ಬಸವ ತತ್ವದಲ್ಲಿ ಲಿಂಗ ದೀಕ್ಷೆಗೆ ಮಹತ್ವವಿದೆ: ಡಾ.ಪಟ್ಟದೇವರು

KannadaprabhaNewsNetwork |  
Published : Jan 07, 2026, 01:45 AM IST
ಚಿತ್ರ 6ಬಿಡಿಆರ್54 | Kannada Prabha

ಸಾರಾಂಶ

ವಚನ ಸಾಹಿತ್ಯದಲ್ಲಿ ಸಾವಿರಾರು ಕಡೆ ಲಿಂಗದೀಕ್ಷೆ ಮಹತ್ವ ಕುರಿತು ಎಲ್ಲಾ ಶರಣರು ತಿಳಿ ಹೇಳಿದ್ದಾರೆ ಹೀಗಾಗಿ ಬಸವ ತತ್ವದಲ್ಲಿ ಲಿಂಗದೀಕ್ಷಕ್ಕೆ ಪ್ರಥಮ ಆದ್ಯತೆಯಿದ್ದು, ಅದನ್ನು ಎಲ್ಲರೂ ಧರಿಸಿ ಪೂಜಿಸಬಹುದಾಗಿದೆ ಎಂದು ಅನುಭವ ಮಂಟಪದ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದೇವರು ನುಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ವಚನ ಸಾಹಿತ್ಯದಲ್ಲಿ ಸಾವಿರಾರು ಕಡೆ ಲಿಂಗದೀಕ್ಷೆ ಮಹತ್ವ ಕುರಿತು ಎಲ್ಲಾ ಶರಣರು ತಿಳಿ ಹೇಳಿದ್ದಾರೆ ಹೀಗಾಗಿ ಬಸವ ತತ್ವದಲ್ಲಿ ಲಿಂಗದೀಕ್ಷಕ್ಕೆ ಪ್ರಥಮ ಆದ್ಯತೆಯಿದ್ದು, ಅದನ್ನು ಎಲ್ಲರೂ ಧರಿಸಿ ಪೂಜಿಸಬಹುದಾಗಿದೆ ಎಂದು ಅನುಭವ ಮಂಟಪದ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದೇವರು ನುಡಿದರು.

ನಗರದ ಅಕ್ಕಮಹಾದೇವಿ ಗವಿ ಬಳಿಯ ಕಲ್ಯಾಣ ಮಂಟಪದಲ್ಲಿ ಲಿಂಗದೀಕ್ಷೆ ಅಂಗವಾಗಿ ಗಡ್ಡೆ ಪರಿವಾರದಿಂದ ಹಮ್ಮಿಕೊಂಡಿರುವ ಬೃಹತ್ ಬಸವ ತತ್ವ ಸಮಾವೇಶ ಹಾಗೂ ಶರಣ ಭಾರತ ಸಂಶೋಧನಾ ಕೇಂದ್ರ ಉದ್ಘಾಟನೆಯ ಸಾನಿಧ್ಯ ವಹಿಸಿ ಮಾತನಾಡಿ, ಲಿಂಗಪೂಜೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಬರುತ್ತದೆ ಅಲ್ಲದೇ ಏಕಾಗೃತೆ ಮತ್ತು ಜ್ಞಾಪಕ ಶಕ್ತಿ ವೃದ್ಧಿಸಿ ಆಯುಷ್ಯ ಅರೋಗ್ಯ ಹೆಚ್ಚುತ್ತದೆ ಎಂದು ಪಟ್ಟದೇವರು ತಿಳಿಸಿದರು.

ಧಾರವಾಡದ ಹಿರಿಯ ಶರಣ ಸಾಹಿತಿ ಅಶೋಕ ಬರಗುಂಡೆ ಮಾತನಾಡಿ, ವಚನಗಳ ಅಧ್ಯಯನ ಮತ್ತು ಲಿಂಗಾಂಗ ಯೋಗ ಪ್ರತಿಯೊಬ್ಬರೂ ಮಾಡಬೇಕು ವಿದ್ಯಾರ್ಥಿಗಳಿಗೆ, ಯುವಕರಿಗೆ ಈ ಕುರಿತು ತಿಳಿ ಹೇಳಬೇಕು ವಚನ ಸಾಹಿತ್ಯದ ಆಶಯದಂತೆ ಗಡ್ಡೆ ಪರಿವಾರದ ಗೃಹಸ್ಥರಿಂದಲೇ ಲಿಂಗದೀಕ್ಷೆ ಮಾಡಿರುವುದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದರು.

ಡಾ.ಗೊ.ರು.ಚೆನ್ನಬಸಪ್ಪನವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನಗಳ ಉಗಮ ಸ್ಥಾನ ಬಸವಕಲ್ಯಾಣದಲ್ಲಿ ವಚನ ಸಾಹಿತ್ಯ ಮತ್ತು ಶಿವಯೋಗ ಕುರಿತು ಸಂಶೋಧನೆ ಸಾಹಿತ್ಯ ರಚನೆ ಕೆಲಸ ಮಾಡುವ ಉದ್ದೇಶದೊಂದಿಗೆ ವಚನ ಪಿತಾಮಹ ಫ.ಗು ಹಳಕಟ್ಟಿ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಪ್ರೊ.ವಿಜಯ ಲಕ್ಷ್ಮೀ ಮತ್ತು ಗುರುನಾಥ ಗಡ್ಡೆಯವರ ಮಾರ್ಗದರ್ಶನದಲ್ಲಿ ಶರಣ ಭಾರತ ಸಂಶೋಧನಾ ಕೇಂದ್ರ ಕಾರ್ಯ ಮಾಡಲು ಮುಂದೆ ಬಂದಿದ್ದು ಸ್ವಾಗತಾರ್ಹವಾಗಿದೆ ಎಂದರು.

ಹಿರಿಯ ಸಾಹಿ ಡಾ.ರಂಜಾನ್‌ ದರ್ಗಾ ಬಸವೇಶ್ವರ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿ, ವಿಶ್ವಶಾಂತಿಗಾಗಿ ಬಸವ ತತ್ವದ ಕೊಡುಗೆ ಅಪಾರವಾಗಿದೆ ಇದನ್ನು ಜಗತ್ತಿಗೆ ಮುಟ್ಟಿಸಲು ಸರ್ಕಾರ, ಸಂಘ ಸಂಸ್ಥೆಗಳು, ಸಾಹಿತಿ ಹಾಗೂ ಬಸವ ತತ್ವದ ಅಭಿಮಾನಿಗಳು ಮುಂದೆ ಬರಬೇಕೆಂದರು.

ಡಾ.ವೀರಣ್ಣ ರಾಜೂರು ಬಸವ ದರ್ಶನ ಪಾಕೇಟ್‌ ಡೈರಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಹರಳಯ್ಯ ಗವಿಯ ಡಾ.ಅಕ್ಕ ಗಂಗಾಂಬಿಕೆ, ಬಸವೇಶ್ವರ ದೇವಸ್ಥಾನ ಪಂಚಕಮೀಟಿಯ ಪ್ರಮುಖರಾದ ಶಶಿಕಾಂತ ದುರ್ಗೆ, ಬಸವರಾಜ ಕೋರಕೆ, ಡಾ.ಜಿ.ಎಸ್ ಭುರಾಳೆ, ಅನೀಲ ರಗಟೆ, ವೀರಣ್ಣ ಹಲಶೇಟ್ಟಿ, ಸಾವಿತ್ರಿ ಸಲಗರ, ವೈಜಿನಾಥ ಕಾಮಶೇಟ್ಟಿ, ಶಿವರಾಜ ನರಶೇಟ್ಟಿ, ತಹಸೀನ ಅಲಿ ಜಮಾದಾರ, ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ವೀಠ್ಠಲರಾವ ಹೂಗಾರ, ಅಶೋಕ ಬರಗುಂಡೆ, ಜಿ.ಎಸ್. ಪಾಟೀಲ, ಸಿದ್ದು ಯಾಪಲಪರವಿ, ಲಿಂಗಾರತಿ ಅಲ್ಲಮಪ್ರಭು ನಾವದಗೇರೆ, ಬಂಡೇಪ್ಪ ಪಾಟೀಲ ತರನಳ್ಳಿ, ಅಕ್ಕಮಹಾದೇವಿ ಗವಿಯ ಶರಣೆಯರಾದ ಸತ್ಯಕ್ಕ ತಾಯಿ, ಕಲ್ಯಾಣಮ್ಮ, ಕಲ್ಯಾಣರಾವ ಮದರಗಾಂವಕರ, ಪ್ರೊ.ವಿಜಯಲಕ್ಷ್ಮೀ ಗಡ್ಡೆ, ಸಿದ್ದಲಿಂಗ, ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ಗೃಹಸ್ಥರಿಂದಲೇ ಲಿಂಗದೀಕ್ಷೆ ಪಡೆದಿರುವ ಡಾ.ಬಾಬಾ ಸಾಹೇಬ ಗಡ್ಡೆ ಮತ್ತು ಡಾ.ಅಕ್ಕಮಹಾದೇವಿ ಮಕ್ಕಳಾದ ವಚನ ಮತ್ತು ವಿವೇಕ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ