- ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯು 56ನೇ ವಾರ್ಷಿಕ ಸಂಭ್ರಮ । 3ನೇ ದಿನದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ದಾವಣಗೆರೆ
ತಾಯಿ ಸಂತೋಷವಾಗಿದ್ದರೆ ಆ ಮನೆ ಸಂತೋಷದಿಂದ ಕೂಡಿರುತ್ತದೆ, ಮನೆಗಳು ಸಂತೋಷವಾಗಿದ್ದರೆ ಊರು, ಊರಿನಿಂದ ರಾಜ್ಯ, ರಾಜ್ಯದಿಂದ ದೇಶ ಎಲ್ಲವೂ ಸಂತೋಷದಿಂದ ಕೂಡಿರುತ್ತದೆ. ಇಂದಿನ ಅನೇಕ ಸಮಸ್ಯೆಗಳಿಗೆ ಪೋಷಕರ ಒತ್ತಡದ ಜೀವನ, ಸಮಸ್ಯೆಗಳೇ ಕಾರಣ ಎಂದು ಸಂಪ್ರದಾಯ ಟ್ರಸ್ಟ್ ಸಹ ಸಂಸ್ಥಾಪಕ, ತರಬೇತುದಾರ ಡಿ.ಪಿ. ಚೇತನ್ ಅಭಿಪ್ರಾಯಪಟ್ಟರು.ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯು 56ನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ಸೋಮವಾರ ಸಂಜೆ ನಡೆದ 3ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಸಂಸ್ಥೆಯು ಕೊಡುವ ಡಾ. ಎಂ.ಎಸ್.ಎಸ್. ಪ್ರಶಸ್ತಿಯನ್ನು ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪುರಸ್ಕೃತೆ ವಾಗ್ದೇವಿ ಅವರಿಗೆ ಗೌರವಪೂರ್ವಕವಾಗಿ ಪ್ರದಾನ ಮಾಡಲಾಯಿತು. ತಮ್ಮನ್ನು ಗುರುತಿಸಿದ್ದಕ್ಕಾಗಿ ಕೃತಜ್ಞತೆಯ ಮಾತುಗಳನ್ನು ಹೇಳಿದ ಅವರು, ತಾವು ಈ ಹಿಂದೆ ಕಾರ್ಯನಿರ್ವಹಿಸಿದ ಶಾಲೆ ಆಡಳಿತ ಮಂಡಳಿಯವರ ಸಹಕಾರವಿಲ್ಲದಿದ್ದರೆ, ಕುಟುಂಬದ ಬೆಂಬಲವಿಲ್ಲದಿದ್ದರೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.
ಸಿದ್ದಗಂಗಾ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಕೆ.ಎಸ್. ರೇಖಾರಾಣಿ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೀವಿ ಮಠದ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. 2024-25ನೇ ಸಾಲಿನಲ್ಲಿ ಸಿ.ಬಿ.ಎಸ್.ಇ. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
(ಕೋಟ್) ತಮ್ಮ ಮಕ್ಕಳ ಅಂಕಗಳಿಕೆಯೇ ದೊಡ್ಡ ಸಾಧನೆ ಎಂಬ ಭ್ರಮೆಯಿಂದ ಪೋಷಕರು ಮೊದಲು ಹೊರಬರಬೇಕು. ಅಂಕ ಗಳಿಕೆಗಿಂತ ಮುಖ್ಯವಾಗಿ ಮಗು ದಿನನಿತ್ಯದ ಬದುಕಲ್ಲಿ ಹೊಂದಿರಬೇಕಾದ ಸುಮಾರು 100 ಕೌಶಲ್ಯಗಳಿವೆ. ಅವುಗಳನ್ನು ಮೊದಲು ಪೋಷಕರು ಅರಿತು ಮಕ್ಕಳನ್ನು ಬೆಳೆಸಬೇಕಾಗಿದೆ.
- - -
ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ ನಡೆದ 56ನೇ ವಾರ್ಷಿಕ ಸಂಭ್ರಮದಲ್ಲಿ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪುರಸ್ಕೃತೆ ವಾಗ್ದೇವಿಗೆ ಡಾ. ಎಂ.ಎಸ್.ಎಸ್. ಪ್ರಶಸ್ತಿ ನೀಡಿ ಗೌರವಿಸಲಾಯಿತು.