ಕನ್ನಡಪ್ರಭ ವಾರ್ತೆ ರೋಣ
ಗುರುವಾರ ತಾಲೂಕುನ ಸವಡಿ ಗ್ರಾಮದ ಶ್ರೀ ಯರೇಶಿಗಮ್ಮದೇವಿ ದೇಗುಲದ ನೂತನ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಕೆಲಸವಾಗಲಿ, ಸಮಾಜಮುಖಿ ಕೆಲಸವಾಗಲಿ ಅವಕಾಶ ಸಿಕ್ಕಾಗ ಹಿಂದೆ ಮುಂದೆ ನೋಡದೇ ನಿಸ್ವಾರ್ಥತೆಯಿಂದ ಸೇವೆ ಮಾಡಬೇಕು. ಸವಡಿ ಯರೇಶಿಗಮ್ಮದೇವಿ ಶಕ್ತಿದೇವತೆಯಾಗಿದ್ದು, ದೇವಿಯ ಮಹಿಮೆ ಅಪಾರವಿದೆ. ಈ ಪುಣ್ಯ ಸ್ಥಳ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು, ಅಸಂಖ್ಯಾತ ಭಕ್ತರನ್ನು ಹೊಂದಿದ ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಲಿ. ಇಲ್ಲಿ ನಿರ್ಮಾಣಗೊಂಡ ಸಮೂದಾಯ ಭವನ ಸಮಾಜಮುಖಿ ಕಾರ್ಯಗಳಿಗೆ ಉಪಯೋಗವಾಗಬೇಕು. ಊರಾಚೆ ಇರುವ ಈ ಭವನದ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದರು.ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಸಾಧನೆ ಮಾಡಬೇಕೇ ಹೊರತು, ಸಾಧನೆ ಮಾತಾಗಬಾರದು ಎಂದು ನನ್ನ ತಂದೆ ಬಿ.ಎಸ್. ಯಡಿಯೂರಪ್ಪನವರು ಹೇಳುತ್ತಿದ್ದು, ಅವರ ಮಾತು, ಅವರು ತೋರಿದ ಮಾರ್ಗದರ್ಶನದಲ್ಲಿ ನಾನಿಂದು ನಡೆಯುತ್ತಿದ್ದೇನೆ. ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸವಡಿ ಗ್ರಾಮದ ಯರೇಶಿಗಮ್ಮದೇವಿ ದೇಗುಲಕ್ಕೆ ಸಮೂದಾಯ ಭವನ ನಿರ್ಮಾಣಕ್ಕೆ ₹2 ಕೋಟಿ ಅನುದಾನ ನೀಡಿದ್ದು, ಅತ್ಯಂತ ಸುಂದರವಾಗಿ ಇಲ್ಲಿ ಸಮುದಾಯ ಭವನ ನಿರ್ಮಿಸಿದ್ದು ನನಗೆ ಸಂತಸ ತಂದಿದೆ. ಜೊತೆಗೆ ₹3.5 ಕೋಟಿ ವೆಚ್ಚದಲ್ಲಿ ಗ್ರಾಮದಲ್ಲಿ ಅಲ್ಲಲ್ಲಿ ಸಿಸಿ ರಸ್ತೆ, ಯರೇಶಿಗಮ್ಮದೇವಿ ದೇಗುಲ ಸಂಪರ್ಕ ರಸ್ತೆ ಡಾಂಬರೀಕರಣ ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗುಲಗಂಜಿ ಮಠದ ಗುರುಪಾದ ದೇವರು, ಮಂಜುನಾಥ ಗದಗ, ಪರಪ್ಪ ಗದಗ, ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ, ಅಪ್ಪಣ್ಣ ಗದಗ, ತೇಜಸ್ವಿನಿ ರಾಘವೇಂದ್ರ, ನೀರಾವರಿ ಇಲಾಖೆ ಎಇಇ ಜಗದೀಶ ಬಿ., ಪ್ರಕಾಶ ಜಾಲಣ್ಣವರ ಮುಂತಾದವರಿದ್ದರು. ಶ್ರೀಶೈಲ ಇಟಗಿ ಸ್ವಾಗತಿಸಿದರು.