ಮುಕ್ತ ವಿವಿ ಅನಗತ್ಯ ನೇಮಕಾತಿ ವಿರುದ್ಧ ಪತ್ರ ಚಳಿವಳಿ

KannadaprabhaNewsNetwork |  
Published : Dec 01, 2024, 01:31 AM IST
7 | Kannada Prabha

ಸಾರಾಂಶ

ಅನಾವಶ್ಯಕ ನೇಮಕಾತಿಯಿಂದಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಮುಕ್ತಾಯದ ಹಂತಕ್ಕೆ ತಲುಪಿದೆ ಎಂದು ಆರೋಪಿಸಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯವರು ನಗರ ಪಾಲಿಕೆ ಮುಂಭಾಗದಲ್ಲಿ ಶನಿವಾರ ಪತ್ರ ಚಳವಳಿ ಹಮ್ಮಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಅನಾವಶ್ಯಕ ನೇಮಕಾತಿಯಿಂದಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಮುಕ್ತಾಯದ ಹಂತಕ್ಕೆ ತಲುಪಿದೆ ಎಂದು ಆರೋಪಿಸಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯವರು ನಗರ ಪಾಲಿಕೆ ಮುಂಭಾಗದಲ್ಲಿ ಶನಿವಾರ ಪತ್ರ ಚಳವಳಿ ಹಮ್ಮಿಕೊಂಡಿದ್ದರು.

ವಯೋಮಾನದ ಅಂತರವಿಲ್ಲದೆ ಎಲ್ಲರು ಉನ್ನತ ಶಿಕ್ಷಣವಂತರಾಗಬೇಕೆಂಬ ಆಶಯದೊಂದಿಗೆ ಆರಂಭವಾದ ರಾಜ್ಯ ಮುಕ್ತ ವಿವಿಯಲ್ಲಿ ದಿನ ಕಳೆದಂತೆ ಬರಿ ಹಣಗಳಿಸುವ ದಿಕ್ಕಿನಲ್ಲಿ ದಾಪುಗಾಲಿರಿಸುವಂತ ಸ್ಥಿತಿಯಲ್ಲಿದೆ. ಮೌಲಿಕ ಶಿಕ್ಷಣಕ್ಕಿಂತ ಕಟ್ಟಡ ಕಟ್ಟುವ, ಅನಾವಶ್ಯಕ ನೇಮಕಾತಿ ಮಾಡುವ ದಂಧೆಯಲ್ಲಿ ಮುಳುಗಿ ಮುಕ್ತ ವಿವಿಯನ್ನು ಮುಚ್ಚುವ ಹಂತಕ್ಕೆ ತಲುಪಿಸಿದ್ದಾರೆ ಎಂದು ಅವರು ಆರೋಪಿಸಿದರು.

ವಿದ್ಯಾರ್ಥಿಗಳ ಸಂಖ್ಯೆಗಿಂತ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿ ಮಾಡುವ ಮೂಲಕ ಹಣ ವಸೂಲಿ ಮಾಡುವ ಕೃತ್ಯ ಈಗಾಗಲೇ ಬಹಿರಂಗವಾಗಿದೆ. ಈಗಲೂ 45 ಹೆಚ್ಚು ಜನರನ್ನು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಿಸಿದ್ದು, ಇದರ ಅವಶ್ಯಕತೆ ಇದಿಯೇ ಎಂದು ಅವರು ಪ್ರಶ್ನಿಸಿದರು.

ಮುಕ್ತ ವಿವಿಯಲ್ಲಿ ಲಭ್ಯವಿರುವ ಕಾರ್ಪಸ್ ನಿಧಿಯನ್ನು ಸರ್ಕಾರವು ವಹಿಸಿಕೊಳ್ಳಬೇಕು. ಐಎಎಸ್ ಅಥವಾ ಕೆಎಎಸ್ ಮಾಡಿರುವವರನ್ನು ವಿವಿಗೆ ಕುಲಸಚಿವರನ್ನಾಗಿ ನೇಮಿಸಬೇಕು. ಅನಗತ್ಯ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು. ಅನಗತ್ಯವಾಗಿ ಹೆಚ್ಚುವರಿ ನೇಮಕಾತಿಯನ್ನು ಈ ಕೊಡಲು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಕೂಡಲೇ ಉನ್ನತ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳು, ಕುಲಾಧಿಪತಿಗಳಾದ ರಾಜ್ಯಪಾಲರು ಮಧ್ಯಪ್ರವೇಶಿಸಿ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಿ. ತಪ್ಪು ಹಾದಿಯಲ್ಲಿ ಸಾಗುತ್ತಿರುವ ಮುಕ್ತ ವಿವಿಯನ್ನು ಸರಿ ದಾರಿಗೆ ತಂದು, ವಿದ್ಯಾರ್ಥಿಗಳಿಗೆ ಮುಕ್ತ ಶಿಕ್ಷಣವನ್ನು ನೀಡುವಂತಾಗಲು ಸಹಕರಿಸಬೇಕು ಎಂದು ಅವರು ಒತ್ತಾಯಿಸಿದರು.

ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್, ಪ್ರಧಾನ ಸಂಚಾಲಕ ವೆಂಕಟೇಶ್, ಮುಖಂಡರಾದ ರದಿವುಲ್ಲಾ ಖಾನ್, ಪ್ರಶಾಂತ್, ಕಾಂತರಾಜು, ಅನುಷಾ ರಾವ್, ಮೋಹನ್‌ ಕುಮಾರ್, ಶಂಕರ್‌ ಮೂರ್ತಿ, ಸದಾನಂದ್ ಮೊದಲಾದವರು ಇದ್ದರು.ಸಂಗೀತ, ಕ್ರೀಡೆ, ಕಲೆ ಮಗುವಿನ ಸರ್ವಾಂಗೀಣ ಬೆಳವಣಿಗೆಯ ಮುಖ್ಯ ಪ್ರೇರಕಗಳು: ಸುಧಾಕರ್ ಶೆಟ್ಟಿಕನ್ನಡಪ್ರಭ ವಾರ್ತೆ ಮೈಸೂರುಸಂಗೀತ, ಕ್ರೀಡೆ ಮತ್ತು ಕಲೆ ಮಗುವಿನ ಸರ್ವಾಂಗೀಣ ಬೆಳವಣಿಗೆಯ ಮುಖ್ಯ ಪ್ರೇರಕಗಳು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಸರ್ವತೋಮುಖವಾಗಿ ಬೆಳೆಸುವುದರತ್ತ ಪೋಷಕರು, ಶಿಕ್ಷಕರು ಗಮನ ಹರಿಸಬೇಕು ಎಂದು ಎಫ್ ಕೆಸಿಸಿ ಮಾಜಿ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಸಲಹೆ ನೀಡಿದರು.ನಗರದ ಜ್ಞಾನ ಸರೋವರ ಅಂತಾರಾಷ್ಟ್ರೀಯ ಶಾಲೆಯ ಆವರಣದ ಮಾನಸ ಸ್ವಿಮ್ಮಿಂಗ್ ಪೂಲ್ ನಲ್ಲಿ ನಡೆದ ಜಿಲ್ಲಾ ಶಾಲೆಗಳ ಸ್ವಿಮ್ಮಿಂಗ್ ಕಾಂಪಿಟೇಶನ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸ್ಪರ್ಧೆಗಳಲ್ಲಿ ಮೊದಲಿಗೆ ಬರುವುದು ಆತನಿಗೆ ಇರುವ ಲೋಕಜ್ಞಾನ. ಹಾಗೆಯೇ , ವಿದ್ಯಾರ್ಥಿ ದಿಸೆಯಲ್ಲಿ ಮಕ್ಕಳನ್ನು ಕೇವಲ ಪುಸ್ತಕದ ಹುಳುಗಳನ್ನಾಗಿ ಮಾಡದೆ, ಮಾನಸಿಕವಾಗಿ, ಬೌದ್ಧಿಕವಾಗಿ ಬೆಳೆಸಬೇಕಾದಂತಹ ಜವಾಬ್ದಾರಿ ಇಂದಿನ ಸಮಾಜಕ್ಕಿದೆ ಎಂದು ಹೇಳಿದರು.

ಖಾಸಗಿ ಶಾಲೆ ಒಕ್ಕೂಟದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಸ್ವಿಮ್ಮಿಂಗ್ ಅನ್ನುವಂತದ್ದು ದೇಹದಾಢ್ಯ ಸ್ಪರ್ಧೆಯಲ್ಲೂ ಮತ್ತು ಬೌದ್ಧಿಕ ಜ್ಞಾನಕ್ಕೆ ಸಹಕಾರಿಯಾಗಲಿದೆ ಎಂದರು.ಈಜು ಸ್ಪರ್ಧೆಯಲ್ಲಿ ಮೈಸೂರಿನ ಸುತ್ತಮುತ್ತಲ 200 ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲೆಯ ಪ್ರಾಂಶುಪಾಲ ವಿಶ್ವನಾಥ್ ಪಾಂಡೆ, ನಿರ್ದೇಶಕಿ ಸುಖಲತಾ ಶೆಟ್ಟಿ ಅವರು, ಶಿಕ್ಷಣ ನಿರ್ದೇಶಕ ಮುಕುಂದ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ