ಬಾಗಲಕೋಟೆ ಜಿಲ್ಲೆಯ ಪರಮರಾಮಾರೂಢ ಸ್ವಾಮೀಜಿಗೆ ಜೀವ ಬೆದರಿಕೆ..!

KannadaprabhaNewsNetwork |  
Published : Nov 05, 2024, 12:35 AM IST
4ಕೆಎಂಎನ್ ಡಿ15 | Kannada Prabha

ಸಾರಾಂಶ

ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಪದವಿ ಬಳಸಿ ಶ್ರೀಗಳನ್ನು ವಂಚಿಸಿ ಜೈಲು ಸೇರಿದ್ದ ಪ್ರಕಾಶ್ ಮುದೋಳ ಬೇಲ್ ಮೂಲಕ ಹೊರಕ್ಕೆ ಬಂದಿದ್ದು, ಜೊತೆಗೆ ಅನೇಕ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈಗ ಸ್ವಾಮೀಜಿ ಅವರಿಗೆ ಬಾಗಲಕೋಟೆ ಮಠ ಬಿಟ್ಟು ಬೇರೆಕಡೆ ತೆರಳಲು ಜೀವ ಭಯ ಕಾಡುತ್ತಿದೆ. ಅವರಿಂದ ಅಥವಾ ಬೇರೆಯವರಿಂದ ತೊಂದರೆಯಾಗಬಹುದು ಎಂದು ಬೇರೆ ಮಠಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಳವಳ್ಳಿ ಹಾಗೂ ಬಾಗಲಕೋಟೆ ಶ್ರೀರಾಮರೂಢಸ್ವಾಮಿ ಮಠದ ಪೀಠಾಧ್ಯಕ್ಷ ಪರಮರಾಮಾರೂಢ ಸ್ವಾಮೀಜಿಗಳಿಗೆ ಜೀವ ಬೆದರಿಕೆ ಇರುವುದರಿಂದ ಸರ್ಕಾರ ಪೊಲೀಸ್ ರಕ್ಷಣೆ ನೀಡಬೇಕು ಎಂದು ಮಠದ ಭಕ್ತರು ಹಾಗೂ ಪಟ್ಟಣದ ಗಂಗಾಮತಸ್ಥರ ಬೀದಿಯ ಮುಖಂಡರು ಸರ್ಕಾರಕ್ಕೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ಮೂಲಕ ಮನವಿ ಸಲ್ಲಿಸಿದರು.

ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಪದವಿ ಬಳಸಿ ಶ್ರೀಗಳನ್ನು ವಂಚಿಸಿ ಜೈಲು ಸೇರಿದ್ದ ಪ್ರಕಾಶ್ ಮುದೋಳ ಬೇಲ್ ಮೂಲಕ ಹೊರಕ್ಕೆ ಬಂದಿದ್ದು, ಜೊತೆಗೆ ಅನೇಕ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಈಗ ಸ್ವಾಮೀಜಿ ಅವರಿಗೆ ಬಾಗಲಕೋಟೆ ಮಠ ಬಿಟ್ಟು ಬೇರೆಕಡೆ ತೆರಳಲು ಜೀವ ಭಯ ಕಾಡುತ್ತಿದೆ. ಅವರಿಂದ ಅಥವಾ ಬೇರೆಯವರಿಂದ ತೊಂದರೆಯಾಗಬಹುದು ಎಂದು ಬೇರೆ ಮಠಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ವಾಮೀಜಿಗೆ ಪೊಲೀಸ್ ರಕ್ಷಣೆಯ ಉದ್ದೇಶದಿಂದ ಗನ್ ಮ್ಯಾನ್ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ.ಪರಮೇಶ್ವರ್ ಅವರ ಗಮನ ಸೆಳೆಯುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಪುರಸಭೆ ಸದಸ್ಯರಾದ ಎಂ.ಎನ್.ಶಿವಸ್ವಾಮಿ, ನಾಗೇಶ್, ಗಂಗಮತಸ್ಥ ಮುಖಂಡರಾದ ಯಜಮಾನ್ ನಂಜುಂಡಸ್ವಾಮಿ, ಉಮೇಶ್, ಚಿಕ್ಕಸ್ವಾಮಿ, ಎಂ.ಎಚ್.ಶ್ರೀಕಂಠಯ್ಯ, ಶಿವಣ್ಣ, ಶಿವಪ್ಪ, ಶಿವಕುಮಾರ್, ಗಂಗರಾಜೇ ಅರಸು, ಎಂ.ಸಿ.ಗಂಗರಾಜು, ಎಂ.ಮಹದೇವಯ್ಯ, ಮೀನುಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷ ಸಿದ್ದಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ