ದಾಬಸ್‍ಪೇಟೆ: ಸಮಾಜಕ್ಕೆ ನೀಡಿದ ಸೇವೆ ಎಂದಿಗೂ ನಶಿಸುವುದಿಲ್ಲಾ, ಸುಮಾರು 30 ಲಕ್ಷ ರು. ವೆಚ್ಚದಲ್ಲಿ ಮಹಿಮೆ ರಂಗನಾಥಸ್ವಾಮಿ ಬೆಟ್ಟದ ಮಹಾದ್ವಾರ ನಿರ್ಮಾಣಕ್ಕೆ ನೆರವಾದ ದಾನಿಗಳಾದ ನಾಗರತ್ನ ಮತ್ತು ಜಿ. ಎಚ್. ಪುಟ್ಟರಾಜು ಕಾರ್ಯ ಸಾರ್ಥಕವಾಗಿದೆ ಎಂದು ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪ್ರಕೃತಿ ಮಡಿಲಲ್ಲಿರುವ ಮಹಿಮಾಪುರ ಶ್ರೀ ಮಹಿಮೆ ರಂಗನಾಥ ಸ್ವಾಮಿಯ ದರ್ಶನಕ್ಕೆ ಸಾವಿರಾರು ಭಕ್ತರು ಮತ್ತು ದಾನಿಗಳು ಸಂಚರಿಸಲು ಈ ಮಹಾದ್ವಾರದ ಅವಶ್ಯಕತೆ ಇತ್ತು, ತಾವು ದುಡಿದ ಹಣದಲ್ಲಿ ಸಮಾಜಕ್ಕೆ ಸೇವೆ ಮತ್ತು ಧಾರ್ಮಿಕ ಕಾರ್ಯಕ್ಕೆ ಬಳಸುತ್ತಿರುವ ಗೋವೇನಹಳ್ಳಿ ಪುಟ್ಟರಾಜು ಮತ್ತು ಕುಟುಂಬದವರ ಕೆಲಸ ಶ್ಲಾಘನೀಯ ಎಂದರು.
ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಧರ್ಮ ಕಾರ್ಯಕ್ಕೆ ಯಾವುದೇ ಭೇದ ಭಾವವಿರುವುದಿಲ್ಲಾ, ಸಾಮಾಜಿಕವಾಗಿ ಬದುಕಿದ್ದಾಗ ಮಾತ್ರ ಇಂತಹ ಕಾರ್ಯ ಸಾಧ್ಯ, ಇಡೀ ಪುಟ್ಟರಾಜು ಕುಟುಂಬ ಈ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು, ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದರು.ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯರು, ಬಸವಣ್ಣದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ವನಕಲ್ಲು ಮಠದ ಡಾ.ಶ್ರೀ ಬಸವ ರಮಾನಂದನಾಥ ಸ್ವಾಮೀಜಿ, ಮಾಜಿ ವಿಪ ಸದಸ್ಯ ಇ.ಕೆ.ಕೃಷ್ಣಪ್ಪ, ಮಾಜಿ ಶಾಸಕರಾದ ಎಂ.ವಿ.ನಾಗರಾಜು, ಡಾ.ಕೆ.ಶ್ರೀನಿವಾಸಮೂರ್ತಿ, ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ್ರು, ಶ್ರೀನಿವಾಸ, ನರಸಿಂಹಯ್ಯ, ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ಭೃಂಗೇಶ್, ಯೋಜನ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಲ್ಲಯ್ಯ, ಡಾ.ಮಂಜುನಾಥ್, ಲೋಕೇಶ್, ಪೂರ್ಣಚಂದ್ರ ತೇಜಸ್ವಿ ಮತ್ತು ಸಹೋದರು ಸೇರಿದಂತೆ ಭಕ್ತರು ಮತ್ತು ಮುಖಂಡರಿದ್ದರು.