ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಾಣಿಜ್ಯ ಉದ್ದಿಮೆ, ವ್ಯವಹಾರ ನಡೆಸುತ್ತಿರುವ ವರ್ತಕರು ಕಾರ್ಮಿಕ ಇಲಾಖೆಯಿಂದ ಕಡ್ಡಾಯವಾಗಿ ಕಾರ್ಮಿಕ ಪರವಾನಗಿ ಪಡೆದುಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಹೇಳಿದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ವತಿಯಿಂದ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಲೇಬರ್ ಲೈಸೆನ್ಸ್ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವರ್ತಕರಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ಹಾಗೂ ವರ್ತಕರ ಸಮಸ್ಯೆ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಪರಿಹರಿಸಿಕೊಳ್ಳುವ ಆಶಯದಿಂದ ಇಂತಹ ಮೇಳಗಳು ಸಹಕಾರಿ ಆಗುತ್ತವೆ. ವರ್ತಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಕಾರ್ಮಿಕ ನೀರಿಕ್ಷಕಿ ಸುಖಿತಾ ಮಾತನಾಡಿ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಕಡ್ಡಾಯವಾಗಿದೆ. ಈ ಲೇಬರ್ ಲೈಸೆನ್ಸ್ ಮೇಳದ ಸದುಪಯೋಗ ಪಡೆದುಕೊಳ್ಳಬೇಕು. ವರ್ತಕರಿಗೆ, ಉದ್ಯಮಿಗಳಿಗೆ ಅಗತ್ಯ ಬೇಕಾಗಿರುವ ಕಾರ್ಮಿಕ ಪರವಾನಗಿ (ಲೇಬರ್ ಲೈಸೆನ್ಸ್) ಅನ್ನು ಮೇಳದಲ್ಲಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ಕಾರ್ಮಿಕ ನೀರಿಕ್ಷಕ ಭೀಮೇಶ್ ಮಾತನಾಡಿ, ಎಲ್ಲ ಅಂಗಡಿ, ವಾಣಿಜ್ಯ ಸಂಸ್ಥೆಗಳ ಮಾಲಿಕರು ಸಂಸ್ಥೆಯ ಅಗತ್ಯ ದಾಖಲೆಗಳೊಂದಿಗೆ ಪೂರ್ಣ ವಿವರ ಸಲ್ಲಿಸಿ ಮತ್ತು ಫೀ ಪಾವತಿಸಲು ಮೊಬೈಲ್ ಜೊತೆ ಆಗಮಿಸಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಆನ್ ಲೈನ್ ಮುಖಾಂತರವು ಲೈಸೆನ್ಸ್ ಪಡೆಯಬಹುದಾಗಿದೆ ಎಂದು ತಿಳಿಸಿದರು.ಗಾಂಧಿಬಜಾರ್ ವರ್ತಕರ ಸಂಘದ ಅಧ್ಯಕ್ಷ ವಿಜಯ ದಿನಕರ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್, ಗಣೇಶ್ ಅಂಗಡಿ, ಪರಮೇಶ್ವರ್, ರಾಕೇಶ್ ಸಾಕ್ರೆ, ಉದ್ಯಮಿಗಳು, ವರ್ತಕರು ಹಾಗೂ ಸಂಘದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
- - - -4ಎಸ್‌ಎಂಜಿಕೆಪಿ05:ಲೇಬರ್ ಲೈಸೆನ್ಸ್ ಮೇಳ ಕಾರ್ಯಕ್ರಮವನ್ನು ಜಿಲ್ಲಾ ವಾಣಿಜ್ಯ-ಕೈಗಾರಿಕಾ ಸಂಘ ಅಧ್ಯಕ್ಷ ಎನ್. ಗೋಪಿನಾಥ್ ಉದ್ಘಾಟಿಸಿದರು.