ಅಮರ ಭಾರತಿ ವಿದ್ಯಾಸಂಸ್ಥೆ ವಾರ್ಷಿಕೋತ್ಸವ, ಪುಣ್ಯಸ್ಮರಣೆಯಲ್ಲಿ ಅಭಿಪ್ರಾಯ
ಅಮರ ಭಾರತಿ ವಿದ್ಯಾಸಂಸ್ಥೆ ಸಂಸ್ಥಾಪಕ ದಿ.ಟಿ.ತಿಪ್ಪೇಸ್ವಾಮಿ ಇಹಲೋಕ ತ್ಯಜಿಸಿದ್ದರೂ, ಅವರು ಹಾಕಿಕೊಟ್ಟ ಜೀವನ ಮೌಲ್ಯಗಳು ಬದುಕಿನಲ್ಲಿ ಜೀವಂತವಾಗಿವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಅಮರ ಭಾರತಿ ವಿದ್ಯಾ ಕೇಂದ್ರದ ನಾಲಂದ ಬಯಲು ರಂಗಮಂದಿರ ಆವರಣದಲ್ಲಿ ಭಾನುವಾರ ಸಂಜೆ ನಡೆದ ೨೦೨೩ -೨೪ ೨೪ನೇ ಸಾಲಿನ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಹಾಗೂ ವಿದ್ಯಾರತ್ನ ಡಾ.ಟಿ ತಿಪ್ಪೇಸ್ವಾಮಿ ಪುಣ್ಯಸ್ಮರಣೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿ ಅವರು ಶಿಕ್ಷಣ, ಅನ್ನ ನೀಡಿದ್ದಲ್ಲದೆ ನನ್ನ ಎಂದಿಗೂ ಜವಾನ ಎಂದು ನೋಡಿದವರಲ್ಲ. ಮನೆಯ ವ್ಯಕ್ತಿ ಅಂತೆಯೇ ನೋಡಿದ್ದರು. ಅವರ ಶಿಸ್ತು, ಪರಿಶ್ರಮವೇ ಇಂದು ನಾನು ಶಾಸಕನಾಗಲು ಕಾರಣ. ಈ ಸಂಸ್ಥೆಯಲ್ಲಿ ಕಲಿತ ನನ್ನ ಇಬ್ಬರು ಮಕ್ಕಳಲ್ಲಿ ಐಎಎಸ್ ಪರೀಕ್ಷೆ ಪಾಸು ಮಾಡಿ ಉಪ ಕಮಿಷನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.ಅಮರ ಭಾರತಿ ವಿದ್ಯಾಕೇಂದ್ರದ ಗೌರವ ಕಾರ್ಯದರ್ಶಿ ಮಧು ಮಾತನಾಡಿ ಬರಡು ಭೂಮಿಯಲ್ಲಿ ಬಡ ಜನರ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂಬ ಗುರಿ ಇಟ್ಟುಕೊಂಡು 1973ರಲ್ಲಿ ನಮ್ಮ ತಂದೆ ಟಿ.ತಿಪ್ಪೇಸ್ವಾಮಿ ಅಮರ ಭಾರತಿ ವಿದ್ಯಾಸಂಸ್ಥೆ ಪ್ರಾರಂಭಿಸಿದ್ದರು. ಇಂದು ಶಿಕ್ಷಣ ಓಡುವ ಕುದುರೆಯಾಗಿದೆ. ಮೌಲ್ಯಾಧಾರಿತ ಶಿಕ್ಷಣದ ಅವಶ್ಯವಿದೆ ಎಂದರು.
ವಿದ್ಯಾರ್ಥಿಗಳು, ಸಾಧಕರಿಗೆ ಸನ್ಮಾನ:
ಶಾಲಾ ಕಾಲೇಜುಗಳಲ್ಲಿ ಹೆಚ್ಚು ಅಂಕಗಳಿಸಿದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ರಾಜೇಶ್ವರಿ, ಪ್ರಿಯಾಂಕಾ, ದ್ವಿತೀಯ ಪಿಯುಸಿಯ ಶಾಂತೇಶ, ಬಿಇಡಿ ಪದವಿಯ ನಯನಾ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಭದ್ರ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ತೋರಣಗಟ್ಟೆ ತಿಪ್ಪೇಸ್ವಾಮಿ, ಸಮಾಜ ಸೇವೆ ಕ್ಷೇತ್ರದಲ್ಲಿ ಜಿ.ಎಚ್ ಶಂಭುಲಿಂಗಪ್ಪ, ಗೋಪಗೊಂಡನಹಳ್ಳಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬಿ.ಪಿ. ಸುಭಾನ್ ಜಗಳೂರು, ಕೃಷಿ ಕ್ಷೇತ್ರದಲ್ಲಿ ಬಿ ಆರ್ ರಂಗಪ್ಪ ಜಮ್ಮಾಪುರ ಇವರ ಸನ್ಮಾನಿಸಲಾಯಿತು.