ಕನ್ನಡಪ್ರಭ ವಾರ್ತೆ ಕಡೂರು
ಕಡೂರು ಟೌನ್ ಪೂರ್ವ ವಲಯದ ಕ್ಲಸ್ಟರ್‌ಗಳ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕೆ.ಎಲ್.ವಿ ಸಂಸ್ಥೆ ವಿಶ್ವಭಾರತಿ ಶಾಲೆಯ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಜೀವನದ ಅನುಭವಗಳನ್ನು ಕಲಿವ ಮೂಲಕ ಒಬ್ಬರಿಗೆ ಒಬ್ಬರು ಬೇರೆಯಬೇಕು. ಇಂತಹ ಅನುಭವಗಳೆ ಮುಂದಿನ ಅವರ ಶಿಕ್ಷಣಕ್ಕೆ ಮಾರ್ಗದರ್ಶಿಯಾಗುತ್ತದೆ. ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಕಲಿಯಬೇಕು. ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಶ್ರದ್ದೆಯಿಂದ ಕಲಿತರೆ ಶಿಕ್ಷಣ ಸವಾಲಾಗುವುದಿಲ್ಲ ಮಕ್ಕಳ ಶಿಕ್ಷಣ ಕಲಿಕೆಯಲ್ಲಿ ಪೋಷಕರ ಪಾತ್ರವು ಬಹು ಮುಖ್ಯವಾಗಿದೆ. ಜೊತೆಗೆ ಶಿಕ್ಷಕರ ಪಾತ್ರವು ಹೆಚ್ಚಿದೆ. ಇಬ್ಬರಲ್ಲಿ ಸಮತೋಲನ ಇದ್ದರೆ ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಸಾಧ್ಯ ಇದೆ ಎಂದರು.ಶಿಕ್ಷಕರಿಗೆ ಶಿಕ್ಷಣ ಕಲಿಕೆಗೆ ಮಾತ್ರ ಸೀಮಿತವಾಗಿರಬೇಕು. ಅವನ್ನು ಬೇರೆ ಚಟುವಟಿಕೆಗಳಿಗೆ ತೊಡಗಿಸಿದರೆ ಸಮಯ ವ್ಯರ್ಥವಾಗಿ ಕಲಿಕೆಯ ಅವಧಿಯು ಕುಂಠಿತವಾಗುತ್ತದೆ. ಶಿಕ್ಷಣ ಇಲಾಖೆ ಶಿಕ್ಷಕರಿಗಿರುವ ಇತರೆ ಹೊರೆಯನ್ನು ತಗ್ಗಿಸಿದರೆ ಉತ್ತಮ ಶಿಕ್ಷಣ ನೀಡಲು ಸಾಧ್ಯ ಇದೆ ಎಂದು ಇಲಾಖೆಯ ಗಮನ ಸೆಳೆದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ಮಾತನಾಡಿ, ಮಕ್ಕಳು ಇಂದು ಯಾಂತ್ರಿಕ ಬದುಕು ಸಾಗಿಸುತ್ತಿದ್ದು ಮಕ್ಕಳಲ್ಲಿನ ವಿಶೇಷತೆ ಗುರುತಿಸುವ ಕೆಲಸವನ್ನು ಪ್ರತಿಭಾ ಕಾರಂಜಿಗಳ ಮೂಲಕ ಮಾಡಲಾಗುತ್ತಿದೆ ಇದಕ್ಕೆ ಇಲಾಖೆ ಮತ್ತು ಶಾಲೆಗಳು, ಪೋಷಕರ ಸಹಕಾರ ನಿರಂತರವಾಗಿದೆ ಎಂದರು.
ಶಿಕ್ಷಣ ಇಲಾಖೆಯ ಬಿಆರ್ ಪಿ ಕುಮಾರ್, ಎನ್‌ಜಿಒ. ಸಂಸ್ಥೆಯ ಪ್ರಶಾಂತ್, ಶಿಕ್ಷಕ ಬೈರಪ್ಪ, ಸಮನ್ವಯಾಧಿಕಾರಿ ರಾಘವೇಂದ್ರ, ಸುಹೇಲ್ ಮತ್ತಿತರರು ಪ್ರತಿಭಾ ಕಾರಂಜಿ ಕುರಿತು ಮಾತನಾಡಿದರು.ಕೆಎಲ್‌ವಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಹರಿಪ್ರಸಾದ್, ಬೀರೂರು ಅರೇಕಲ್ ಆರ್ ಪ್ರಕಾಶ್, ಸುಂದರೇಶ್, ಮಂಜುನಾಥ್, ನಾಗರತ್ನ, ಉಷಾರಾಣಿ, ಇಸಿಒ ಹರೀಶ್, ಕೃಷ್ಣಮೂರ್ತಿ, ಶ್ವೇತಾ, ಭಾಗ್ಯಜ್ಯೋತಿ ಮತ್ತು ದೃವತಾರೆ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎನ್.ಹಾಲಸಿದ್ದಪ್ಪ, ಮಕ್ಕಳು ಪೋಷಕರು ಇದ್ದರು.