ರಾಜ್ಯದ ಪ್ರಮುಖ ಕಲಾ ಸಂಸ್ಥೆಯಲ್ಲಿ ಒಂದಾದ ಬಹುಮುಖಿ ಪ್ರತಿಷ್ಠಾನ ಕೊಡಮಾಡುವ ಬಹುಮುಖಿ-2026 ಪ್ರಶಸ್ತಿಗೆ ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ, ಲೇಖಕ ಡಾ.ವಾದಿರಾಜ ಕಲ್ಲೂರಾಯ ಆಯ್ಕೆಯಾಗಿದ್ದಾರೆ.
ಮಂಗಳೂರು: ರಾಜ್ಯದ ಪ್ರಮುಖ ಕಲಾ ಸಂಸ್ಥೆಯಲ್ಲಿ ಒಂದಾದ ಬಹುಮುಖಿ ಪ್ರತಿಷ್ಠಾನ ಕೊಡಮಾಡುವ ಬಹುಮುಖಿ-2026 ಪ್ರಶಸ್ತಿಗೆ ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ, ಲೇಖಕ ಡಾ.ವಾದಿರಾಜ ಕಲ್ಲೂರಾಯ ಆಯ್ಕೆಯಾಗಿದ್ದಾರೆ.
ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಿಕ್ಷಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.ಮಾರ್ಚ್ 8ರಂದು ಮಂಗಳೂರಿನಲ್ಲಿ ನಡೆಯಲಿರುವ ಕಲಾಸಂಗಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಸ್ಮರಣಿಕೆ ಹಾಗೂ 20 ಸಾವಿರ ರು. ಗೌರವ ಧನವನ್ನು ಒಳಗೊಂಡಿದೆ ಎಂದು ಸಂಸ್ಥೆ ಮುಖ್ಯಸ್ಥ ಎ.ವಿ. ರಮಾನಾಥ ಶೆಟ್ಟಿ ತಿಳಿಸಿದ್ದಾರೆ.
ವಾದಿರಾಜ ಕಲ್ಲೂರಾಯ ಅವರು ಕಿನ್ನಿ ಕಂಬಳ ರಾಮಚಂದ್ರ ಕಲ್ಲೂರಾಯ ಹಾಗೂ ಅಂಬಾ ಕಲ್ಲೂರಾಯ ಅವರ ಪುತ್ರ. ಕಟೀಲು ಮೇಳದ ಕಲಾವಿದರೂ ಆಗಿದ್ದಾರೆ.