ರೋಣ: ಪರೋಪಕಾರ, ದಾನ, ಧಾರ್ಮಿಕತೆ ಮತ್ತು ಧಾರ್ಮಿಕ ಪರಂಪರೆಗಳನ್ನಿಟ್ಟುಕೊಂಡು ಜೀವನ ಕಟ್ಟಿಕೊಳ್ಳುವ ಜತೆಗೆ ಸದಾ ದಾನ, ಧರ್ಮಾದಿನ ಕಾರ್ಯಗಳಲ್ಲಿ ತೊಡಗಿದಾಗ ಜೀವನ ಸಾರ್ಥಕವಾಗುತ್ತದೆ. ಈ ದಿಶೆಯಲ್ಲಿ ನಾವೆಲ್ಲರೂ ತೊಡಗಬೇಕು ಎಂದು ಪುರಸಭೆ ಸದಸ್ಯ ಮಲ್ಲಯ್ಯ ಮಹಾಪುರುಷಮಠ ಹೇಳಿದರು.
ಅವರು ಬುಧುವಾರ ಸಂಜೆ ಪಟ್ಟಣದ ರಥ ಶಿಲ್ಪಿಗಳಾದ ಶಂಕ್ರಪ್ಪ ಬಡಿಗೇರ, ಮಾನಪ್ಪ ಬಡಿಗೇರ ನಿರ್ಮಿಸಿದ ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ಶ್ರೀಸಿದ್ದ ಪರ್ವತ ಭಗಳಾಂಭದೇವಿ ದೇವಸ್ಥಾನದ ನೂತನ ರಥ ಮಹಾ ಪೂಜೆ ಕೈಂಕರ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡಾಗ ಮನಸ್ಸಿಗೆ ಸಿಗುವ ಆನಂದ, ಭಕ್ತಿಭಾವ ಆಗಾಧವಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ನೀಡಲಾಗುವ ಸಂದೇಶ ಮನವಿಟ್ಟು ಕೇಳುವುದರೊಂದಿಗೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಯುವ ಜನಾಂಗ ಧಾರ್ಮಿಕ ಕಾರ್ಯಗಳಿಂದ ದೂರವಾಗುತ್ತಿದ್ದು, ಇದು ಹೀಗೆ ಮುಂದುವರೆದರೆ ಮುಂದಿನ ಜನಾಂಗಕ್ಕೆ ಧರ್ಮದ ಅರಿವೇ ಇರದೇ ಧರ್ಮ ಸಂಕಷ್ಟಕ್ಕೆ ಸಿಲುಕಲಿದೆ. ಯುವ ಜನತೆಯೊಂದಿಗೆ ಮಕ್ಕಳನ್ನು ಧಾರ್ಮಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವ ಕಾರ್ಯವಾಗಬೇಕಾಗಿದೆ ಎಂದರು.
ಹಣದಿಂದ ಏನನ್ನಾದರೂ ಖರೀದಿಸಬಹುದು. ಆದರೆ ಭಕ್ತಿ ಕೊಳ್ಳಲಿಕ್ಕಾಗದು. ಭಕ್ತಿ ದೊರೆಯುವುದು ಮಠಮಾನ್ಯಗಳಲ್ಲಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ, ಜಾತ್ರೆಗಳಿಂದ ಮಾತ್ರ ಸಾಧ್ಯ. ನಾವು ಮಾಡುವ ಧಾರ್ಮಿಕ ಪುಣ್ಯ ಕಾರ್ಯಗಳಿಂದ ನಮ್ಮ ಮುಂದಿನ ಜನಾಂಗಕ್ಕೂ ಪುಣ್ಯ ದೊರೆಯುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳ್ಳಬೇಕು. ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ಶ್ರೀ ಸದ್ದ ಪರ್ವತ ಭಗಳಾಂಬದೇವಿ ದೇವಸ್ಥಾನದ ಜಾತ್ರೆಗೆ ರೋಣ ಪಟ್ಟಣದ ರಥ ಶಿಲ್ಪಿ ಶಂಕ್ರಪ್ಪ ಬಡಿಗೇರ, ಮಾನಪ್ಪ ಬಡಿಗೇರ ಅತ್ಯಂತ ಆಕರ್ಷಣೀಯವಾಗಿ ರಥ ನಿರ್ಮಿಸಿದ್ದಾರೆ. ಈ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.ನೂತನ ರಥವನ್ನು ಭಜನೆ, ಡೊಳ್ಳು ಸೇರಿದಂತೆ ವಿವಿಧ ವಾದ್ಯಮೇಳಗಳೊಂದಿಗೆ ಅದ್ಧೂರಿಯಾಗಿ ಮೇರವಣಿಗೆ ಮೂಲಕ ರೋಣ ಪಟ್ಟಣದಿಂದ ಮುದೇಬಿಹಾಳ ತಾಲೂಕಿ ಕಾಳಗಿ ಗ್ರಾಮದವರೆಗೂ ಕೊಂಡೊಯ್ಯಲಾಯಿತು.
ಈ ವೇಳೆ ಈರಣ್ಣ ಪತ್ತಾರ, ರವೀಂದ್ರ ನಂದರಗಿ, ನಿಂಗಪ್ಪ ನಡಕಟ್ಟಿ, ನೀಲಪ್ಪ ಹಾದಿಮನಿ, ಮಹಾದೇವಪ್ಪ ಹಳ್ಳದ, ಮುದ್ದಪ್ಪ ಕುರಡಗಿ, ಭೀಮಪ್ಪ ನಾಶಿ, ಈರಣ್ಣ ಬಡಿಗೇರ, ನಾಗಪ್ಪ ದೇಶಣ್ಣವರ, ಮಾನಪ್ಪ ಬಡಿಗೇರ, ರಥ ಶಿಲ್ಪಿ ಶಂಕ್ರಪ್ಪ ಬಡಿಗೇರ, ಈರಣ್ಣ ಬಡಿಗೇರ, ಪವನ ಬಡಿಗೇರ ಸೇರಿದಂತೆ ಅನೇಕ ಭಕ್ತರು ಹಾಗೂ ಕಾಳಗಿ ಗ್ರಾಮದ ಶ್ರೀ ಸಿದ್ದ ಪರ್ವತ ಭಗಳಾಂಬದೇವಿ ದೇವಸ್ಥಾನ ಜೀರ್ಣೋದ್ಘಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.