ಮಾದಕ ಚಟಗಳಿಂದ ದೂರವಿದ್ದರೆ ಮಾತ್ರ ಬದುಕು ಸುಂದರ: ಕೆ.ತಿಮ್ಮಯ್ಯ

KannadaprabhaNewsNetwork |  
Published : Nov 21, 2024, 01:04 AM IST
ಪೋಟೋ೨೦ಸಿಎಲ್‌ಕೆ೪ ಚಳ್ಳಕೆರೆ ನಗರದ ಸರ್ಕಾರಿ ಪದವಿಪೂರ್ವಕಾಲೇಜಿನಲ್ಲಿ ತಂಬಾಕು ಮುಕ್ತ ಯುವ ಅಭಿಯಾನ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕೆ.ತಿಮ್ಮಯ್ಯ ಮಾತನಾಡಿದರು.  | Kannada Prabha

ಸಾರಾಂಶ

Life is beautiful only if you stay away from drug addiction: K. Thimmaiah

-ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಂಬಾಕು ಮುಕ್ತ ಯುವ ಅಭಿಯಾನ ಕಾರ್ಯಕ್ರಮ

-----

ಕನ್ನಡಪ್ರಭ ವಾರ್ತೆ ಚಳ್ಳಕೆರೆನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಂಬಾಕು ಮುಕ್ತ ಯುವ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಂಬಾಕಿನ ವಸ್ತುಗಳನ್ನು ಸಂಪೂರ್ಣ ತ್ಯಜಿಸುವಂತೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾನವಿಧಿ ಬೋಧಿಸಲಾಯಿತು.

ಪ್ರಾಚಾರ್ಯ ಕೆ.ತಿಮ್ಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಜನಾಂಗ ಮಾದಕ ಚಟಗಳಿಂದ ದೂರವಿರಬೇಕಾಗುತ್ತದೆ. ಪ್ರಾರಂಭದ ಹಂತದಲ್ಲಿ ಯುವಕರಿಗೆ ತಂಬಾಕು ಪದಾರ್ಥಗಳನ್ನು ಉಪಯೋಗಿಸಲು ಹೆಚ್ಚು ಆಸಕ್ತಿ ಉಂಟಾಗುತ್ತದೆ. ಆದರೆ, ಕಾಲಕ್ರಮೇಣ ಅದೇ ತಂಬಾಕು ಶರೀರವನ್ನು ದುರ್ಬಲಗೊಳಿಸಿ ನಮ್ಮ ಬದುಕನ್ನೇ ಅಸ್ಥಿರಗೊಳಿಸುತ್ತದೆ. ಯುವ ಜನಾಂಗ ದುಶ್ಚಟದಿಂದ ದೂರವಿದ್ದು ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಹಿರಿಯ ಉಪನ್ಯಾಸಕರಾದ ವಸಂತಕುಮಾರ್, ಎನ್‌ಎಸ್‌ಎಸ್ ಅಧಿಕಾರಿ ಬಿ.ಶಾಂತಕುಮಾರಿ, ಪುಪ್ಪಲತಾ, ಲಲಿತಮ್ಮ, ಕೆ.ವಿ.ಚಂದ್ರಶೇಖರ್, ನಾಗಭೂಷಣ್, ಎಂ.ಶ್ರೀನಿವಾಸ್, ಅಭೀಬುಲ್ಲಾ, ಕುಮಾರಸ್ವಾಮಿ, ಪುಟ್ಟರಂಗಪ್ಪ, ಜಬೀವುಲ್ಲಾ, ನಾಗರಾಜಬೆಳಗಟ್ಟ, ಹೀನಾಕೌಸರ್, ಜಗದೀಶ್, ರವಿಕುಮಾರ್, ಚಂದ್ರಶೇಖರ್ ಉಪಸ್ಥಿತರಿದ್ದರು.

-----

ಪೋಟೋ: ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ತಂಬಾಕು ಮುಕ್ತ ಯುವ ಅಭಿಯಾನ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕೆ.ತಿಮ್ಮಯ್ಯ ಮಾತನಾಡಿದರು.

೨೦ಸಿಎಲ್‌ಕೆ೪

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು