ಗುರು ಪರಂಪರೆ ನಂಬಿ ನಡೆದರೆ ಬದುಕು ಸಾರ್ಥಕ: ಡಾ. ಮಹಾಂತ ಸ್ವಾಮೀಜಿ

KannadaprabhaNewsNetwork |  
Published : Nov 07, 2025, 01:45 AM IST
ಫೋಟೊ:೦೬ಕೆಪಿಸೊರಬ-೦೨ : ಸೊರಬ ಪಟ್ಟಣದ ಮುರುಘಾ ಮಠದಲ್ಲಿ ಶ್ರೀ ಕುಮಾರ ಪ್ರಭು ಮಹಾಸ್ವಾಮಿಗಳ ಸ್ಮಾರಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಮತ್ತು ಲಿಂಗೈಕ್ಯ ಪ್ರಭುಲಿಂಗ ಮಹಾಸ್ವಾಮಿಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಭಕ್ತರು ಗುರು ಪರಂಪರೆ ನಂಬಿ ನಡೆದರೆ ಬದುಕು ಸಾರ್ಥಕವಾಗುತ್ತದೆ. ಗುರು ರಹಿತ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನಿಗೂ ಗುರುವಿನ ಬಲ ಇರಲೇ ಬೇಕು ಎಂದು ಜಡೆ ಸಂಸ್ಥಾನ ಮಠದ ಹಾಗೂ ಸೊರಬ ಮುರುಘಾ ಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಭಕ್ತರು ಗುರು ಪರಂಪರೆ ನಂಬಿ ನಡೆದರೆ ಬದುಕು ಸಾರ್ಥಕವಾಗುತ್ತದೆ. ಗುರು ರಹಿತ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನಿಗೂ ಗುರುವಿನ ಬಲ ಇರಲೇ ಬೇಕು ಎಂದು ಜಡೆ ಸಂಸ್ಥಾನ ಮಠದ ಹಾಗೂ ಸೊರಬ ಮುರುಘಾ ಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುಘಾ ಮಠದಲ್ಲಿ ಶ್ರೀ ಕುಮಾರ ಪ್ರಭು ಮಹಾಸ್ವಾಮಿಗಳ ಸ್ಮಾರಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಮತ್ತು ಲಿಂಗೈಕ್ಯ ಪ್ರಭುಲಿಂಗ ಮಹಾಸ್ವಾಮಿಗಳ ಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಡೆ ಸಂಸ್ಥಾನ ಮಠವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಕೆಳದಿ ಸಂಸ್ಥಾನದ ಆಡಳಿತ ಕಾಲದಿಂದ ಹಿಡಿದು ದೆಹಲಿಯ ಮಲ್ಲೂಕ್ಷ ರಾಜನ ಕಾಲದವರೆಗೆ ಜಡೆ ಸಂಸ್ಥಾನ ವ್ಯಾಪ್ತಿ ವಿಸ್ತರಣೆಯಾಗಿತ್ತು. ಕುಮಾರ ಪ್ರಭು ಮಹಾ ಸ್ವಾಮೀಜಿ ಸಕಲ ಭಾಷಾ ಪಾರಂಗತರಾಗಿದ್ದರು. ಅವರಲ್ಲಿ ದೈವಿಕ ಶಕ್ತಿ ಅಡಕವಾಗಿತ್ತು. ತಪಸ್ಸಿನ ಮತ್ತು ಲಿಂಗಪೂಜೆ ಅನುಷ್ಠಾನ ಮಾಡುವ ಮೂಲಕ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ. ಭಕ್ತರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಗುರುಗಳ ಆಶೀರ್ವಾದ ಅನುಗ್ರಹ ಮುಖ್ಯ ಎಂದ ಅವರ, ಗುರುವಿನಲ್ಲಿ ಆಗಾಧವಾದ ಶಕ್ತಿ ಇದ್ದು ಯಾರು ಗುರುವನ್ನು ನಂಬುತ್ತಾರೊ ಅವರು ಅದರ ಪ್ರತಿಫಲ ಪಡೆಯಲು ಸಾಧ್ಯ. ಯಾರು ನಂಬುವುದಿಲ್ಲವೊ ಅದನ್ನು ಪಡೆಯಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಪಂಚಾಕ್ಷರಪ್ಪಗೌಡ, ಮಠದ ಕಾರ್ಯದರ್ಶಿ ಡಿ. ಶಿವಯೋಗಿ, ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ನಿಜಗುಣ ಚಂದ್ರಶೇಖರ್, ಲಿಂಗೇಶ್, ಉಮೇಶ್ ಗೌಡ, ರಾಮಣ್ಣ ಭಜಂತ್ರಿ, ಪೂರ್ಣಿಮಾ ಶಿವಯೋಗಿ, ಮಾನಸ, ಪುಷ್ಪಾ, ಶಾಂತಮ್ಮ, ಪವಿತ್ರ, ಸುಮಿತ್ರಾ ಸೇರಿದಂತೆ ಮೊದಲಾದವರಿದ್ದರು. ಡಿ ಶಿವಯೋಗಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಅಕ್ಕನ ಬಳಗದವರು ಪ್ರಾರ್ಥಿಸಿದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ