ತರೀಕೆರೆಯಲ್ಲಿ ಗಾಂಧಿ ಸ್ಮೃತಿ, ಪಾನಮುಕ್ತ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆನಮ್ಮಲ್ಲಿರುವ ದುಶ್ಚಟಗಳನ್ನು ತ್ಯಜಿಸಿ ಜೀವನದ ಸತ್ಯಾಸತ್ಯತೆ ಅರಿತು ಬಾಳಿದರೆ ಮಾತ್ರ ಸಾರ್ಥಕವಾಗುತ್ತದೆ ಎಂದು ಸಾಹಿತಿ ಮೋಹನ್ ಮನಸುಳಿ ಹೇಳಿದ್ದಾರೆ.
ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ತರೀಕೆರೆ, ತಾಲೂಕು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ಮತ್ತು ಅಜ್ಜಂಪುರ ತಾಲೂಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಗಾಂಧಿ ಸ್ಮೃತಿ ಮತ್ತು ಪಾನಮುಕ್ತ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಗತ್ತಿನ 200ಕ್ಕೂ ಹೆಚ್ಚೂ ದೇಶಗಳು ಗಾಂಧೀಜಿ ವಿಚಾರಧಾರೆಯನ್ನು ಅನುಸರಿಸುತ್ತಿವೆ. ವಿಶ್ವವೆ ಒಪ್ಪಿರುವಂತ ಧೀಮಂತ ನಾಯಕರ ಸ್ಮೃತಿ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಗಾಂಧೀಜಿ ಆದರ್ಶ ತತ್ವಗಳನ್ನು ನಾವು ಪಾಲಿಸಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂತಹ ಕಾರ್ಯಕ್ರಮ ನಡೆಸುತ್ತಿದ್ದು ನಮಗೆ ಪ್ರೇರಣೆಯಾಗಿದೆ. ಗಾಂಧೀಜಿ ಆದರ್ಶ ತತ್ವಗಳನ್ನು ಪ್ರತಿ ಮನೆ ಮನೆಗಳಲ್ಲಿ ಅನುಸರಿಸಿ ನಮ್ಮಲಿರುವ ದುಶ್ಚಟಗಳನ್ನು ತೃಜಿಸಿ ಜೀವನದ ಸತ್ಯಾಸತ್ಯತೆ ಅರಿತು ನಾವು ಬಾಳಿದರೆ ಮಾತ್ರ ಸಾರ್ಥಕ ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎ.ಸಿ.ಚಂದ್ರಪ್ಪ ಮಾತನಾಡಿ ಕೆಟ್ಟ ಆಲೋಚನೆಗಳಿಗೆ ಬೇಗ ಆಕರ್ಷಿತರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ಇಂತಹ ದುಶ್ಚಟಗಳಿಗೆ ಬಲಿಯಾಗದೆ ಗಾಂಧೀಜಿಯವರ ಕನಸಿನ ರಾಮ ರಾಜ್ಯ ಕಲ್ಪನೆ ಗಳಿಗೆ ಅವಿರತವಾಗಿ ಶ್ರಮಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಮಧ್ಯವರ್ಜನ ಶಿಬಿರ, ಶಾಲೆ ಕಾಲೇಜು ವಿದ್ಯಾರ್ಥಿಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರ ಜೊತೆಗೆ ಪುರುಷರು ದುಶ್ಚಟಗಳಿಂದ ದೂರವಾಗುವಂತೆ ಮಧ್ಯವರ್ಜನ ಶಿಬಿರವನ್ನು ನಾವು ನಡೆಸುತ್ತಿದ್ದೇವೆ ಎಂದು ತಿಳಿಸಿದರು.ಯೋಜನಾಧಿಕಾರಿ ಕುಸುಮಾಧರ್.ಕೆ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಾ ಬಂದಿದ್ದು ಪ್ರಮುಖವಾಗಿ ಕೆರೆಗಳ ಹೂಳೆತ್ತುವ ಕಾರ್ಯಕ್ರಮ, ಸುಜ್ಞಾನ ನಿಧಿ, ಹಾಲಿನ ಡೈರಿಗಳಿಗೆ ಪ್ರೋತ್ಸಾಹ ಧನ, ಧಾರ್ಮಿಕ ಕ್ಷೇತ್ರಗಳಿಗೆ ಪ್ರೋತ್ಸಾಹ ಧನ, ಕಡಿಮೆ ಬಡ್ಡಿದರದಲ್ಲಿ ಸಂಘಗಳ ಸದಸ್ಯರಿಗೆ ಸಾಲ ಸೌಲಭ್ಯ ನೀಡುತ್ತಿದೆ. ಸ್ವಜನ ಜಾಗೃತಿ ವೇದಿಕೆ ಮೂಲಕ ವಾಗಿ ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ತಂಬಾಕು ವಿರೋಧಿ ಕಾರ್ಯಕ್ರಮ, ಮಾದಕ ವಸ್ತು ವಿರೋಧಿ ದಿನಾಚರಣೆ ಹಾಗೂ ಗಾಂಧೀಜಿ ಕಂಡಂತಹ ರಾಮರಾಜ್ಯದ ಕನಸು ನನಸು ಮಾಡುವ ನಿಟ್ಟಿನಲ್ಲಿ ಗಾಂಧೀಜಿ ವಿಚಾರಧಾರೆಯನ್ನು ಜನರಿಗೆ ಮುಟ್ಟಿಸುವ ಸದುದ್ದೇಶದಿಂದ ಗಾಂಧಿ ಸ್ಮೃತಿಯ ಹತ್ತು ಹಲವರು ಕಾರ್ಯಕ್ರಮ ನಡೆಸುತ್ತಾ ಬಂದಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ನವ ಜೀವನ ಸದಸ್ಯರು ಸ್ವಸಹಾಯ ಸಂಘಗಳ ಒಕ್ಕೂಟದ ಮಾದರಿಯಲ್ಲಿ ನವಜೀವನ ಸಮಿತಿಗಳ ಒಕ್ಕೂಟಗಳನ್ನು ರಚನೆ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಕೈ ಜೋಡಿಸಿದರೆ ಮತ್ತಷ್ಟು ಜನಜಾಗೃತಿ ಕಾರ್ಯಕ್ರಮ ಅನುಷ್ಠಾನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಅಸ್ಲಾಂ ಖಾನ್, ಶ್ರೀಧರ್, ಮಲ್ಲಪ್ಪ, ಕವಿತ, ಅಜ್ಜಂಪುರ ತಾಲೂಕು ಯೋಜನಾಧಿಕಾರಿ ಸಂಜೀವಗೌಡ ಮಾತನಾಡಿದರು. ಗಾಂಧೀಜಿ ಭಾವಚಿತ್ರಕ್ಕೆ ಗಣ್ಯ ವ್ಯಕ್ತಿಗಳು ಮತ್ತು ಪಾನಮುಕ್ತ ಸದಸ್ಯರಿಂದ ಪುಷ್ಪಾರ್ಚನೆ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಸಲ್ಪಡುವ ಮದ್ಯವರ್ಜನ ಶಿಬಿರಗಳಿಗೆ ಸೇರಿ ಪಾನಮುಕ್ತಗೊಂಡ ಸದಸ್ಯರು ಮತ್ತು ಕುಟುಂಬಸ್ಥರು ತಮ್ಮ ಅನುಭವ ಅಭಿಪ್ರಾಯ ಹಂಚಿಕೊಂಡರು.ಮೇಲ್ವಿಚಾರಕರರಾದ ಶ್ರೀನಾಥ್. ಸಿದ್ದಯ್ಯ. ಹೊಮಿಯೋನಾಯ್ಕ್, ರಮೇಶ್, ಸೇವಾಪ್ರತಿನಿಧಿ ಸಂಘದ ಸದಸ್ಯರು, ಪಾನಮುಕ್ತ ಸದಸ್ಯರು ಉಪಸ್ಥಿತರಿದ್ದರು.8ಕೆಟಿಆರ್.ಕೆ.4ಃ
ತರೀಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನಿಂದ ನಡೆದ ಗಾಂಧಿ ಸ್ಸೃತಿ ಹಾಗೂ ಪಾನಮುಕ್ತ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸಾಹಿತಿ ಮೋಹನ್ ಮನಸುಳಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎ.ಸಿ.ಚಂದ್ರಪ್ಪ,, ಯೋಜನಾಧಿಕಾರಿ ಕುಸುಮಾಧರ್ ಮತ್ತಿತರರು ಭಾಗವಹಿಸಿದ್ದರು.