ಸಮಾಜದ ಒಳಿತಿಗಾಗಿ ಕೊಡುಗೆ ನೀಡಿದರೆ ಬದುಕು ಸಾರ್ಥಕ: ಸಿ.ಪಿ.ಶಿವರಾಜು

KannadaprabhaNewsNetwork |  
Published : Nov 06, 2026, 02:00 AM IST
5ಕೆಎಂಎನ್ ಡಿ12 | Kannada Prabha

ಸಾರಾಂಶ

ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ಕನಸು ಕಂಡಿದ್ದ ಮಹಾತ್ಮಗಾಂಧಿಜೀಯ ಕನಸನ್ನು ಯುವ ಸಮುದಾಯ ನನಸು ಮಾಡಬೇಕು. ಇಂತಹ ಶಿಬಿರಗಳ ಮೂಲಕ ಗ್ರಾಮದ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಮಾಜದಿಂದ ಎಲ್ಲವನ್ನು ಪಡೆದು ಬದುಕು ಕಟ್ಟಿಕೊಳ್ಳುವ ನಾವು ಮತ್ತೆ ಸಮಾಜದ ಒಳಿತಿಗಾಗಿ ಕೊಡುಗೆ ನೀಡಿದರೆ ಮಾತ್ರ ಬದುಕು ಸಾರ್ಥಕತೆ ಪಡೆದುಕೊಳ್ಳಲಿದೆ ಎಂದು ಎಸ್ ಟಿಜಿ ಶಿಕ್ಷಣ ಸಂಸ್ಥೆ ಸಿಇಒ ಸಿ.ಪಿ.ಶಿವರಾಜು ಸಲಹೆ ನೀಡಿದರು.

ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕೇವಲ ಶಿಕ್ಷಣದಿಂದ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ನಾವು ಕಲಿಯುವುದು ಸಾಕಷ್ಟಿದೆ. ಸಮಾಜದಿಂದ ಎಲ್ಲವನ್ನು ಪಡೆದುಕೊಳ್ಳುವ ನಾವುಗಳು ಮತ್ತೆ ಸಮಾಜಕ್ಕೆ ಏನಾದರು ಒಳ್ಳೆಯದನ್ನು ಕೊಡುವ ನಿಟ್ಟಿನಲ್ಲಿ ನಾವುಗಳು ಕೆಲಸ ಮಾಡಬೇಕು. ಆಗ ಮಾತ್ರ ಬದುಕು ಸಾರ್ಥಕತೆ ಪಡೆದುಕೊಳ್ಳಲಿದೆ ಎಂದರು.

ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ಕನಸು ಕಂಡಿದ್ದ ಮಹಾತ್ಮಗಾಂಧಿಜೀಯ ಕನಸನ್ನು ಯುವ ಸಮುದಾಯ ನನಸು ಮಾಡಬೇಕು. ಇಂತಹ ಶಿಬಿರಗಳ ಮೂಲಕ ಗ್ರಾಮದ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ಎನ್ ಎಸ್ ಎಸ್ ಶಿಬಿರದಲ್ಲಿ ಭಾಗವಹಿಸಿ ಎಲ್ಲಾ ಮಕ್ಕಳನ್ನು ಸುಂಕಾತೊಣ್ಣೂರು ಗ್ರಾಮಸ್ಥರು ಮನೆಮಕ್ಕಳಂತೆ ಪಾಲನೆ-ಪೋಷಣೆ ಮಾಡಿ ಶಿಬಿರದ ಯಶಸ್ಸಿಗೆ ಸಹಕಾರ ನೀಡಿದ್ದಾರೆ. ಹಾಗಾಗಿ ಎಸ್‌ಟಿಜಿ ಶಿಕ್ಷಣ ಸಂಸ್ಥೆ ಪರವಾಗಿ ಎಲ್ಲರಿಗೂ ಧನ್ಯವಾದ್ಯ ಅರ್ಪಿಸುತ್ತೇನೆ ಎಂದರು.

ಇದೇ ವೇಳೆ ಶಿಬಿರದಲ್ಲಿ ಭಾಗವಹಿಸಿ ಉತ್ತಮವಾಗಿ ಸೇವೆ ಸಲ್ಲಿಸಿದ ವಿನಯ್ ಅವರನ್ನು ಉತ್ತಮ ಸೇವಕ ಹಾಗೂ ದೀಪಾ ಅವರನ್ನು ಉತ್ತಮ ಸೇವಕಿ ಎಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಉದ್ಯಮಿ ಎಸ್.ಡಿ.ಶಿವಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಜೆ.ದೇವೇಗೌಡ, ಕನಗನಮರಡಿ ಸೊಸೈಟಿ ಮಾಜಿ ಅಧ್ಯಕ್ಷ ಹೆಗ್ಗಡಹಳ್ಳಿ ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ದೇವೇಗೌಡ, ಪಾರ್ಥ ಸಾರಥಿ, ಚಿಕ್ಕಾಡೆ ಚೇತನ್, ಪ್ರಕಾಶ್, ರಾಜ್‌ಕುಮಾರ್, ಮಹೇಶ್, ಕೆ.ಶಾಂತಮೂರ್ತಿ, ರಮೇಶ್, ಅಂಗಡಿಹರೀಶ, ಮೊಗ್ಗಣ್ಣ, ಪ್ರಸನ್ನ, ಧರ್ಮಣ್ಣ, ರಾಮು, ಪ್ರಾಂಶುಪಾಲ ನಿಶಾಂತ್ ನಾಯ್ಡು, ಕನ್ನಡ ಪ್ರಾಧ್ಯಾಪಕ ಶ್ರೀಧರ್, ಶಿಬಿರಾಧಿಕಾರಿ ನಿರಂಜನ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌: ನ್ಯಾಯಾಲಯಕ್ಕೆ ಹಲವು ದಾಖಲೆ ಸಲ್ಲಿಸಿದ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ
ಮದುವೆ ಆಗುವಂತೆ ಉದ್ಯಮಿಗೆ ಹನಿಟ್ರ್ಯಾಪ್: ₹2 ಕೋಟಿ ಬೇಡಿಕೆ