ದೊಡ್ಡಬಳ್ಳಾಪುರ: ನಿರಂತರ ಯೋಗಾಭ್ಯಾಸ ನಮ್ಮೆಲ್ಲರ ಜೀವನದಲ್ಲಿ ಅನುಷ್ಠಾನಗೊಂಡರೆ, ಶತಾಯುಷಿಗಳಾಗಿ ಬದುಕಲು ಸಾಧ್ಯವಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸದಾಶಿವ ರಾಮಚಂದ್ರಗೌಡ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ಕಾಲಮಾನದಲ್ಲಿ ಯುವಕರು ಉತ್ಸಾಹ ಪೀಡಿತರಾಗಿ ಜೀವನ ಸಾಗಿಸುತ್ತಿದ್ದು, ಅವರನ್ನು ಉತ್ಸಾಹಶೀಲರನ್ನಾಗಿ ಮಾಡಲು ಆರೋಗ್ಯಕರ ಯೋಗಭ್ಯಾಸ ಮುಖ್ಯವಾಗಿದೆ. ದಿನನಿತ್ಯದ ಜೀವನದಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ಅರೋಗ್ಯವನ್ನು ಸುಸ್ಥಿರದಲ್ಲಿಡಲು ಯೋಗಾಭ್ಯಾಸ ಅತ್ಯವಶ್ಯಕ ಎಂದರು.
ಯೋಗಪಟು ಚೇತನ್ ರಾಮ್ ಮಾರ್ಗದರ್ಶನದಲ್ಲಿ ಯೋಗಭ್ಯಾಸ ನಡೆಸಲಾಯಿತು. ಪ್ರಾಧ್ಯಾಪಕರಾದ ಸಿದ್ದರಾಮರಾಜು , ಪ್ರೊ.ನೀರಜಾ ದೇವಿ, ಡಾ.ಪ್ರಕಾಶ್ ಮಂಟೆದ, ರಾಜ್ ಕುಮಾರ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.