-ಮಸ್ಕಿಯಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ
ಕನ್ನಡಪ್ರ ವಾರ್ತೆ ಮಸ್ಕಿ
ಗ್ರಂಥಾಲಯ ಕೇವಲ ಪುಸ್ತಕಗಳ ಸಂಗ್ರಹಣಾ ಸ್ಥಳವಲ್ಲ. ಜ್ಞಾನ, ಕಲಿಕೆ, ಸಂಶೋಧನೆ ಹಾಗೂ ಮಾಹಿತಿ ವಿನಿಮಯದ ಪ್ರಮುಖ ಕೇಂದ್ರವಾಗಿದೆ ಎಂದು ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಡಾ.ಮಹಾಂತಗೌಡ ಪಾಟೀಲ ಹೇಳಿದರು.ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಿಂದ ಭಾರತದ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ, ಬೌದ್ಧಿಕ ಹಾಗೂ ಸಂಶೋಧನಾ ಬೆಳವಣಿಗೆಯಲ್ಲಿ ಗ್ರಂಥಾಲಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಉಪನ್ಯಾಸಕರಾದ ಡಾ.ಬಸವರಾಜ್ ತಡಕಲ, ಶ್ರೀನಿವಾಸ್, ಸಣ್ಣಪ್ಪ ನಾಯಕ, ಹಾಜಿಬಾಬು,ಡಾ.ರಾಜೀಯಾ ಬೇಗಂ, ಆಶಾ ಸಿ, ಗಿರಿಜಾ, ಡಾ.ವೀರಪ್ಪನಗೌಡ ಡಾ.ಪಂಪಾಪತಿ ನಾಯಕ, ಸಂಜು ನಾಯಕ,ಶರಣಬಸವ, ಗೋವಿಂದ ರೆಡ್ಡಿ, ರವಿ. ಡಾ.ವೀರೇಶ. ವೀರೇಶ, ರಮೇಶ್ ನಾಯಕ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ, ಗ್ರಂಥಾಲಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
14ಕೆಪಿಎಂಎಸ್‌ಕೆ01: