- ಕರಕುಚ್ಚಿ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ
ಕರಕುಚ್ಚಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ಜನಪ್ರತಿನಿಧಿಗಳಿಂದ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದು ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನ ಅಧ್ಯಕ್ಷ ಎನ್ .ವಿ .ಅರುಣ್ ಕುಮಾರ್ ಹೇಳಿದ್ದಾರೆ.
ಕರಕುಚ್ಚಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ನಮ್ಮ ಶಾಲೆ ನಮ್ಮ ಟ್ರಸ್ಟ್ ಬೆಳೆದು ಬಂದ ದಾರಿ ವಿವರಿಸಿದ ಅವರು 2019 ರಿಂದ ಟ್ರಸ್ಟ್ ಅಸ್ತತ್ವಕ್ಕೆ ಬಂದ ನಂತರ ಶಾಲೆಗೆ ಶೌಚಾಲಯ, ಎಲ್ ಕೆ ಜಿ, ಯುಕೆಜಿ ತರಗತಿಗಳ ಪ್ರಾರಂಭ, ಶಾಲಾ ಮಕ್ಕಳಿಗೆ ಉಚಿತ ಟ್ರ್ಯಾಕ್ ಸೂಟ್ ವಿತರಣೆ, ಆಂಗ್ಲ ಮಾಧ್ಯಮ ತರಗತಿ ಆರಂಭ, ಶಾಲೆಗೆ ಹೆಚ್ಚು ಮಕ್ಕಳ ಪ್ರವೇಶಾತಿ ಇತ್ಯಾದಿ ಸೌಲಭ್ಯ ನಿರ್ವಹಿಸಲಾಗಿದೆ ಎಂದು ಹೇಳಿದರು.ನಮ್ಮ ಶಾಲೆ ನಮ್ಮ ನೆನಪು ಅಧ್ಯಕ್ಷ ಅರುಣ್ ಕುಮಾರ್ ಅವರ ಮಗ ಭುವನ್ ಹುಟ್ಟು ಹಬ್ಬದ ಪ್ರಯುಕ್ತ ಶಾಲೆಗೆ 10 ಬೆಂಚ್ ಗಳ ಕೊಡುಗೆಯನ್ನು ಗ್ರಾಪಂ ಅಧ್ಯಕ್ಷ ಕೆ.ಎಚ್. ಮೋಹನ್ ಶಾಲೆಗೆ ಹಸ್ತಾಂತರಿಸಿ ಮಾತನಾಡಿ ಶಾಲೆಗೆ ಅವಶ್ಯಕ ವಾಗಿರುವ ಎಲ್ಲಾ ಸೌಕರ್ಯ ಈಗಾಗಲೇ ಗ್ರಾಮ ಪಂಚಾಯತ್ ಮೂಲಕ ನೀಡಲಾಗುತ್ತಿದೆ ಮುಂದೆ ಇನ್ನೂ ಹೆಚ್ಚಿನ ಸಹಾಯ ಮಾಡುವುದಾಗಿ ತಿಳಿಸಿದರು. ನಿವೃತ್ತ ಶಿಕ್ಷಕ ಜಿ .ಎಮ್ .ರಾಮಚಂದ್ರಪ್ಪ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ ಹಳೆ ವಿದ್ಯಾರ್ಥಿಗಳ ಒಕ್ಕೂಟವಾದ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನ ಕಾರ್ಯಗಳನ್ನು ಶ್ಲಾಘಿಸಿ, ಈ ಶಾಲೆ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.ಶಾಲೆ ಎಸ್.ಡಿ.ಎಮ್.ಸಿ. ಅಧ್ಯಕ್ಷ ಯೋಗೀಶ್ ಕೆ.ಎಮ್ ಅಧ್ಯಕ್ಷತೆ ವಹಿಸಿದ್ದರು. ಕ್ಯಾಲೆಂಡರ್ ಹೊರಬರಲು ಕಾರಣರಾದ ಎಚ್ ರಾಮನಾಯ್ಕ ಮಂಜುನಾಥ ಆಗ್ರೋ ಸೆಂಟರ್, ಕರಕುಚ್ಚಿ. ನರಸಿಂಹಯ್ಯ ಅನು ಸೌಂಡ್ಸ್ ಭಾವಿಕೆರೆ. ಜಾಫರ್ ಬಾಷಾ ಟ್ರೇಡರ್ಸ ರಂಗೇನಹಳ್ಳಿ. ಕೆ.ಜೆ.ಮೋಹನ್ ಶ್ರೀ ಕಲ್ಲೇಶ್ವರ ಅರ್ಥ್ ಮೂವರ್ಸ ಕರಕುಚ್ಚಿ, ಎಸ್.ಡಿಎಮ್.ಸಿ ಮಾಜಿ ಅಧ್ಯಕ್ಷರು ಪುಷ್ಪ, ಬಡಗಿ ಕಾಂತರಾಜ್ , ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಣ್ಣಪ್ಪ ಕೆ .ಎಚ್ ಅವರನ್ನು ಸನ್ಮಾನಿಸಲಾಯಿತು.
ಎಸ್.ಡಿಎಂಸಿ ಸದಸ್ಯರು, ಮುಖ್ಯಶಿಕ್ಷಕ ದೇವೇಂದ್ರನಾಯ್, ಸಹಶಿಕ್ಷಕರಾದ ಗೀತ ಎಂ. ಶ್ವೇತಾ, ಸುಹಾನ, ತಿಮ್ಮಯ್ಯ, ಶೇಖರ್,ಲೋಕೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.-
1ಕೆಟಿಆರ್.ಕೆ.02ತರೀಕೆರೆ ಸಮೀಪದ ಕರಕುಚ್ಚಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನ ಅಧ್ಯಕ್ಷ ಎನ್ .ವಿ .ಅರುಣ್ ಕುಮಾರ್ಯ, ಶಾಲೆ ಎಸ್.ಡಿ.ಎಮ್.ಸಿ.ಅಧ್ಯಕ್ಷ ಯೋಗೀಶ್ ಕೆ.ಎಮ್, ನಿವೃತ್ತ ಶಿಕ್ಷಕ ಜಿ .ಎಮ್ .ರಾಮಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.