ರಾಜ್ಯದಲ್ಲಿ ಜೀವನ ದುಬಾರಿ, ಅಭಿವೃದ್ಧಿ ಶೂನ್ಯ

KannadaprabhaNewsNetwork |  
Published : May 20, 2025, 01:27 AM IST
೧೯ಕೆಎಲ್‌ಆರ್-೩ಕಾಂಗ್ರೆಸ್ ಸರ್ಕಾರದ ಸಾಧನೆ ಎಂಬ ಶೀರ್ಷಿಕೆಯಡಿ ಕಾಂಗ್ರೆಸ್ ಆಡಳಿತದ ವೈಫಲ್ಯತೆಗಳ ಕರಪತ್ರ ಕೋಲಾರದ ಪತ್ರಕರ್ತರ ಭವನದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಬಿಡುಗಡೆಗೊಳಿಸುತ್ತಿರುವುದು. | Kannada Prabha

ಸಾರಾಂಶ

ಭ್ರಷ್ಟ ಕಾಂಗ್ರೆಸ್ ಸರ್ಕಾರದ ಪಿತಾಮಹಾ ಸಿಎಂ ಸಿದ್ದರಾಮಯ್ಯರ ೨ ವರ್ಷದ ಸಾಧನೆಯೆಂದು ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ, ೨ ವರ್ಷದಲ್ಲಿ ಅವರ ಸಾಧನೆಯೇನು, ಗ್ಯಾರಂಟಿಗಳನ್ನು ಮುಂದೆ ತಲೆಮರೆಸಿಕೊಳ್ಳುತ್ತಿದ್ದವರು ಈಗ ಗ್ಯಾರಂಟಿಗಳ ಗೃಹಲಕ್ಷ್ಮೀ ಯೋಜನೆಗೆ ಕಳೆದ ೪ ತಿಂಗಳಿಂದ ಖಾತೆಗಳಿಗೆ ಹಣ ಹಾಕಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿ ಆಡಳಿತದ ಸಮಾವೇಶದ ವಿರುದ್ದ "ದುಬಾರಿ ಜೀವನ ಅಭಿವೃದ್ದಿ ಶೂನ್ಯ " ಕರ್ನಾಟಕ ಲೂಟಿ-ಕಾಂಗ್ರೆಸ್ ಡ್ಯೂಟಿ " ಇದುವೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂಬ ಶೀರ್ಷಿಕೆಯಡಿ ಕಾಂಗ್ರೆಸ್ ಆಡಳಿತದ ವೈಫಲ್ಯತೆಗಳ ಕರಪತ್ರ ಮಾಜಿ ಸಂಸದ ಎಸ್.ಮುನಿಸ್ವಾಮಿ ಬಿಡುಗಡೆ ಮಾಡಿದರು.ನಗರದ ಪತ್ರಕರ್ತ ಭವನದ ಸುದ್ದಿಗೋಷ್ಠಿಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ರಾಜ್ಯದಲ್ಲಿ ಕಳೆದ ಎರಡು ವರ್ಷದಿಂದ ಅಭಿವೃದ್ದಿ ಶೂನ್ಯವಾಗಿದೆ, ಯಾವುದೇ ಅಭಿವೃದ್ದಿ ಕಾಮಗಾರಿಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ, ಬಿಜೆಪಿ ಸರ್ಕಾರದ ಕಾಮಗಾರಿಗಳಿಗೆ ಕಾಂಗ್ರೆಸ್ ನಾಯಕರು ಗುದ್ದಲಿ ಪೂಜೆ ಮಾಡುವ ಮೂಲಕ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಹೊರತಾಗಿ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಸಹ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು. ಸಾಧನೆ ಹೆಸರಲ್ಲಿ ಹಣ ಪೋಲು

ಭ್ರಷ್ಟ ಕಾಂಗ್ರೆಸ್ ಸರ್ಕಾರದ ಪಿತಾಮಹಾ ಸಿಎಂ ಸಿದ್ದರಾಮಯ್ಯರ ೨ ವರ್ಷದ ಸಾಧನೆಯೆಂದು ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ, ೨ ವರ್ಷದಲ್ಲಿ ಅವರ ಸಾಧನೆಯೇನು, ಗ್ಯಾರಂಟಿಗಳನ್ನು ಮುಂದೆ ತಲೆಮರೆಸಿಕೊಳ್ಳುತ್ತಿದ್ದವರು ಈಗ ಗ್ಯಾರಂಟಿಗಳ ಗೃಹಲಕ್ಷ್ಮೀ ಯೋಜನೆಗೆ ಕಳೆದ ೪ ತಿಂಗಳಿಂದ ಖಾತೆಗಳಿಗೆ ಹಣ ಹಾಕಿಲ್ಲ. ಅನ್ನಭಾಗ್ಯದಲ್ಲಿ ಅಕ್ಕಿಯೂ ಇಲ್ಲ, ಹಣವು ಇಲ್ಲ, ಇನ್ನು ನಿರುದ್ಯೋಗಿಗಳಿಗೆ ಯಾವುದೇ ವೇತನ ನೀಡುತ್ತಿಲ್ಲ, ಡಕೋಟ ಬಸ್ಸ್‌ಗಳು ಸರಿಯಾದ ಸೌಲಭ್ಯವಿಲ್ಲ, ವಿದ್ಯುತ್ ಶೆಡ್‌ಡೌನ್ ಎಂದು ಮಾಯವಾಗುತ್ತದೆ ಹಾಗಾಗಿ ಇವೆಲ್ಲವೂ ಕಾಂಗ್ರೆಸ್ ಪಕ್ಷದ ನಕಲಿ ಗ್ಯಾರಂಟಿಗಳಾಗಿದೆ ಎಂದು ವ್ಯಂಗವಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ನಾಲಾಯಕ್, ಕಳೆದ ೨ ವರ್ಷದಿಂದ ಕೋಲಾರಕ್ಕೆ ಅವರು ನೀಡಿರುವ ಕೊಡುಗೆ ಏನೆಂದು ತೋರಿಸಲಿ. ಬರಿ ಬುರಡೆ ಬಿಟ್ಟು ಪುರ್ ಎಂದು ಹಾರಿ ಹೋಗುವುದು ಬಿಟ್ಟರೆ ಜಿಲ್ಲೆಯಲ್ಲಿ ಏನೊಂದು ಅಭಿವೃದ್ದಿ ಇಲ್ಲ ಒಂದು ರಸ್ತೆ ಮಾಡಿಸಲು, ಒಂದು ಹಾಸ್ಟೆಲ್ ನಿರ್ಮಾಣವು ಅವರರಿಂದ ಆಗಲಿಲ್ಲ. ಇದೇ ಅವರ ೨ ವರ್ಷದ ಸಾಧನೆಯಾಗಿದೆ ಎಂದು ಕಿಡಿಕಾರಿದರು.

ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ವಕ್ತಾರ ಎಸ್.ಬಿ.ಮುನಿವೆಂಕಟಪ್ಪ. ಸಂಚಾಲಕರಾದ ಪ್ರವೀಣ್ ಗೌಡ ಇದ್ದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌