ಗ್ರಂಥಾಲಯ ಎಲ್ಲಕಾಲಕ್ಕೂ ಪ್ರಸ್ತುತ: ಎಸ್‌.ಆರ್‌. ಅರುಣ್ ಕುಮಾರ್

KannadaprabhaNewsNetwork |  
Published : Aug 15, 2026, 03:45 AM IST
13ಎಂಜಿಎಂ | Kannada Prabha

ಸಾರಾಂಶ

ಗ್ರಂಥಗಳು ಮತ್ತು ಗ್ರಂಥಾಲಯಗಳು ಕಾಲಾತೀತ ಪ್ರಸ್ತುತತೆಯನ್ನು ಹೊಂದಿವೆ, ಜ್ಞಾನದ ಪ್ರಸಾರ ಹಾಗೂ ಪುಸ್ತಕ ಸಂರಕ್ಷಣೆಯಲ್ಲಿ ಗ್ರಂಥಾಲಯಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಉಡುಪಿ ಪ್ರಾದೇಶಿಕ ಜಾನಪದ ರಂಗಕಲೆಗಳ ಸಂಪನ್ಮೂಲ ಕೇಂದ್ರದ (ಆರ್.ಆರ್.ಸಿ) ಮುಖ್ಯ ಸಂಶೋಧಕರಾದ ಡಾ. ಎಸ್. ಆರ್. ಅರುಣ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿ: ಗ್ರಂಥಗಳು ಮತ್ತು ಗ್ರಂಥಾಲಯಗಳು ಕಾಲಾತೀತ ಪ್ರಸ್ತುತತೆಯನ್ನು ಹೊಂದಿವೆ, ಜ್ಞಾನದ ಪ್ರಸಾರ ಹಾಗೂ ಪುಸ್ತಕ ಸಂರಕ್ಷಣೆಯಲ್ಲಿ ಗ್ರಂಥಾಲಯಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಉಡುಪಿ ಪ್ರಾದೇಶಿಕ ಜಾನಪದ ರಂಗಕಲೆಗಳ ಸಂಪನ್ಮೂಲ ಕೇಂದ್ರದ (ಆರ್.ಆರ್.ಸಿ) ಮುಖ್ಯ ಸಂಶೋಧಕರಾದ ಡಾ. ಎಸ್. ಆರ್. ಅರುಣ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಎಂ.ಜಿ.ಎಂ ಕಾಲೇಜಿನ ಗ್ರಂಥಾಲಯವು ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನ ಹಾಗೂ ಗ್ರಂಥಾಲಯ ದಿನದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕರ್ಮಯೋಗಿ ಡಾ. ಎಸ್. ಆರ್. ರಂಗನಾಥನ್ ಹಾಕಿಕೊಟ್ಟ ಗ್ರಂಥಾಲಯ ವಿಜ್ಞಾನದ ಬುನಾದಿಯಿಂದಾಗಿ ಗ್ರಂಥಾಲಯಗಳು, ಹಾಗೂ ಗ್ರಂಥಾಲಯ ಸಿಬ್ಬಂದಿ ಒಳ್ಳೆಯ ಸೇವೆಯನ್ನು ಒದಗಿಸಿ ಶಿಕ್ಷಣಕ್ಕೆ ಮತ್ತು ಸಂಶೋಧನೆಗೆ ಒಳ್ಳೆಯ ಬೆಂಬಲವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ಡಾ. ಗಾಯತ್ರಿ ಪೈ ಮಾತನಾಡಿ, ಗ್ರಂಥಾಲಯ ಎಂಬುದು ವಿದ್ಯಾದೇಗುಲ. ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕಾಲೇಜಿನ ಉಪಪ್ರಾಂಶುಪಾಲ ಡಾ. ಎಂ. ವಿಶ್ವನಾಥ ಪೈ, ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಮಾಲತಿ ದೇವಿ ಮಾತನಾಡಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಪ್ರೊ. ಶೈಲಜಾ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ವೀರಾ ಐಡಾ ಪಿಂಟೋ ಉಪಸ್ಥಿತರಿದ್ದರು.

ಗ್ರಂಥಪಾಲಕ ಕಿಶೋರ್ ಹೆಚ್.ವಿ. ಸ್ವಾಗತಿಸಿ ವಂದಿಸಿದರು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ನಿರೂಪಿಸಿದರು. ಡಾ. ಎಸ್. ಆರ್. ರಂಗನಾಥನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗಾಗಿ ವಿಶಿಷ್ಟ ಗ್ರಂಥಗಳ ಪ್ರದರ್ಶನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ನಾಗೇಂದ್ರ ರಾಜೀನಾಮೆಗೆ ಉಡುಪಿ ಬಿಜೆಪಿ ಆಗ್ರಹ
ಕರಾವಳಿಗೆ ಪ್ರತ್ಯೇಕ ನಿಯಮ ರೂಪಿಸಿ: ಗಂಟಿಹೊಳೆ