿಸುತ್ತಿರುವುದು ಅವರ ಜೀವನದ ಪುಟಗಳಲ್ಲಿ ಸದಾ ಹಸಿರಾಗಿದ್ದು ಶಾಶ್ವತ ಕೀರ್ತಿಗೆ ಕಾರಣವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಈಶ್ವರ ರುಕ್ಕು ನಾಯ್ಕ ಸಂಘಟನೆಗಾಗಿ ಎಲ್ಲರ ಸಹಕಾರ ಕೋರಿದರು. ಸಂಘದ ಉಪಾಧ್ಯಕ್ಷ ಸುಬ್ಬಯ್ಯ ನಾಯ್ಕ, ಗುರುಪಾದ ನಾಯ್ಕ, ಪಂಚಾಯಿತಿ ಸದಸ್ಯ ಗಜಾನನ ಎಸ್. ನಾಯ್ಕ, ವೀಣಾ ನಾಯ್ಕ ಮಾತನಾಡಿದರು.

ಅಂಗನವಾಡಿಯಿಂದ ಎಸ್‌ಎಸ್‌ಎಲ್‌ಸಿ ವರೆಗಿನ ಆಯ್ದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಸಾಧಕರನ್ನು ಪ್ರೋತ್ಸಾಹಿಸಲಾಯಿತು.

ರೂಪಾ ಸಂತೋಷ ನಾಯ್ಕ ಗಣೇಶ ಸ್ತುತಿ ಪ್ರಸ್ತುತಪಡಿಸಿದಳು. ಶಿಕ್ಷಕಿ ಮಾಯಾ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಆರ್.ಬಿ. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಉಮೇಶ ನಾಯ್ಕ ವಂದಿಸಿದರು. ಸಂಘದ ಯಶ್ವಂತ ನಾಯ್ಕ, ಕರುಣಾಕರ ನಾಯ್ಕ, ಅನಿಲ ನಾಯ್ಕ, ಲಕ್ಷ್ಮೀಶ ನಾಯ್ಕ, ರಾಜು ನಾಯ್ಕ, ಮಂಜುನಾಥ ನಾಯ್ಕ, ಶೇಖರ ನಾಯ್ಕ ಇತರರು ಇದ್ದರು.

PREV

Recommended Stories

5 ವರ್ಷ ಸಿಎಂ ಎಂದೇ ಸಿದ್ದುಗೆ ಮತ ಹಾಕಿದ್ದೇವೆ : ರಾಯರಡ್ಡಿ
ಹಸು ಕೊಂದಿದ್ದಕ್ಕೆ ಎಂ.ಎಂ.ಹಿಲ್ಸ್‌ ಹುಲಿಯ ಹತ್ಯೆಗೈದು ಪ್ರತೀಕಾರ!