ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಾಗರಿಕ ಸಮಾಜದಲ್ಲಿ ಅತ್ಯಂತ ಕಠಿಣ ಕೆಲಸವೆಂದರೆ ಅದು ಪೊಲೀಸ್ ವೃತ್ತಿ ಅಂತಹ ಕಠಿಣ ಕೆಲಸವನ್ನು ಸರಳವಾಗಿ ಡಿವೈಎಸ್‌ಪಿ ಪಂಪನಗೌಡರ ನಿಭಾಯಿಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ ಹೇಳಿದರು.ಬಾಗಲಕೋಟೆ ಜಿಲ್ಲಾ ಪೊಲೀಸ್, ಬಾಗಲಕೋಟೆ ಉಪವಿಭಾಗ ಠಾಣೆಯಿಂದ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ಸೇವಾ ನಿವೃತ್ತಿ ಹೊಂದಿದ ಬಾಗಲಕೋಟೆ ಡಿವೈಎಸ್‌ಪಿ ಪಂಪನಗೌಡರಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ತವ್ಯದಲ್ಲಿ ಶ್ರಮವಿದ್ದರೆ ಜೀವನ ಸುಂದರವಾಗಿರುತ್ತೆ ಪಂಪನಗೌಡರ ಜನಮನದಲ್ಲಿ ಜನಸ್ನೇಹಿಯಾಗಿ ಪೂಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದು ಇಲಾಖೆಯಲ್ಲಿ ಯಾವುದೇ ತೆರನಾದ ನಿಷ್ಕಾಳಜಿ ಮಾಡದೆ ಕಟ್ಟುನಿಟ್ಟಾಗಿ ಕೆಲಸ ಮಾಡಿ ಸುದೀರ್ಘ 35 ವರ್ಷ ಶ್ರಮವಹಿಸಿ ಇಲಾಖೆಗೆ ಗೌರವ ತಂದಿದ್ದಾರೆ ಎಂದರು.
ಸೇವಾಮನೋಬಾವನೆಯಿಂದ ಕೆಲಸ ಮಾಡಿದರೆ ದೇವರು ಆರ್ಶಿವಾದ ಮಾಡುತ್ತಾನೆ ಎನ್ನುವದಕ್ಕೆ ಪಂಪನಗೌಡ ಜೀವಂತ ಸಾಕ್ಷಿ ಎಂದು ಬಣ್ಣಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಶಶಿಧರ ಕುರೇರ ಮಾತನಾಡಿ, ಸೇವಾ ಅವಧಿ ಪಯಣ ದಾಟಿ ನಿವೃತ್ತಿ ದಿನದಿಂದ ಮುಂದಿನ ಜೀವನ ಸುಖಕರವಾಗರಲಿ ಸುದೀರ್ಘ ಸೇವೆ ಸಲ್ಲಿಸಿ ಮುಕ್ತ ಮನಸ್ಸಿನಿಂದ ನಿವೃತ್ತಿ ಯಾಗುತ್ತಿದ್ದಾರೆ. ಶಾಂತ ಸ್ವಭಾವದ ವ್ಯಕ್ತಿತ್ವ ಹೊಂದಿದ ಪಂಪನಗೌಡ್ರು ಬಾಗಲಕೋಟೆ ಉಪ ವಿಭಾಗದ ಎಲ್ಲ ವಿಷಯಗಳಲ್ಲಿ ಉತ್ತಮ ಕೆಲಸ ಮಾಡುತ್ತಾ ಸಮಸ್ಯಗಳನ್ನು ಪರಿಹರಿಸಿದ್ದಾರೆ. ಪೊಲೀಸ್ ಇಲಾಖೆ ವ್ಯಕ್ತಿಯ ಜೀವನದಲ್ಲಿ ಶಿಸ್ತನ್ನು ಹಾಗೂ ವಿಚಾರ ನಿರ್ಧಾರಗಳನ್ನು ಕಲಿಸುತ್ತದೆ ಎಂದು ಹೇಳಿದರು.
ಪೊಲೀಸ್ ಇಲಾಖೆ ಸನ್ಮಾನ ಸ್ವಿಕರಿಸಿ ಮಾತನಾಡಿದ ಡಿವೈಎಸ್‌ಪಿ ಪಂಪನಗೌಡ ಪೊಲೀಸ್ ಇಲಾಖೆ ಕುಟುಂಬದ ಸದಸ್ಯನಂತೆ ಇದ್ದ ನಾನು ಇಂದು ನಾಗರಿಕ ಸಮಾಜದ ಕಡೆ ಹೊರಟಿದ್ದೇನೆ. ಇಲಾಖೆ ಸಮಾಜಮುಖಿಯಾಗಿ ಕೆಲಸಮಾಡುತ್ತಿದೆ. ದೇವಾಲಯಗಳು ಸಂಜೆ ಬಾಗಿಲು ಹಾಕುತ್ತವೆ ಆದರೆ ಪೊಲೀಸ್ ಇಲಾಖೆ ಬಾಗಿಲು ಹಾಕುವದಿಲ್ಲ. ಅದಕ್ಕೆ ಈ ಇಲಾಖೆ ಗಂಡು ಇಲಾಖೆ ಎನ್ನಬಹುದು ಎಂದ ಅವರು, ಬಾಗಲಕೋಟೆಯಲ್ಲಿ ಪೊಲೀಸ್ ಹುದ್ದೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಲ್ಲ ಬಂದೋಬಸ್ತ್‌ಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ನನಗೆ ತೃಪ್ತಿ ತಂದಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಎಎಸ್ಪಿ ಮಹಾಂತೇಶ ಜಿದ್ದಿ, ಜಮಖಂಡಿ ವಿಭಾಗದ ಡಿವೈಎಸ್‌ಪಿ ಶಾಂತವೀರ, ಡಿಎಆರ್ ಡಿವೈಎಸ್‌ಪಿ ಪ್ರಭು ಪಾಟೀಲ, ಸಿಪಿಐ ಆರ್.ಎಸ್.ಬಿರಾದಾರ, ಗುರುನಾಥ ಚವ್ಹಾಣ, ಕೆ.ಟಿ.ಶೋಭಾ, ಎಚ್.ಆರ್.ಪಾಟೀಲ ,ಪಿಎಸೈಗಳಾದ ಸಂಗಳದ, ಜ್ಯೋತಿ ವಾಲಿಕಾರ ಸೇರಿದಂತೆ ನಿವೃತ್ತ ಅಧಿಕಾರಿಗಳಾದ ರವೀಂದ್ರ ಶಿರೂರು, ಜಗಲಿ ಸಜ್ಜನ, ಮುಖಂಡರಾದ ನಾಗರಾಜ ಹದ್ಲಿ, ಕರವೆ ಜಿಲ್ಲಾಧ್ಯಕ್ಷ ಬಸವರಾಜ ಧಮರ್ಂತಿ, ಬಸವರಾಜ ಅಂಬಿಗೇರ, ಎ.ಎ.ದಂಡಿಯಾ ಸೇರಿದಂತೆ ಇನ್ನಿತರರು ಇದ್ದರು.