ಜೀವನದಿ ಕಾವೇರಿ ಸಾಕ್ಷ್ಯಚಿತ್ರ: ಪ್ರಥಮ ಪ್ರದರ್ಶನ ಹೌಸ್‌ಪುಲ್‌

KannadaprabhaNewsNetwork |  
Published : May 07, 2025, 12:52 AM IST
5ಸಿಎಚ್‌ಎನ್‌51ಜೀವನದಿ ಕಾವೇರಿ ಸಾಕ್ಷ್ಯಚಿತ್ರ ಪ್ರದರ್ಶನಗೊಂಡ ಚಿತ್ರಮಂದಿರ ಹೌಸ್‌ಪುಲ್‌ ಆಗಿರುವುದು. | Kannada Prabha

ಸಾರಾಂಶ

ಜೀವನದಿ ಕಾವೇರಿ ಸಾಕ್ಷ್ಯಚಿತ್ರ ಪ್ರದರ್ಶನಗೊಂಡ ಚಿತ್ರಮಂದಿರ ಹೌಸ್‌ಪುಲ್‌ ಆಗಿರುವುದು.

ಕನ್ನಡಪ್ರಭ ವಾರ್ತೆ ಚಾಮರಾಜನಗರಜೀವನದಿ ಕಾವೇರಿ ಎಂಬ ಸಾಕ್ಷ್ಯಚಿತ್ರ ನಗರದ ಸಿಂಹಮೂವಿ ಪ್ಯಾರೆಡೈಸ್‌ ಚಿತ್ರಮಂದಿರ ಪ್ರಥಮ ಪ್ರದರ್ಶನ ಹೌಸ್‌ಪುಲ್‌ ಪ್ರದರ್ಶನ ಕಂಡಿತು.ಇವನಾಸೆನ್ಸ್ ಸ್ಟುಡಿಯೋಸ್, ಹೊಳೆಮತ್ತಿ ನೇಚರ್ ಫೌಂಡೇಷನ್, ಅರಣ್ಯ ಇಲಾಖೆಯ ಸಹಯೋಗದಲ್ಲಿ ಸಿದ್ಧವಾಗಿದ್ದ ಕನ್ನಡ ಆವೃತ್ತಿಯ ಪ್ರಥಮ ಸಾಕ್ಷ್ಯಚಿತ್ರಕ್ಕೆ ಮೇ 5ರಂದು ಸಂಜೆ 6 ಗಂಟೆಗೆ ಸಿಂಹ ಮೂವಿ ಪ್ಯಾರಡೈಸ್‌ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಪರಿಸರ ಪ್ರೇಮಿಗಳು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಚಿತ್ರಮಂದಿರಕ್ಕೆ ಆಗಮಿಸಿ ಸಾಕ್ಷಿಯಾದರು.58 ನಿಮಿಷಗಳ ಕಾಲವಿರುವ ಈ ಸಾಕ್ಷ್ಯಚಿತ್ರಕ್ಕೆ 4 ವರ್ಷಗಳ ಕಾಲ ಅವಧಿ ತೆಗೆದುಕೊಂಡಿದ್ದು, ಜಿಲ್ಲೆಯ ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾನಗಳ ಅಪೂರ್ಣ ವೈವಿದ್ಯತೆ ಹಾಗೂ ಅವುಗಳ ಸುಂದರ ಭೂದೃಶ್ಯಗಳನ್ನು ಪ್ರದರ್ಶನದಲ್ಲಿ ತೊರಲಾಗಿತ್ತು.ಅಪೂರ್ವ ಪರಿಸರ ವ್ಯವಸ್ಥೆಗಳನ್ನು ರೂಪಿಸಿ, ವಿಸ್ಮಯಕಾರಿ ವನ್ಯಜೀವಿಗಳನ್ನು ಪಾಲಿಸುವ ಅಮೋಘ ನದಿ ಕಾವೇರಿಯ ಕಥೆಯಿದು, ಅತ್ಯಂತ ಸುಂದರ, ಆದರೆ ಹೆಚ್ಚು ಪ್ರಚಲಿತವಲ್ಲದ ಕಾವೇರಿ ಮತ್ತು ಮಲೆಮಹದೇಶ್ವರ ವನ್ಯಜೀವಿಧಾಮಗಳ ಎಲ್ಲ ಋತುಗಳು ಮೂಲಕ ಕೊಂಡೊಯ್ದು ಅಲ್ಲಿನ ದೊಡ್ಡ ಮತ್ತು ಚಿಕ್ಕಪುಟ್ಟ ವನ್ಯಜೀವಿಗಳು ತಮ್ಮ ಉಳಿವಿಗೆ ಹೋರಾಡುವ ಸುಂದರ ಕಥೆಯನ್ನು ಹೇಳಲಾಗಿದೆ. ಸಮ್ಮೋಹನಗೊಳಿಸುವ ದೃಶ್ಯಗಳು ಮತ್ತು ಹಿಂದೆಂದೂ ದಾಖಲಿಸದ ಸನ್ನಿವೇಶಗಳ ಮೂಲಕ ನಿಸರ್ಗದ ನಿಗೂಢ ವಿಸ್ಮಯಗಳನ್ನು ಈ ಸಾಕ್ಷ್ಯಚಿತ್ರ ತೆರೆದಿಟ್ಟಿದ್ದು, ಜೀವಿಗಳ ಕಷ್ಟಕರವಾದ ಭೂದೃಶ್ಯವಿರುವ ಜೀವನದಿ ಕಾವೇರಿ ಪ್ರಾಣಿ ಜಗತ್ತಿನ ಸೂಕ್ಷ್ಮವಾದ ಸಮತೋಲನವನ್ನು ಎತ್ತಿ ತೋರಿಸಿದೆ. ಜೀವನದಿ ಕಾವೇರಿ, ಒಂದು ವಾಣಿಜ್ಯೇತರ ಚಿತ್ರವಾಗಿದ್ದು, ಉಚಿತ ಪ್ರದರ್ಶನಗೊಳ್ಳುತ್ತಿದೆ. ಇದು ವನ್ಯಜೀವಿಗಳು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜವಾಬ್ದಾರಿಯುತ ಸಾಕ್ಷ್ಯಚಿತ್ರವಾಗಿದೆ. ಬಹು ಮುಖ್ಯವಾಗಿ ಈ ಚಿತ್ರವನ್ನು ಆಸುಪಾಸಿನ ಶಾಲಾ ಕಾಲೇಜುಗಳು, ಹಳ್ಳಿಗಳಲ್ಲಿ ಪ್ರದರ್ಶಿಸಿ ಪ್ರಜ್ಞೆಯನ್ನು ಬೆಳೆಸುವ ಗುರಿಯೊಂದಿಗೆ ನಿರ್ಮಿಸಲಾಗಿರುವ ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳ ವನ್ಯಜೀವಿಗಳು ಮತ್ತು ಅವುಗಳ ಆವಾಸಸ್ಥಾನದ ಸಂರಕ್ಷಣೆಗೆ ಬೆಂಬಲ ಕ್ರೂಡೀಕರಿಸುವ ಗುರಿಹೊಂದಿದೆ.

-ಡಾ.ಸಂಜಯ್ ಗುಬ್ಬಿ, ಕಾರ್ಯನಿರ್ವಾಹಕ ನಿರ್ಮಾಪಕ

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್