ಯಲಬುರ್ಗಾ:
ಶ್ರೀಗಳಾದ ಬಸವಲಿಂಗೇಶ್ವರ ಸ್ವಾಮೀಜಿ, ಒಪ್ಪತ್ತೇಶ್ವರ ಸ್ವಾಮೀಜಿ, ಗುರು ಸಿದ್ದೇಶ್ವರ ಸ್ವಾಮೀಜಿ, ಗಂಗಾಧರೇಶ್ವರ ಸ್ವಾಮೀಜಿ ಅಯೋಧ್ಯೆ, ಕಾಶಿ ಇತರೆ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ಶ್ರೀಧರಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಧರ್ಮ, ಸತ್ಯ, ನ್ಯಾಯ, ನಿಷ್ಠೆ, ಪ್ರಾಮಾಣಿಕವಾಗಿ ಇದ್ದಾಗ ಮಾತ್ರ ದೇವರ ಕಾಣಬಹುದು, ಪ್ರಯಾಗರಾಜ್ ಯಾತ್ರೆ ನೋಡಿದಾಗ ಅಲ್ಲಿನ ಸಾಧುಗಳ ರೂಪದಲ್ಲಿ ದೇವರ ದರ್ಶನ ಸಿಗುತ್ತದೆ. ಎಲ್ಲರ ಜೀವನದಲ್ಲಿ ಧರ್ಮ ಪಾಲನೆ ಮಾಡಿದಾಗ ಬದುಕು ಸಾರ್ಥಕಗೊಳ್ಳುತ್ತದೆ. ಪ್ರಯಾಗರಾಜ್ ಯಾತ್ರೆ ಅತ್ಯಂತ ಧಾರ್ಮಿಕವಾಗಿ ಇತಿಹಾಸ ಪಡೆದುಕೊಂಡಿದೆ ಎಂದರು.ಗುಳೇದಗುಡ್ಡದ ಅಭಿನವ ಶ್ರೀಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ಮಹಾಕುಂಭಮೇಳ ದೇಶದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಮಹಾಸಂಗಮವಾಗಿದೆ. ೬೬ ಕೋಟಿ ಹೆಚ್ಚು ಜನರು ಪ್ರಯಾಗರಾಜಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದು ಯಾವ ದೇಶದಲ್ಲಿ ಇಷ್ಟೊಂದು ಜನ ಸೇರುವ ಉದಾಹರಣೆ ಇಲ್ಲ, ಆದರೆ, ನಮ್ಮ ಸನಾತನ ಧರ್ಮದ ಪ್ರತೀಕವಾಗಿರುವ ಮಹಾ ಕುಂಭಮೇಳ ಸಾಕ್ಷಿಯಾಗಿದೆ. ಇಂತಹ ಪುಣ್ಯಕ್ಷೇತ್ರಗಳಲ್ಲಿ ಭೇಟಿ ನೀಡಿರುವುದರಿಂದ ಆಧ್ಯಾತ್ಮಿಕವಾಗಿ ನೆಮ್ಮದಿ ದೊರೆಯುತ್ತದೆ. ಅಲ್ಲಿನ ಸಾಧುಗಳ ಧರ್ಮ ನಿಷ್ಠೆಗೆ ನಾವೆಲ್ಲರೂ ಬದ್ಧರಾಗಿರಬೇಕು. ಶ್ರೀಮಠಕ್ಕೆ ಕಾಶಿಶ್ರೀ, ಸಾಧುಗಳನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ರೋಣದ ಗಂಗಾಧರೇಶ್ವರ ಸ್ವಾಮೀಜಿ, ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ ಹಾಗೂ ಶ್ರೀಮಠದ ಭಕ್ತರು ಇದ್ದರು.