ಸಿಡಿಲಿನಿಂದ ವಿದ್ಯುತ್ ಪರಿವರ್ತಕಕ್ಕೆ ಹಾನಿ

KannadaprabhaNewsNetwork |  
Published : May 02, 2025, 12:13 AM IST
1ಎಚ್ಎಸ್ಎನ್14 : ಬೇಲೂರು ತಾಲೂಕು ಅರೇಹಳ್ಳಿ ಮುಖ್ಯರಸ್ತೆಯ ರೋಟರಿ ಭವನದ ಬಳಿಯಿರುವ ೧೦೦ಕೆವಿ ವಿದ್ಯುತ್ ಪರಿವರ್ತಕ  ಕಳೆದ ಗುರುವಾರದಂದು  ಸಿಡಿಲಿಗೆ ಹೊಡೆತಕ್ಕೆ ಹಾನಿಯುಂಟಾಗಿರುವುದು. | Kannada Prabha

ಸಾರಾಂಶ

ಸಿಡಿಲಿನ ಹೊಡೆತಕ್ಕೆ ವಿದ್ಯುತ್ ಪರಿವರ್ತಕ ಹಾನಿಯಾದ ಪರಿಣಾಮ ಇಲ್ಲಿನ ನಿವಾಸಿಗಳು ಕಳೆದ ಒಂದು ವಾರದಿಂದ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಿಂಗಲ್ ಫೇಸ್ ವಿದ್ಯುತ್ತನ್ನು ಇದೇ ಟಿಸಿ ಮೂಲಕ ಪೂರೈಸಲಾಗುತ್ತಿದೆ. ೫ ಕೊಳವೆಬಾವಿಗಳು ಈ ಟಿಸಿಯನ್ನೇ ಅವಲಂಬಿಸಿದ್ದು, ಓವರ್‌ ಹೆಡ್ ಟ್ಯಾಂಕ್ ಭರ್ತಿ ಮಾಡಿ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಒಂದು ವಾರದಿಂದ ಸಿಂಗಲ್ ಫೇಸ್ ವಿದ್ಯುತ್ ಕಾರಣದಿಂದಾಗಿ ಕೊಳವೆ ಬಾವಿ ಮೋಟಾರ್ ಚಾಲನೆ ಆಗದ ಪರಿಣಾಮ ಸಂತೋಷನಗರ, ಮೇಲನಹಳ್ಳಿ, ಈದ್ಗಾ ರಸ್ತೆ, ಮುಖ್ಯ ರಸ್ತೆಯ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಸಿಡಿಲಿನ ಹೊಡೆತಕ್ಕೆ ವಿದ್ಯುತ್ ಪರಿವರ್ತಕ ಹಾನಿಯಾದ ಪರಿಣಾಮ ಇಲ್ಲಿನ ನಿವಾಸಿಗಳು ಕಳೆದ ಒಂದು ವಾರದಿಂದ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕು ಅರೇಹಳ್ಳಿ ಮುಖ್ಯರಸ್ತೆಯ ರೋಟರಿ ಭವನದ ಬಳಿಯಿರುವ ೧೦೦ಕೆವಿ ವಿದ್ಯುತ್ ಪರಿವರ್ತಕ ಕಳೆದ ಗುರುವಾರದಂದು ಸಿಡಿಲಿಗೆ ಹೊಡೆತಕ್ಕೆ ಹಾನಿಯುಂಟಾಗಿತ್ತು. ಪರಿಣಾಮವಾಗಿ ವಿದ್ಯುತ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದಾದ ಬಳಿಕ ಸಿಂಗಲ್ ಫೇಸ್ ವಿದ್ಯುತ್ತನ್ನು ಇದೇ ಟಿಸಿ ಮೂಲಕ ಪೂರೈಸಲಾಗುತ್ತಿದೆ. ೫ ಕೊಳವೆಬಾವಿಗಳು ಈ ಟಿಸಿಯನ್ನೇ ಅವಲಂಬಿಸಿದ್ದು, ಓವರ್‌ ಹೆಡ್ ಟ್ಯಾಂಕ್ ಭರ್ತಿ ಮಾಡಿ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಒಂದು ವಾರದಿಂದ ಸಿಂಗಲ್ ಫೇಸ್ ವಿದ್ಯುತ್ ಕಾರಣದಿಂದಾಗಿ ಕೊಳವೆ ಬಾವಿ ಮೋಟಾರ್ ಚಾಲನೆ ಆಗದ ಪರಿಣಾಮ ಸಂತೋಷನಗರ, ಮೇಲನಹಳ್ಳಿ, ಈದ್ಗಾ ರಸ್ತೆ, ಮುಖ್ಯ ರಸ್ತೆಯ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಈ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ರೈ ಮಾತನಾಡಿ, ಕಳೆದ ಒಂದು ವಾರದಿಂದ ಟಿಸಿ ಹಾನಿಯಾಗಿದೆ. ಸರಿಪಡಿಸುವಂತೆ ಜೆಇ ಗಮನಕ್ಕೆ ತರಲಾಗಿದೆ. ಆದರೆ ಜೆಇಯವರು ಈ ವಿಚಾರವನ್ನು ಮೇಲಾಧಿಕಾರಿಗಳು ಗಮನಕ್ಕೆ ತಂದಿದ್ದು ಅವರು ಅನುಮತಿ ನೀಡಬೇಕೆಂದು ಹೇಳುತ್ತಿದ್ದಾರೆ. ಇತರೆ ವಾರ್ಡ್‌ಗಳಲ್ಲಿ ವಾಸಮಾಡುತ್ತಿರುವ ೫೦೦ಕ್ಕೂ ಹೆಚ್ಚಿನ ನಿವಾಸಿಗಳು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಅತ್ಯಂತ ತ್ವರಿತವಾಗಿ ವಿದ್ಯುತ್ ಸಮಸ್ಯೆಗೆ ಪರಿಹಾರ ನೀಡಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ಸೆಸ್ಕ್ ಅಧಿಕಾರಿ ಕ್ರಮವಹಿಸಬೇಕೆಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!