ಆಸೆ, ಆದರ್ಶಗಳ ಹಗ್ಗಜಗ್ಗಾಟವೇ ಜೀವನ: ಜಗನ್ನಾಥ ನಾಡಿಗೇರ

KannadaprabhaNewsNetwork |  
Published : Jan 05, 2026, 02:00 AM IST
ಕ್ಯಾಪ್ಷನ3ಕೆಡಿವಿಜಿ31 ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯ 56ನೇ ವರ್ಷದ ವಾರ್ಷಿಕ ಸಂಭ್ರಮವನ್ನು ಶೈಕ್ಷಣಿಕ ಸಲಹೆಗಾರ ಜಗನ್ನಾಥ ನಾಡಿಗೇರ ಉದ್ಘಾಟಿಸಿದರು. | Kannada Prabha

ಸಾರಾಂಶ

ಪೋಷಕರು ಮಕ್ಕಳನ್ನು ಸಂಸ್ಕಾರದ ಆಧಾರದ ಮೇಲೆ ಬೆಳೆಸಬೇಕೇ ಹೊರತು, ಮಮಕಾರದ ಆಧಾರದಲ್ಲಿ ಅಲ್ಲ. ಸಂಸ್ಕಾರ ಆಧಾರದಲ್ಲಿ ಬೆಳೆದ ಮಕ್ಕಳು ಧರ್ಮರಾಯರಾಗುತ್ತಾರೆ, ಮಮಕಾರದಿಂದ ಬೆಳೆದರೆ ದುರ್ಯೋಧನರಾಗುತ್ತಾರೆ ಎಂದು ಶೈಕ್ಷಣಿಕ ಸಲಹೆಗಾರ ಮತ್ತು ತರಬೇತುದಾರ ಜಗನ್ನಾಥ ನಾಡಿಗೇರ ಅಭಿಪ್ರಾಯಪಟ್ಟಿದ್ದಾರೆ.

- ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ 56ನೇ ವಾರ್ಷಿಕ ಸಂಭ್ರಮ

- - -

ದಾವಣಗೆರೆ: ಪೋಷಕರು ಮಕ್ಕಳನ್ನು ಸಂಸ್ಕಾರದ ಆಧಾರದ ಮೇಲೆ ಬೆಳೆಸಬೇಕೇ ಹೊರತು, ಮಮಕಾರದ ಆಧಾರದಲ್ಲಿ ಅಲ್ಲ. ಸಂಸ್ಕಾರ ಆಧಾರದಲ್ಲಿ ಬೆಳೆದ ಮಕ್ಕಳು ಧರ್ಮರಾಯರಾಗುತ್ತಾರೆ, ಮಮಕಾರದಿಂದ ಬೆಳೆದರೆ ದುರ್ಯೋಧನರಾಗುತ್ತಾರೆ ಎಂದು ಶೈಕ್ಷಣಿಕ ಸಲಹೆಗಾರ ಮತ್ತು ತರಬೇತುದಾರ ಜಗನ್ನಾಥ ನಾಡಿಗೇರ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ 4 ದಿನಗಳ ಕಾಲ ನಡೆಯುವ 56ನೇ ವಾರ್ಷಿಕ ಸಂಭ್ರಮದಲ್ಲಿ ಶನಿವಾರ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೀವನ ಎಂದರೆ, ಆಸೆ ಮತ್ತು ಆದರ್ಶಗಳ ಹಗ್ಗಜಗ್ಗಾಟ. ನಾವು ಯಾವುದಕ್ಕೆ ಬೆಂಬಲ ಕೊಡುತ್ತೇವೆಯೋ, ಅದಕ್ಕೆ ಶಕ್ತಿ ದೊರೆಯುತ್ತದೆ. ಆಸೆಗಳ ಹಿಂದೆ ಹೋದವರು ಜೀವನದಲ್ಲಿ ಸೋತಿದ್ದಾರೆ, ಭವಿಷ್ಯವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಯಾವಾಗಲೂ ಆದರ್ಶದ ಹಿಂದೆ ಹೋಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮಕ್ಕಳ ಬೆಳವಣಿಗೆಯಲ್ಲಿ ಶಾಲೆ ಪಾತ್ರ ಎಷ್ಟು ಇದೆಯೋ, ಅದಕ್ಕಿಂತ ಹೆಚ್ಚಿನ ಪಾತ್ರ ಪೋಷಕರದ್ದು ಇದೆ. ಪೋಷಕರು ತಮ್ಮ ಮಕ್ಕಳ ಭವಿಷ್ಯದ ಮನೆಯನ್ನು ಸಂಸ್ಕಾರದ ತಳಹದಿಯಲ್ಲಿ ನಿರ್ಮಿಸಬೇಕು. ಇದಕ್ಕೆ ಪ್ರೇರಣೆಯ ಮೇಲ್ಛಾವಣಿ ಒದಗಿಸಬೇಕು. ಇದಕ್ಕೆ ಸದ್ವಿಚಾರದ ಗೋಡೆ ನೀಡಬೇಕು. ಪ್ರೀತಿ, ಮಮಕಾರ ಇವು ಸ್ತಂಭಗಳಾಗಿರಬೇಕು ಎಂದು ತಿಳಿಸಿದರು.

ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ವಾಣಿಶ್ರೀ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಕಮಟಂ ಶ್ರೀನಿವಾಸುಲು, ವಿನಾಯಕ ಬಿ.ಎಂ., ಧನಂಜಯಪ್ಪ ಬಿ.ಎನ್., ನಿಂಗಮ್ಮ ಕೆ. ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.

ಸಾಮೂಹಿಕ ಶಾಲಾ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಿದ್ಧಗಂಗಾ ವಿದ್ಯಾ ಸಂಸ್ಥೆ ಮುಖ್ಯ ಶಿಕ್ಷಕಿ ಕೆ.ಎಸ್. ರೇಖಾರಾಣಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಎಸ್.ಇಂಚರ ಅತಿಥಿಗಳ ಪರಿಚಯ ಮಾಡಿಕೊಟ್ಟರೆ, ಸಿ.ಆರ್.ಪದ್ಮಾ ವಂದಿಸಿದರು.

- - -

-3ಕೆಡಿವಿಜಿ31: ಸಿದ್ಧಗಂಗಾ ವಿದ್ಯಾಸಂಸ್ಥೆ 56ನೇ ವರ್ಷದ ವಾರ್ಷಿಕ ಸಂಭ್ರಮವನ್ನು ಶೈಕ್ಷಣಿಕ ಸಲಹೆಗಾರ ಜಗನ್ನಾಥ ನಾಡಿಗೇರ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ