ಜಿ.ಎಸ್. ಪಾಟೀಲಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಪತ್ರ ಚಳವಳಿ

KannadaprabhaNewsNetwork |  
Published : Nov 29, 2025, 11:08 PM IST
28 ರೋಣ 1. ಶಾಸಕ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ‌ ನೀಡುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ವತಿಯಿಂದ 10 ಸಾವಿರ ಅಂಚೆಪತ್ರ ಮೂಲಕ‌ ಮನವಿ ಹಾಗೂ  ಬೃಹತ್ ಪ್ರತಿಭಟನೆ ಜರುಗಿತು.28 ರೋಣ 1ಎ. ಅಭಿಮಾನಿ ಸಹಬ್ಬಾಜ ಗದಗಕರ  ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ಶಾಸಕ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಗಮನ ಸೆಳೆದರು | Kannada Prabha

ಸಾರಾಂಶ

ರೋಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮುತ್ತು ನವಲಗುಂದ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲ ಅವರು 4 ದಶಕ ಕಾಲ ಪಕ್ಷ ಸಂಘಟನೆಗಾಗಿ ದುಡಿದಿದ್ದಾರೆ. 8 ಬಾರಿ ಸ್ಪರ್ಧಿಸಿ 5 ಬಾರಿ ಶಾಸಕರು, 3 ಬಾರಿ ನಿಗಮದ ಅಧ್ಯಕ್ಷರು ಸೇರಿದಂತೆ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದರು.

ರೋಣ: ಶಾಸಕ ಜಿ.ಎಸ್. ಪಾಟೀಲ ಅವರು ಸಚಿವ ಸ್ಥಾನಕ್ಕೆ ಎಲ್ಲ ರೀತಿಯಲ್ಲೂ ಅರ್ಹರಿದ್ದು, ಈ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿ ಯುವ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಹೈಕಮಾಂಡ್‌ಗೆ 10 ಸಾವಿರ ಪತ್ರ ಚಳವಳಿ ಮೂಲಕ ವಿನಂತಿಸಿದರು.

ಪಟ್ಟಣದ ಸಿದ್ಧಾರೂಢ ಮಠದಿಂದ ಪ್ರಾರಂಭಗೊಂಡ ಪ್ರತಿಭಟನಾ ರ್‍ಯಾಲಿ ಸೂಡಿ ವೃತ್ತದಿಂದ ಮುಲ್ಲನಬಾವಿ ವೃತ್ತ ತಲುಪಿ, ಅಲ್ಲಿ‌ ಮಾನವ ಸರಪಳಿ ನಿರ್ಮಿಸಲಾಯಿತು. ಈ ವೇಳೆ ರೋಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮುತ್ತು ನವಲಗುಂದ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲ ಅವರು 4 ದಶಕ ಕಾಲ ಪಕ್ಷ ಸಂಘಟನೆಗಾಗಿ ದುಡಿದಿದ್ದಾರೆ. 8 ಬಾರಿ ಸ್ಪರ್ಧಿಸಿ 5 ಬಾರಿ ಶಾಸಕರು, 3 ಬಾರಿ ನಿಗಮದ ಅಧ್ಯಕ್ಷರು ಸೇರಿದಂತೆ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಅಪಾರ ಪಕ್ಷ ನಿಷ್ಠೆ ಹೊಂದಿದ ಜಿ.ಎಸ್. ಪಾಟೀಲರು ಜಿಲ್ಲೆಯಲ್ಲಿಯೇ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ ಎಂದರು. .

ಪುರಸಭೆ ಸದಸ್ಯ ಮಲ್ಲಯ್ಯ ಗುರುಬಸಪ್ಪನಮಠ ಮಾತನಾಡಿ, ಜಿಲ್ಲೆಯ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ಅಂದಾದಲ್ಲಿ ಜಿ.ಎಸ್‌. ಪಾಟೀಲರಿಗೆ ಅನ್ಯಾಯವಾಗುವದಿಲ್ಲವೇ ? ಜಿ.ಎಸ್‌. ಪಾಟೀಲರನ್ನು ಸಚಿವರನ್ನಾಗಿ ಕಾಣುವಲ್ಲಿ ನಾವು ಇನ್ನು ಎಷ್ಟು ವರ್ಷ ತಡೆದುಕೊಳ್ಳಬೇಕು? ಬೇಕಿದ್ದರೆ ಜಿ.ಎಸ್. ಪಾಟೀಲರು ಸಚಿವ ಸ್ಥಾನಕ್ಕೆ ಅರ್ಹರಿದ್ದಾರೋ, ಇಲ್ಲವೋ ಎಂಬುದನ್ನು ಹೈಕಮಾಂಡ್ ಪರೀಕ್ಷಿಸಿ ನೋಡಲಿ ಎಂದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವೀರಣ್ಣ ಶೆಟ್ಟರ, ಸಿದ್ದಣ್ಣ ಬಂಡಿ, ಎಚ್.ಎಸ್. ಸೊಂಪೂರ, ಗೀತಾ ಕೊಪ್ಪದ, ಲಕ್ಷ್ಮೀ ಗಡಗಿ ಮುಂತಾದವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಕ್ಷಯ ಪಾಟೀಲ, ಕಾರ್ಯದರ್ಶಿ ಮಹೇಶ ಕಳಸಣ್ಣವರ, ಪಿಕಾರ್ಡ್‌ ಬ್ಯಾಂಕ್‌ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಅಪ್ಪು ಗಿರಡ್ಡಿ, ಸಂಗು ನವಲಗುಂದ, ಅಭಿಷೇಕ ನವಲಗುಂದ, ಬಾವಾಸಾಬ ಬೆಟಗೇರಿ, ವೀರಯ್ಯ ಭಂಡಾರಿಮಠ, ಸೋಮು ನಾಗರಾಜ, ಯಲ್ಲಪ್ಪ ಕಿರೇಸೂರ, ಮೌನೇಶ ಹಾದಿಮನಿ, ಶಿವು ಹುಲ್ಲೂರ, ನಾಗಪ್ಪ‌ ದೇಶಣ್ಣವರ, ಮಲೀಕ ಯಲಿಗಾರ, ಮಹಮ್ಮದರಫಿ ಕರ್ನಾಚಿ, ರಾಜು ಪಲ್ಲೇದ, ಎಂ.ಎಸ್‌. ಪಾಟೀಲ, ಅಸ್ಲಾಂ‌ ಕೊಪ್ಪಳ, ಮೈಲಾರಪ್ಪ ಚಳ್ಳಮರದ, ಹನುಮಂತ ತಳ್ಳಿಕೇರಿ, ಯೂಸೂಫ ಇಟಗಿ, ನಾಜಬೇಗಂ ಯಲಿಗಾರ, ರತ್ನಾ ಕೊಳ್ಳಿ, ವಿದ್ಯಾ ಬಡಿಗೇರ ಮುಂತಾದವರು ಭಾಗವಹಿಸಿದ್ದರು.ಅಭಿಮಾನಿ ಕೇಶಮುಂಡನ

ಪಾದಯಾತ್ರೆಯೂ ಮುಲ್ಲನಬಾವಿ ತಲುಪುತಿದ್ದಂತೆ ಅಭಿಮಾನಿ ಶಹಬ್ಬಾಜ ಗದಗಕರ ಕೇಶಮುಂಡನ ಮಾಡಿಕೊಳ್ಳುವ ಮೂಲಕ ಶಾಸಕ‌ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಕುಂಡಿಯಲ್ಲಿ ಸಿಕ್ತು ಲೋಹದ ಹಣತೆ, ಮೂಳೆ : ರಿತ್ತಿ ಕುಟುಂಬಕ್ಕೆ ನಿವೇಶನ
ಉದ್ಯೋಗಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ