ಸತ್ಸಂಗದಿಂದ ಬದುಕು ಸುಂದರ: ಗವಿಸಿದ್ದೇಶ್ವರ ಶ್ರೀ

KannadaprabhaNewsNetwork |  
Published : Dec 03, 2025, 03:00 AM IST
ಪೊಟೋ ಡಿ.2ಎಂಡಿಎಲ್ 3ಎ, 3ಬಿ. ಮುಗಳಖೋಡ ಗ್ರಾಮಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಆಗಮಿಸಿದ ಕ್ಷಣ ನಂತರ ಸರವಗೋಳ ನಿವಾಸದಲ್ಲಿ ಶ್ರೀಗಳ ಪಾದಪೂಜೆ ಜರುಗಿತು.  | Kannada Prabha

ಸಾರಾಂಶ

ಶರಣರ, ಸಂತ ಮಹಾಂತರ ಸಂಗಮದಿಂದ ಬದುಕು ಸುಂದರವಾಗುತ್ತದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಶರಣರ, ಸಂತ ಮಹಾಂತರ ಸಂಗಮದಿಂದ ಬದುಕು ಸುಂದರವಾಗುತ್ತದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದಲ್ಲಿ ಸದ್ಭಾವನಾ ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ನಮ್ಮ ಲೌಕಿಕ ಜೀವನ ಹಸನಾಗಿರಲು ಅರಿತವರ ಸಂಗವಿರಬೇಕೆಂದರು.

ಡಿವೈಎಸ್ಪಿ ಮುತ್ತಣ್ಣ ಪಿ. ಸರವಗೋಳ ಹಾಗೂ ಕುಟುಂಬದವರು ಶ್ರೀಗಳ ಪಾದಪೂಜೆ ಮಾಡಿ ಗೌರವ ಸಮರ್ಪಣೆ ಮಾಡಿದರು. ಹಿರೇಮಠದ ರಾಮಯ್ಯ ಸ್ವಾಮಿಗಳು, ಸಿದ್ಧಾರೂಢ ಭಾರತಿ ಆಶ್ರಮದ ಶರಣ ಬಸವಶಾಸ್ತ್ರಿಗಳು, ಗ್ರಾಮದ ಗಣ್ಯರಾದ ಆರ್.ಎಸ್. ಸುಣಗಾರ, ಆರ್.ಎನ್. ಸರವಗೋಳ, ಡಿವೈಎಸ್ಪಿ ಎಂ.ಪಿ. ಸರವಗೋಳ, ಶರಣಬಸವ ಶಾಸ್ತ್ರಿಗಳು, ಆರ್.ಎನ್. ಸರವಗೋಳ, ಗುರುಬಸು ಶಿವಾಪೂರ, ಎಂ.ಆರ್. ಮಂಟೂರ, ಗುರುಪಾದಪ್ಪ ಜನವಾಡ, ಪಿ.ಎಲ್. ಜನವಾಡ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!