ಕನಕಗಿರಿಯ ಬಿಜೆಪಿ ಮಂಡಲದಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಕನಕಗಿರಿರೈತ ವಿರೋಧಿ ನೀತಿಯ ಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್ ಹಾಗೂ ವಕ್ಫ್ ಬೋರ್ಡ್ ನಡೆ ಖಂಡಿಸಿ ಕನಕಗಿರಿಯ ಬಿಜೆಪಿ ಮಂಡಲದಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಛಲವಾದಿ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಎಂದು ಸೇರಿಸಿ, ಹಲವು ರೈತರಿಗೆ ನೊಟೀಸ್ ನೀಡುವ ಮೂಲಕ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದೆ. ಕೃಷಿಯನ್ನೇ ನಂಬಿ ಬದುಕಿದ್ದ ಹಲವು ರೈತ ಕುಟುಂಬಗಳು ಇದೀಗ ತಮ್ಮ ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ಇಂದೀಕರಣಗೊಂಡಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ನೆಪದಲ್ಲಿ ನೀಡಿದ ನೊಟೀಸ್‌ಗಳನ್ನು ವಾಪಸ್ ಪಡೆಯುವಂತೆ ಸೂಚಿಸುವುದಕ್ಕಿಂತ ಗೆಜೆಟ್ ನೋಟಿಫಿಕೇಷನ್ ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಯುವ ಕೆಲಸ ಮಾಡಬೇಕು. ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ನಂತರ ಶಿರಸ್ತೇದಾರ ಶರಣಪ್ಪ ಮನವಿ ಸ್ವೀಕರಿಸಿದರು.ಬಿಜೆಪಿ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತಹಸೀಲ್ದಾರ್ ಕಛೇರಿಯವರೆಗೆ ನಡೆಯಿತು.
ಪ್ರಮುಖರಾದ ಮಹಾಂತೇಶ್ ಸಜ್ಜನ್, ಗ್ಯಾನಪ್ಪ ಚಿಕ್ಕಖೇಡ, ಪ್ರಕಾಶ ಹಾದಿಮನಿ, ರಂಗಪ್ಪ ಕೊರಗಟಗಿ, ಶಿವಾನಂದ ವಂಕಲಕುಂಟಿ, ಯಂಕರೆಡ್ಡಿ ಮೋದಿ, ಶಿವಕುಮಾರ ಕೋರಿ, ವೆಂಕಟೇಶ್ ನಾಯಕ, ಪೃಥ್ವಿ ಮ್ಯಾಗೇರಿ, ಸುಭಾಸ್ ಕಂದಕೂರ್, ಪಂಪನಗೌಡ ಆಕಳಕುಂಪಿ, ಹನುಮೇಶ್ ನಾರಾಯಣ, ಹರೀಶ ಪೂಜಾರ್, ಸುರೇಶ ಗುಗ್ಗಳಶೆಟ್ರ, ಲಿಂಗಪ್ಪ ಪೂಜಾರ, ರವೀಂದ್ರ ಸಜ್ಜನ್, ಅರುಣ್ ಬಿ., ವಿಜಯ್ ಹುಲಿಹೈದರ್, ವೆಂಕಟೇಶ್ ಪೂಜಾರ್, ಉಮೇಶ್ ಮ್ಯಾಗಡೆ, ಸೋಮನಗೌಡ ಹುಲಸನಹಟ್ಟಿ, ಹನುಮಂತಪ್ಪ ಕುಷ್ಟಗಿ ಇತರರಿದ್ದರು.