ವಿಶ್ವದಾದ್ಯಂತ ಕನ್ನಡ ಸಾಹಿತ್ಯ ಸಂಸ್ಕೃತಿಯ ಬೆಳಕು: ಎನ್. ಶಿವಮೂರ್ತಿ

KannadaprabhaNewsNetwork |  
Published : Jan 11, 2024, 01:30 AM IST
ತಾಲೂಕಿನ ಹೊರಕೆರೆದೇವರಪುರದ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಎಚ್.ಡಿ.ರಂಗಯ್ಯ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಕನ್ನಡ ಭಾಷೆ ಬೆಳವಣಿಗೆ ಹಾಗೂ ಕರ್ನಾಟಕದ ಒಗ್ಗೂಡುವಿಕೆಗೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಲಾಯಿತು ಎಂದು ತಾಲೂಕು ಕಸಾಪ ಅಧ್ಯಕ್ಷ ಎನ್.ಶಿವಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಕನ್ನಡ ಭಾಷೆ ಕನ್ನಡಿಗರ ಜನಮನದ ಭಾಷೆಯಾಗಿದೆ. ಕನ್ನಡಿಗರು ಜಗದಗಲ ಇಂದು ಪಸರಿಸಿದ್ದಾರೆ. ಕನ್ನಡ ಸಂಸ್ಕೃತಿ ಸಾಹಿತ್ಯವನ್ನು ವಿಶ್ವದಾದ್ಯಂತ ಬೆಳಗುತ್ತಿದ್ದಾರೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎನ್.ಶಿವಮೂರ್ತಿ ಹೇಳಿದರು.

ತಾಲೂಕಿನ ಹೊರಕೆರೆದೇವರಪುರದ ಶ್ರೀ ಬನಶಂಕರಿ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೊಳಲ್ಕೆರೆ ವತಿಯಿಂದ ಬಿ.ಎಂ.ಶ್ರೀ ಹಾಗೂ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಕನ್ನಡ ಭಾಷೆ ಬೆಳವಣಿಗೆ ಹಾಗೂ ಕರ್ನಾಟಕದ ಒಗ್ಗೂಡುವಿಕೆಗೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಲಾಯಿತು. ಅದರ ಪ್ರಮುಖ ಗುರಿ ಈಡೇರಿದರು ಒಗ್ಗೂಡಿದ ಕರ್ನಾಟಕ ವಿವಿಧ ಭಾಷಿಕರ ಆಡಳಿತದಿಂದ ಕನ್ನಡ ಆಡಳಿತದಲ್ಲಿ ಜಾರಿಯಾಗಲು ಕನ್ನಡ ಶಿಕ್ಷಣದಲ್ಲಿ ಮಾಧ್ಯಮವಾಗಲು ಶ್ರಮಿಸಬೇಕಾಯಿತು. ಇಂದು ಕನ್ನಡದ ಸಾಕಷ್ಟು ಕಾರ್ಯಕ್ರಮಗಳು ಸಾಹಿತ್ಯ ಪರಿಷತ್ತಿನಿಂದ ನಡೆಯುತ್ತಿದೆ. ಹೊರಕೆರೆದೇವರಪುರದಲ್ಲಿಯ ಈ ಕನ್ನಡ ಕಾರ್ಯಕ್ರಮ ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ ಎಂದು ಹೇಳಿದರು.

ತಹಸೀಲ್ದಾರ್‌ ಬೀಬಿ ಫಾತಿಮಾ ಮಾತನಾಡಿ, ಬಾಲ್ಯದಿಂದಲೇ ಕನ್ನಡ ಸಾಹಿತ್ಯದ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಪೋಷಕರು ಶ್ರಮಿಸಬೇಕು. ವಿದ್ಯಾರ್ಥಿಗಳು ಪಠ್ಯದ ಜೊತೆ ಸಾಹಿತ್ಯ, ಸಂಗೀತ, ನಾಟ್ಯ ಕಲೆಗಳ ಕುರಿತು ಅಧ್ಯಯನದ ಹವ್ಯಾಸ ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಆಶಯ ನುಡಿಗಳನ್ನಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗು ಸಾಹಿತಿಗಳಾದ ಟಿ.ಪಿ.ಉಮೇಶರವರು ಕನ್ನಡ ಭಾಷೆಯು ಅಳಿಯಲು ಸಾಧ್ಯವಿಲ್ಲ. ಕನ್ನಡ ಜಗತ್ತಿನ ಸುಂದರ ಲಿಪಿಯ ಭಾಷೆ ಸುಮಧುರ ನುಡಿಯ ಭಾಷೆ. ಪಂಪನಿಂದ ಕುವೆಂಪು ತನಕ ಕನ್ನಡ ಸಾಹಿತ್ಯ ಬಹುಮುಖಿಯಾಗಿ ಬೆಳೆದಿದೆ. ಕದಂಬ, ಪಲ್ಲವರು, ಹೊಯ್ಸಳರು, ಚಾಲುಕ್ಯರು, ಮೌರ್ಯರು, ಗಂಗರು, ನೊಳಂಬ, ವಿಜಯನಗರ, ಮೈಸೂರು ಅರಸರು ಕನ್ನಡ ಬೆಳವಣಿಗೆಗೆ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರವು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕನ್ನಡ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ತಾಯಿ ಭುವನೇಶ್ವರಿ ಭಾವಚಿತ್ರವನ್ನು ಗ್ರಾಮದ ಬೀದಿಗಳಲ್ಲಿ ಗ್ರಾಮಸ್ಥರು ಶಾಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾದ ನವೀನ್ ಕಿಲಾರಹಳ್ಳಿ, ಪಾವಗಡ ಎಚ್.ಡಿ.ಪುರ ಗ್ರಾಮದ ಲಕ್ಷ್ಮಿ ರಂಗನಾಥಸ್ವಾಮಿ ದೇವಸ್ಥಾನದ ಅಧ್ಯಕ್ಷ ಎಚ್.ಡಿ.ರಂಗಯ್ಯ, ಕಾರ್ಯದರ್ಶಿ ಶೇಷಾದ್ರಿ, ಚಿತ್ರಹಳ್ಳಿ ಪೋಲೀಸ್ ಇನ್ಸ್‌ಪೆಕ್ಟರ್ ಕಾಂತರಾಜು, ವೈಧ್ಯಾಧಿಕಾರಿಗಳಾದ ಜ್ಯೋತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಯಶೋದಮ್ಮ, ಗ್ರಾಪಂ ಅಧ್ಯಕ್ಷ ದಿವಾಕರ.ಎಂ, ಉಪಾಧ್ಯಕ್ಷೆ ಗೀತಮ್ಮ ತಿಮ್ಮರಾಜು, ಉಪತಹಸೀಲ್ದಾರ್ ಅಶೋಕ್, ಆರ್.ಐ ರಂಗನಾಥ, ಯತೀಶ್, ಸರ್ವೇಯರ್ ಶಿವಣ್ಣ, ಬಿ.ಜಿ.ಹಳ್ಳಿ ಮಲ್ಲೇಶಪ್ಪ, ಪಿಡಿಓ ಆರ್.ಅಂಜಿನಪ್ಪ, ಕಾರ್ಯದರ್ಶಿ ಜಗದೀಶ್, ಗ್ರಾಪಂ ಮಾಜಿ ಅಧ್ಯಕ್ಷ ಹೊರಕೇರಪ್ಪ, ಉಪಾಧ್ಯಕ್ಷ ರಮೇಶ್, ದುಗ್ಗಮ್ಮ, ಮಾಜಿ ಉಪಾಧ್ಯಕ್ಷ ಓಬಳೇಶ ಮತ್ತು ಪಂಚಾಯ್ತಿ ಸರ್ವ ಸದಸ್ಯರು, ಮುಖ್ಯೋಪಾಧ್ಯಾಯ ಮಾರುತಿ, ಮುಖ್ಯ ಶಿಕ್ಷಕರಾದ ಮಂಜುಳಾ, ಪರಮೇಶ್ವರಪ್ಪ, ರಂಗನಾಥ, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವದಿಂದ ಜವಾಬ್ದಾರಿ ಹೆಚ್ಚಳ: ಕೆಪಿಸಿಸಿ ಮಂಜುನಾಥ್‌
ಸಾಲಿಗ್ರಾಮ, ಕೆ.ಆರ್‌. ನಗರ ತಾಲೂಕಿಗೆ ಶೇ. 92.13 ಫಲಿತಾಂಶ