ವಾಯುವಿಹಾರದೊಂದಿಗೆ ಲಿಂಬಿಕಾಯಿ ಅಬ್ಬರದ ಪ್ರಚಾರ

KannadaprabhaNewsNetwork |  
Published : Oct 14, 2026, 02:00 AM IST
ವಾಯುವಿಹಾರದೊಂದಿಗೆ ಪ್ರಚಾರ ನಡೆಸಿದ ಕಾಂಗ್ರೆಸ್‌ ಅಭ್ಯರ್ಥಿ ಮೋಹನ ಲಿಂಬಿಕಾಯಿ. | Kannada Prabha

ಸಾರಾಂಶ

ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೋಹನ ಲಿಂಬಿಕಾಯಿ ಬೆಳ್ಳಂಬೆಳಗ್ಗೆಯೇ ಅಖಾಡಕ್ಕಿಳಿದು ಪ್ರಚಾರ ಕೈಗೊಂಡರು.

ಹುಬ್ಬಳ್ಳಿ:

ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೋಹನ ಲಿಂಬಿಕಾಯಿ ಬೆಳ್ಳಂಬೆಳಗ್ಗೆಯೇ ಅಖಾಡಕ್ಕಿಳಿದು ಪ್ರಚಾರ ಕೈಗೊಂಡರು.

ಬೆಳಗ್ಗೆ 6ರ ಸುಮಾರಿಗೆ ತೋಳನಕೆರೆಗೆ ತೆರಳಿದ ಅವರು ವಾಯುವಿಹಾರಿಗಳೊಂದಿಗೆ ಸಂಚರಿಸುತ್ತಾ ಮತಯಾಚಿಸಿದರು. ಕುಶಲೋಪರಿ ವಿಚಾರಿಸುತ್ತಾ, ತಾವು ಆರಿಸಿ ಬಂದರೆ ಏನೆಲ್ಲ ಕೆಲಸ ಮಾಡುವವನಿದ್ದೇನೆ. ಏನೆಲ್ಲ ತಮ್ಮ ಕನಸುಗಳಿವೆ.. ಪದವೀಧರರಿಗೆ, ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲು ಕಾಂಗ್ರೆಸ್‌ ಸರ್ಕಾರ ಎಷ್ಟರ ಮಟ್ಟಿಗೆ ಬದ್ಧವಾಗಿದೆ ಎಂಬುದನ್ನು ವಿವರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಗ್ಯಾರಂಟಿ ಯೋಜನೆಗಳಿಂದ ಜನಮನ ಗೆದ್ದಿದೆ. ಈ ಕ್ಷೇತ್ರದಲ್ಲಿ ಈ ಹಿಂದೆ ಆಯ್ಕೆಯಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನು ಕೆಲಸ ಮಾಡುವುದು ಬಹಳಷ್ಟಿವೆ. ಆದಕಾರಣ ಈ ಸಲ ತಮಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ್ ಅಂಗಡಿ, ಬಾಳು ಪಾಟೀಲ್, ಗಿರೀಶ ನಲವಡಿ, ರಮೇಶ ಯಾದವಾಡ, ಶಿವಣ್ಣ ದೊಡ್ಮನಿ, ಡಾ. ಗುಂಜಾಳ, ಬಸವರಾಜ್ ಹೊಳ್ಳೆನವರ, ಅಶೋಕ ಗಡಾದ, ಜಿ.ಎಸ್. ಪಲ್ಲೇದ, ಶಿವನಗೌಡ ಪಾಟೀಲ್, ಎಸ್‌.ಆರ್. ಎಮ್ಮಿ, ಸುರೇಶ್ ಜಾಲಿ ಇದ್ದರು.

ನಂತರ ಬೆಳಗಿನ ವಾಯುವಿಹಾರದೊಂದಿಗೆ ಪ್ರಚಾರ ಮುಗಿಸಿಕೊಂಡು ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು. ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ತಂತ್ರಗಾರಿಕೆ ಹೆಣೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಯಾಚನೆ ವೇಳೆ ಸಂಕನೂರ ಪರ ಎಲ್ಲೆಡೆ ಉತ್ತಮ ಸ್ಪಂದನೆ
ವಿವಾಹಿತೆ ಸಾವು: ಪತಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು