ಹಸಿರು ಮನುಷ್ಯನ ಉಸಿರಾದಾಗ ಮಾತ್ರ ಆತನ ಬದುಕು ಸಾರ್ಥವಾಗಲಿದೆ ಎಂದು ದೈಹಿಕ ಶಿಕ್ಷಕ ನಾಗಪ್ಪ ಹೊಸಮನಿ ಹೇಳಿದರು.
ಕನಕಗಿರಿ: ಹಸಿರು ಮನುಷ್ಯನ ಉಸಿರಾದಾಗ ಮಾತ್ರ ಆತನ ಬದುಕು ಸಾರ್ಥವಾಗಲಿದೆ ಎಂದು ದೈಹಿಕ ಶಿಕ್ಷಕ ನಾಗಪ್ಪ ಹೊಸಮನಿ ಹೇಳಿದರು.
ತಾಲೂಕಿನ ಬಸರಿಹಾಳ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಗೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಧಮ೯ಸ್ಥಳದ ಧಮಾ೯ಧಿಕಾರಿ ವೀರೇಂದ್ರ ಹೆಗ್ಗಡೆಯವರ ಮಾಗ೯ದಶ೯ನದಲ್ಲಿ ಗ್ರಾಮಾಬಿವೃದ್ಧಿ ಯೋಜನೆ ಮೂಲಕ ಅನೇಕ ಸಮಾಜಮುಖಿ ಕಾಯ೯ಕ್ರಮಗಳನ್ನು ಕೈಗೊಳ್ಳುತ್ತಿದೆ.. ಅಲ್ಲದೇ ವಿವಿಧ ಇಲಾಖೆಗಳ ಜೊತೆಗೂಡಿ ಜನ ಮೆಚ್ಚುವ ರೀತಿಯಲ್ಲಿ ಯೋಜನೆಯನ್ನು ವಿಸ್ತರಿಸಲಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ಜವಾಬ್ದಾರಿ, ಹೊಣೆಗಾರಿಕೆ ಬರಬೇಕಿದೆ. ನಾವು ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಎಚ್ಚರವಹಿಸಬೇಕಾಗಿದೆ. ಮೊದಲು ನಾವು ಪರಿಸರವನ್ನು ಸಂರಕ್ಷಿಸಿದರೆ ಮುಂದಿನ ಪೀಳಿಗೆಯೂ ಪರಿಸರ ಸಂರಕ್ಷಿಸುವ, ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳುತ್ತದೆ. ಇಂತಹ ಜಾಗೃತಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳು ಪ್ರತಿ ಹಳ್ಳಿ ಹಳ್ಳಿಯಲ್ಲೂ ನಡೆಯಬೇಕು ಎಂದರು.
ನಂತರ ಗ್ರಾಮದ ಮುಖಂಡ ಹೊಳೇಗೌಡ ಮಾತನಾಡಿ, ನಿತ್ಯವೂ ಪರಿಸರವನ್ನು ರಕ್ಷಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ಪರಿಸರ ಮಾನವನಿಂದಲೇ ಹೆಚ್ಚು ನಾಶವಾಗುತ್ತಿದೆ. ತಮ್ಮ ಗ್ರಾಮಗಳ ಗೋಮಾಳ, ದೇವಸ್ಥಾನ, ಆವರಣ ಶಾಲಾ ಆವರಣ. ಕೆರೆ ಗೋಕಟ್ಟೆ, ರೈತರ ತೋಟಗಳಲ್ಲಿ ಗಿಡ ಮರಗಳನ್ನ ಬೆಳೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ತೀವ್ರ ಬರ, ಬಿಸಿಲು ಆವರಿಸಿ ಸಾವು, ನೋವು ಅನುಭವಿಸುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಸಸಿ ನೆಡುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ವೇಳೆ ಮುಖ್ಯಶಿಕ್ಷಕ ಧರ್ಮಣ್ಣ ಲಮಾಣಿ, ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ ವಜ್ರಬಂಡಿ, ಉಪಾಧ್ಯಕ್ಷ ನಾಗಪ್ಪ ಗದ್ದಿ, ಒಕ್ಕೂಟದ ಅಧ್ಯಕ್ಷ ಉಮೇಶ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಮೇಲ್ವಿಚಾರಕ ಎನ್. ಗಂಗಾಧರಪ್ಪ, ವಲಯ ಮೇಲ್ವಿಚಾರಕ ಯಲ್ಲಾರಿ ಶಿವಾಜಿ, ಸೇವಾ ಪ್ರತಿನಿಧಿ ಪ್ಯಾರಿ ಬೇಗಂ, ಸ್ವಸಹಾಯ ಸಂಘಗಳ ಸದಸ್ಯರು, ಶಾಲಾ ವಿಧ್ಯಾಥಿ೯ಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.