ಶರಣರ ಗುಣ ಅಳವಡಿಕೊಂಡರೆ ಬದುಕು ಸಾರ್ಥಕ: ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

KannadaprabhaNewsNetwork |  
Published : Jan 15, 2024, 01:47 AM IST
ತಾಲೋಕಿನ ಮಾಡಾಳು ನೀರಂಜನ ಪೀಠ ಆಯೋಜಿಸಿದ್ದ ಮಠದ ಹಿರಿಯ ಗುರುಗಳಾದ ಲಿಂಗೈಕ್ಯ ಚಂದ್ರಶೇಖರ ಸ್ವಾಮಿಯವರ 17 ನೇ ವರ್ಷದ ಸ್ಮರಣೊತ್ಸ ವ ಹಾಗೂ 24 ನೇ ಅರಿವಿನ ಜಾಗೃತಿ ಕಾರ್ಯಕ್ರಮ ಸಾನಿಧ್ಯ ವಹಿಸಿ ಅಶಿರ್ವಚನ ನೀಡಿದ ತರಳಬಾಳು ಶಾಖಾ ಮಠದ ಸಾಣೆಹಳ್ಳಿ ಡಾ| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ | Kannada Prabha

ಸಾರಾಂಶ

ಮನುಷ್ಯ ಒಳ್ಳೆಯ ಆಲೋಚನೆಗಳನ್ನು ಉತ್ತಮ ಗುಣಗಳನ್ನು ರೂಪಿಸಿಕೊಂಡು ಜೀವನದಲ್ಲಿ ಬಸವಾದಿ ಶಿವಶರಣರ ನಡೆ ನುಡಿಗಳನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಬದುಕಿಗೆ ಒಂದು ಅರ್ಥ ಸಿಗುತ್ತದೆ ಎಂದು ತರಳಬಾಳು ಶಾಖಾ ಮಠದ ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಶನಿವಾರ ತಿಳಿಸಿದರು. ಅರಸೀಕೆರೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮನುಷ್ಯ ಒಳ್ಳೆಯ ಆಲೋಚನೆಗಳನ್ನು ಉತ್ತಮ ಗುಣಗಳನ್ನು ರೂಪಿಸಿಕೊಂಡು ಜೀವನದಲ್ಲಿ ಬಸವಾದಿ ಶಿವಶರಣರ ನಡೆ ನುಡಿಗಳನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಬದುಕಿಗೆ ಒಂದು ಅರ್ಥ ಸಿಗುತ್ತದೆ ಎಂದು ತರಳಬಾಳು ಶಾಖಾ ಮಠದ ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಶನಿವಾರ ತಿಳಿಸಿದರು.

ತಾಲೂಕಿನ ಮಾಡಾಳು ನಿರಂಜನ ಪೀಠ ಆಯೋಜಿಸಿದ್ದ ಮಠದ ಹಿರಿಯ ಗುರುಗಳಾದ ಲಿಂಗೈಕ್ಯ ಚಂದ್ರಶೇಖರ ಸ್ವಾಮಿಯವರ 17 ನೇ ವರ್ಷದ ಸ್ಮರಣೊತ್ಸವ ಹಾಗೂ 24 ನೇ ಅರಿವಿನ ಜಾಗೃತಿ ಕಾರ್ಯಕ್ರಮ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದರು.

ಅಕ್ಷರ ಜ್ಞಾನ ನೈತಿಕ ಸಾಂಸ್ಕೃತಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ಕೊಡುವ ಕೆಲಸವನ್ನು ಲಿಂಗಾಯಿತ ಮಠಗಳು ಮಾಡುತ್ತಿವೆ. ಅಂತಹ ಮಠಗಳಲ್ಲಿ ಮಾಡಾಳಿನ ನಿರಂಜನ ಮಠವು ಒಂದು ಎ೦ದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಅಶೀರ್ವಚನ ನೀಡಿದ ಕರೆಗೋಡಿ ರಂಗಾಪುರ ಮಠದ ಗುರು ಪರದೇಶಿ ಕೆಂದ್ರ ಸ್ವಾಮಿಜಿ, ಸನಾತನ ಧರ್ಮವು ಪ್ರತಿಯೊಬ್ಬರ ಹೃದಯದಲ್ಲಿ ಹಾಸುಹೊಕ್ಕಾಗಿದ್ದು, ವ್ಯಕ್ತಿಗಳು ಹಾಗೂ ಕುಟುಂಬ ಸಮೂದಾಯಗಳನ್ನು ಒಗ್ಗೂಡಿಸುವ ಮೂಲಕ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಬೇಕು ಎ೦ದು ಹೇಳಿದರು

ಮುಂಡರಗಿ ಬೈಲೂರು ನಿಷ್ಕಲ್ಮ ಮಂಟಪದ ನಿಜಗುಣಪ್ರಭು ತೊಂಟದಾರ್ಯ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಪಾಡುಮಟ್ಟಿ ವಿರಕ್ತ ಮಠದ ಗುರು ಬಸವ ಸ್ವಾಮೀಜಿ, ಚಿಕ್ಕಮಂಗಳೂರು ಶಾಸಕ ಎಚ್ ಡಿ ತಮ್ಮಯ್ಯ, ವೀರಶೈವ ಮಹಾಸಬಾದ ಸಿದ್ದೇಶ್ ನಾಗೇಂದ್ರ, ಕೋಳಗುಂದ ಕೇದಿಗೆ ಮಠದ ಜಯಚಂದ್ರ ಶೇಖರ ಸ್ವಾಮೀಜಿ, ಎಸ್ ಎಂ ಗಂಗಾಧರ್ ಜಿಬಿ ಸಿದ್ದೇಶ್ ಸಾಧು, ವೀರಶೈವ ಸಾಧು ಲಿಂಗಾಯತ ಸಮಾಜದ ಕಾರ್ಯದರ್ಶಿ ನಾಗಸಮುದ್ರ ಸ್ವಾಮಿ ಇದ್ದರು.ಚಂದ್ರಶೇಖರ ಸ್ವಾಮಿಯವರ 17ನೇ ಸ್ಮರಣೊತ್ಸ ವ, 24ನೇ ಅರಿವಿನ ಜಾಗೃತಿ ಕಾರ್ಯಕ್ರಮ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದ ತರಳಬಾಳು ಶಾಖಾ ಮಠದ ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ