ಕಾಯಕ ಜೀವನದಿಂದ ಬದುಕು ಉಜ್ವಲ

KannadaprabhaNewsNetwork | Published : Nov 25, 2024 1:02 AM

ಸಾರಾಂಶ

ಜೀವನ ಸಂಘಟನೆಗಳ ಸರಮಾಲೆ. ಏರಿಕೆ, ಇಳಿಕೆ ಕೂಡುವುದು, ಅಗಲುವುದು ಅನಿವಾರ್ಯ. ಸುಂದರವಾದ ಮನೆ ಕಟ್ಟಿದ ಮನುಷ್ಯ ಆ ಮನೆಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ಮರೆಯುತ್ತಾನೆ.

ಹುಬ್ಬಳ್ಳಿ:

ಜೀವನದಲ್ಲಿ ಸವಾಲುಗಳು ಬಂದರೆ ಅದನ್ನು ಸಮರ್ಥವಾಗಿ ಎದುರಿಸುವ ಆತ್ಮ ಬಲಬೇಕು. ಶ್ರಮ ಮತ್ತು ಪ್ರಯತ್ನದಿಂದ ಬದುಕು ಉಜ್ವಲಗೊಳ್ಳುವುದು ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರಶ್ರೀ ಅಭಿಪ್ರಾಯಪಟ್ಟರು.ಇಲ್ಲಿನ ಜೆ.ಪಿ. ನಗರದ ಶ್ರೀಈಶ್ವರ ದೇವಸ್ಥಾನ ಪಕ್ಕದಲ್ಲಿ ಭಾನುವಾರ ಹಮ್ಮಿಕೊಳ್ಳಳಾಗಿದ್ದ “ಅನುಗ್ರಹ” ವಾಣಿಜ್ಯ ಸಂಕೀರ್ಣ ಮತ್ತು ಉಜ್ವಲ್‌ ಎಂಟರ್‌ ಪ್ರೈಸಿಸ್ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜೀವನ ಸಂಘಟನೆಗಳ ಸರಮಾಲೆ. ಏರಿಕೆ, ಇಳಿಕೆ ಕೂಡುವುದು, ಅಗಲುವುದು ಅನಿವಾರ್ಯ. ಸುಂದರವಾದ ಮನೆ ಕಟ್ಟಿದ ಮನುಷ್ಯ ಆ ಮನೆಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ಮರೆಯುತ್ತಾನೆ. ದೃಢ ಸಂಕಲ್ಪ ಶಕ್ತಿ ಇಲ್ಲದೇ ಇದ್ದರೆ ಮಾಡುವ ಕೆಲಸಗಳು ಕೈಗೂಡುವುದಿಲ್ಲ. ಕ್ರಿಯಾಶೀಲ ಬದುಕು ಉನ್ನತಿಗೆ ಸೋಪಾನ ಎಂದರು.

ಸಮಾರಂಭ ಉದ್ಘಾಟಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಕಾಯಕ ಜೀವನದಿಂದ ಉನ್ನತಿ ಕಾಣಲು ಸಾಧ್ಯ. ಜೆ.ಬಿ. ಮಲ್ಲಾರಾಧ್ಯರು ಆಡಿದ ಮಾತುಗಳಿಂದ ನನ್ನ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯವಾಯಿತು. ತಂದೆ ಮಾತಿಗಿಂತ ತಾಯಿ ಮಾತು ಮಕ್ಕಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ ಎಂದು ಹೇಳಿದರು. ಸೂಡಿ ಜುಕ್ತಿಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಅಮ್ಮಿನಭಾವಿ ಅಭಿನವ ಶಾಂತಲಿಂಗ ಶ್ರೀ, ಶಿರಕೋಳ ಗುರುಸಿದ್ಧೇಶ್ವರ ಶ್ರೀ ಆಶೀರ್ವಚನ ನೀಡಿದರು.

ವಿಶ್ವನಾಥ ಹಿರೇಗೌಡರು ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಅರವಿಂದ ಬೆಲ್ಲದ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕೃಷಿ ವಿವಿಯ ಡಾ. ಎಸ್.ಎ. ಪಾಟೀಲ, ಪಿ.ಎಂ. ಪಾಟೀಲ, ಬಸನಗೌಡ ಪಾಟೀಲ, ಪ್ರಕಾಶ ಬೆಂಡಿಗೇರಿ, ಬಸವರಾಜ ಸುಳ್ಳದ, ಆರ್.ಎಂ. ಹಿರೇಮಠ, ವಿ.ಜಿ. ಪಾಟೀಲ, ಜಿ.ವಿ. ಕಲಾ ಬಳಗದ ಅಧ್ಯಕ್ಷ ಗದಿಗಯ್ಯ ಹಿರೇಮಠ ಸೇರಿದಂತೆ ಹಲವರಿದ್ದರು.

Share this article